CricketLatestLeading NewsMain PostSports

ಜೋಸ್ ಬಟ್ಲರ್‌ಗೆ ಮಿಸ್ ಆಯಿತು ವಿಶೇಷ ಸಾಧನೆ

ಮುಂಬೈ: 15ನೇ ಆವೃತ್ತಿ ಐಪಿಎಲ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆದರೆ ಫೈನಲ್ ಪಂದ್ಯ ಸೋತ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ವಿಶೇಷ ಸಾಧನೆಯೊಂದರಿಂದ ವಂಚಿರಾಗಿದ್ದಾರೆ.

ಜೋಸ್ ಬಟ್ಲರ್ 15ನೇ ಆವೃತ್ತಿ ಐಪಿಎಲ್‍ನಲ್ಲಿ ಪ್ರಚಂಡ ಫಾರ್ಮ್‍ನಲ್ಲಿದ್ದರು. ಆಡಿದ 17 ಪಂದ್ಯಗಳಲ್ಲಿ 4 ಶತಕ 4 ಅರ್ಧಶತಕ ಸಿಡಿಸಿ ಬರೋಬ್ಬರಿ 863 ರನ್ ಚಚ್ಚಿ ಈ ಬಾರಿ ರಾಜಸ್ಥಾನ ತಂಡ ಫೈನಲ್‍ಗೆ ಎಂಟ್ರಿ ಕೊಡಲು ಮಹತ್ವದ ಪಾತ್ರ ವಹಿಸಿದ್ದರು. ಆದರೆ ಅವರಿಗೆ ಫೈನಲ್‍ನಲ್ಲಿ ಒಂದು ಮಹತ್ವದ ಸಾಧನೆಯೊಂದು ಜೆಸ್ಟ್ ಮಿಸ್ ಆಗಿದೆ. ಇದನ್ನೂ ಓದಿ: ಆಡಿದ್ದು ಡೆಲ್ಲಿ ಪರ – ಫೈನಲ್‍ನಲ್ಲಿ ಆ ಒಂದು ಕಾರಣಕ್ಕಾಗಿ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿದ್ರು ಚೇತನ್ ಸಕಾರಿಯಾ

ಈ ಹಿಂದೆ 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಚಾಂಪಿಯನ್ ಆದಾಗ ರಾಬಿನ್ ಉತ್ತಪ್ಪ 660 ರನ್ ಸಿಡಿಸಿ ಆರಂಜ್ ಕ್ಯಾಪ್ ಪಡೆದಿದ್ದರು. ಜೊತೆಗೆ ಅವರ ತಂಡ ಚಾಂಪಿಯನ್ ಆಗಿತ್ತು. ಆ ಬಳಿಕ 2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಋತುರಾಜ್ ಗಾಯಕ್ವಾಡ್ 635 ರನ್ ಹೊಡೆದು ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು, ಈ ವೇಳೆ ಚೆನ್ನೈ ತಂಡ ಚಾಂಪಿಯನ್ ಆಗಿತ್ತು. ಈ ಬಾರಿ ಜೋಸ್ ಬಟ್ಲರ್ 863 ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಆದರೆ ಅವರ ತಂಡ ಮಾತ್ರ ಫೈನಲ್‍ನಲ್ಲಿ ಸೋತು ರನ್ನರ್‌ಅಪ್‌ ಸ್ಥಾನಕ್ಕೆ ತೃಪಿ ಪಡೆದಿದೆ. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

ಈ ಮೂಲಕ ಬಟ್ಲರ್ ರಾಬಿನ್ ಉತ್ತಪ್ಪ ಮತ್ತು ಗಾಯಕ್ವಾಡ್ ಅವರ ರೀತಿಯ ವಿಶೇಷ ಸಾಧನೆಯಿಂದ ಬಟ್ಲರ್ ವಂಚಿರಾಗಿದ್ದಾರೆ. ಆದರೆ ಈ ಬಾರಿ ಬಟ್ಲರ್ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ.

Leave a Reply

Your email address will not be published.

Back to top button