`ಜೊತೆ ಜೊತೆಯಲಿ’ ಕಿರುತೆರೆಯ ನಂಬರ್ ಒನ್ ಪಟ್ಟದಲ್ಲಿ ಮಿಂಚಿದ ಧಾರಾವಾಹಿಯಾಗಿದ್ದು, ಇತ್ತೀಚೆಗಷ್ಟೇ ನಾಯಕ ನಟ ಅನಿರುದ್ಧ ಕಿರಿಕ್‌ನಿಂದ ಸೀರಿಯಲ್ ತಂಡದಿಂದ ಔಟ್ ಆಗಿದ್ದರು. ಇದೀಗ ಅಭಿಮಾನಿಯೊಬ್ಬ ಅನಿರುದ್ಧ್ ವಾಪಸ್ ಆಗಬೇಕೆಂದು ಕೈ ಕುಯ್ದುಕೊಂಡಿದ್ದಾರೆ.
Advertisement
ಸಿನಿಮಾಗಿಂತ ಕಿರುತೆರೆ ಅನಿರುದ್ಧ್ ಕೆರಿಯರ್‌ಗೆ ಕೈ ಹಿಡಿದಿತ್ತು. ಜೊತೆ ಜೊತೆಯಲಿ ಸೀರಿಯಲ್ ಕಿರುತೆರೆಯಲ್ಲಿ ಕ್ಲಿಕ್ ಆಗಿದ್ದೆ ತಡ ಟಿವಿ ಲೋಕದಲ್ಲಿ ನಂಬರ್ ಒನ್ ಸ್ಟಾರ್ ಆಗಿ ಮಿಂಚಿದ್ದರು. ಅನಿರುದ್ಧ ಮತ್ತು ಮೇಘಾ ಶೆಟ್ಟಿ ಜೋಡಿ, ಪ್ರೇಕ್ಷಕರಿಗೆ ಮೋಡಿ ಮಾಡ್ತು. ವಯಸ್ಸಿನ ಅಂತರವಿರುವ ಆರ್ಯವರ್ಧನ್ ಮತ್ತು ಅನು ಕಥೆಯನ್ನ ಪ್ರೇಕ್ಷಕರು ಅಪ್ಪಿ ಒಪ್ಪಿಕೊಂಡಿದ್ದರು. ಹೀಗಿರುವಾಗ ಸೀರಿಯಲ್ ತಂಡ ಮತ್ತು ಅನಿರುದ್ಧ್ ನಡುವೆ ವೈಮನಸ್ಸು ಉಂಟಾಗಿ ತಂಡದಿಂದ ಕಿಕ್ ಔಟ್ ಆಗಿದ್ದಾರೆ. ಹೀಗಿರುವಾಗ ಅಭಿಮಾನಿಯೊಬ್ಬ, ಅನಿರುದ್ಧ್ ಮತ್ತೆ ಸೀರಿಯಲ್ ವಾಪಸ್ ಆಗಬೇಕೆಂದು ಕೈ ಕುಯ್ದುಕೊಂಡಿದ್ದಾರೆ.
Advertisement
Advertisement
ʻಜೊತೆ ಜೊತೆಯಲಿʼ ಧಾರಾವಾಹಿಯಿಂದ ಅನಿರುದ್ಧ್ ಔಟ್ ಆದ ಮೇಲೆ ವಾಹಿನಿಯವರು ಮತ್ತು ನಿರ್ದೇಶಕ ಆರೂರು ಜಗದೀಶ್ ಅವರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅನಿರುದ್ಧ್ ಮತ್ತೆ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳಲೇಬೇಕೆಂದು ಫ್ಯಾನ್ಸ್ ಏನೇನೋ ಹುಚ್ಚು ಸಾಹಸ ಮಾಡ್ತಿದ್ದಾರೆ. ಒರ್ವ ಅಭಿಮಾನಿಯೊಬ್ಬ ಕೈ ಕೊಯ್ದುಕೊಂಡಿದ್ದಾರೆ. ಅಭಿಮಾನಿಯ ವರ್ತನೆಗೆ ಅನಿರುದ್ಧ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಸೋನುಗೆ ಚೈತ್ರಾ ಚಪ್ಪಲಿ ಗಿಫ್ಟ್ ಕೊಟ್ಟಿದ್ಯಾಕೆ..?
Advertisement
ನಿಮ್ಮ ಅಭಿಮಾನಕ್ಕೆ ಚಿರಋಣಿ ಆದರೆ ಈ ರೀತಿ ಮಾಡಬೇಡಿ ಎಂದು ನಟ ಅನಿರುದ್ಧ್ ಮನವಿ ಮಾಡಿದ್ದಾರೆ. ʻಜೊತೆ ಜೊತೆಯಲಿʼ ಸೀರಿಯಲ್ ಮತ್ತು ಆರ್ಯವರ್ಧನ್ ಪಾತ್ರದ ಮೇಲಿರುವ ಕ್ರೇಜ್ ಫ್ಯಾನ್ಸ್‌ಗೆ ಕಮ್ಮಿಯಾಗಿಲ್ಲ.