ಅಮ್ಮಾನ್: ಛಲ ಇದ್ದರೆ ಏನನ್ನು ಬೇಕಾದರೂ ಗೆಲ್ಲಬಹುದು ಎಂಬುದಕ್ಕೆ 76 ವರ್ಷದ ವೃದ್ಧ ತನ್ನ ಪೈಲಟ್ ಆಗುವ ಕನಸನ್ನು ನೆರವೇರಿಸಿಕೊಂಡಿರುವುದೇ ಉದಾಹರಣೆಯಾಗಿದೆ. ಈ ಘಟನೆ ಜೋರ್ಡಾನ್ ನಲ್ಲಿ ನಡೆದಿದೆ.
ಜೋರ್ಡಾನ್ ನಿವಾಸಿ ಮುಹಮ್ಮದ್ ಮಲ್ಹಾಸ್ ಪೈಲಟ್ ಆಗುವ ಕನಸು ಕಂಡಿದ್ದರು. ಏನೇ ಬಂದರೂ ಛಲ ಬಿಡದ ಅವರು ತಮ್ಮ 76 ವರ್ಷ ವಯಸ್ಸಿನಲ್ಲಿ ನೆರವೇರಿಸಿಕೊಂಡಿದ್ದಾರೆ. ಆದರೆ ಈ ವಿಮಾನ ಆಕಾಶದ ಮೇಲೆ ಹಾರಾಡುವುದಿಲ್ಲ ಬದಲಿಗೆ ಕುಳಿತುಕೊಂಡು ವಿಮಾನದಲ್ಲಿ ಇರುವಂತೆ ಫೀಲ್ ಮಾಡಬಹುದು. ವಿಮಾನದ ರೀತಿಯಲ್ಲಿಯೇ ಕಾಕ್‍ಪಿಟ್ ಅನ್ನು ಮಲ್ಹಾಸ್ ತಮ್ಮ ನೆಲಮಾಳಿಗೆಯಲ್ಲಿ ನಿರ್ಮಿಸಿ ಆ ಮೂಲಕ ಮೋಡಗಳ ಮೇಲೆ ಮೇಲೇರುವ ಕನಸ್ಸನ್ನು ನೆರವೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪತ್ನಿಯ ಕತ್ತು ಸೀಳಿ ಕೊಂದ ಪತಿ
Advertisement
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಹಾಸ್, ಪ್ರಾಚೀನ ಕಾಲದಿಂದಲೂ, ಮನುಷ್ಯ ಆಕಾಶದಲ್ಲಿ ಪಕ್ಷಿಗಳನ್ನು ನೋಡುತ್ತಿದ್ದಾನೆ. ಅವನು ಸಹ ಮುಕ್ತವಾಗಿ ಹಾರುವ ಕನಸು ಕಾಣುತ್ತಿದ್ದಾನೆ. ಹುಡುಗನಾಗಿದ್ದಾಗ, ಮನುಷ್ಯ ಗಾಳಿಪಟವನ್ನು ಹಾರಿಸಿ ಆನಂದಿಸುತ್ತಿದ್ದನು. ಕಾಗದದಿಂದ ಮಾಡಿದ ಎಷ್ಟೋ ವಸ್ತುಗಳು ಹೇಗೆ ಎತ್ತರಕ್ಕೆ ಏರುತ್ತದೆ ಎಂದು ಆಶ್ಚರ್ಯ ಪಡುತ್ತಾನೆ ಎಂದು ಬಾಲ್ಯದಲ್ಲಿ ಮನುಷ್ಯನಿಗೆ ಕಾಡುವ ಸಂಗತಿಗಳನ್ನು ಹೇಳಿದರು.
Advertisement
ಆಗಿನಿಂದಲೂ ನನ್ನಲ್ಲಿ ಹಾರಾಟದ ಬಯಕೆ ಮತ್ತು ಪ್ರೀತಿ ಗೀಳಾಗಿಸಲು ಪ್ರಾರಂಭಿಸಿತು. ನನ್ನ ಮನಸ್ಸು ಯಾವಾಗಲೂ ಆಕಾಶದ ಮೇಲೆ ಹಾರಾಡಬೇಕು ಎಂದು ಹೇಳುತ್ತಿತ್ತು. ಬಾಲ್ಯದಿಂದಲೂ ನನಗೆ ಪೈಲಟ್ ಆಗ ಬೇಕು ಎಂದು ಕನಸು ಕಡೆ ಆದರೆ ಅದು ನೆರವೇರಲಿಲ್ಲ. ಆದರೆ ಈ ಮೂಲಕ ನೆರವೇರಿಸಿಕೊಂಡಿದ್ದೇನೆ ಎಂದು ತಿಳಿಸಿದರು.
Advertisement
ವೃತ್ತಿಜೀವದಲ್ಲಿ ವೈದ್ಯರಾಗದ್ದ ಮಲ್ಹಾಸ್ ಅವರು ನಿವೃತ್ತಿ ಹೊಂದಿದ ನಂತರ ತಮ್ಮ ಜೀವಿತಾವಧಿಯಲ್ಲಿ ಹೊಸ ಉತ್ಸಾಹವನ್ನು ತೆಗೆದುಕೊಂಡಿದ್ದಾರೆ. ಮಲ್ಹಾಸ್ ಅವರು ಪೈಲಟ್ ಆಗುವ ಕನಸನ್ನು ಕೈಬಿಡದೇ ಬೋಯಿಂಗ್ 737-800 ನ ಕಾಕ್‍ಪಿಟ್‍ನ ಪ್ರತಿರೂಪವಾದ ಫ್ಲೈಟ್ ಸಿಮ್ಯುಲೇಟರ್‍ನಲ್ಲಿ ಕುಳಿತು ಮೂರು ವರ್ಷಗಳ ಕಾಲ ಸ್ಕ್ಯ್ರಾಪ್ ಮತ್ತು ಸೆಕೆಂಡ್‍ಹ್ಯಾಂಡ್ ವಸ್ತುಗಳಿಂದ ಕಾಕ್‍ಪಿಟ್ ಅನ್ನು ನಿರ್ಮಿಸಿದ್ದಾರೆ.
ಮಲ್ಹಾಸ್ ಅವರು ಈ ಎಲ್ಲ ಭಾಗಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಖರೀದಿಸಲಾಗಿದೆ. ಕಾಕ್‍ಪಿಟ್ ನಲ್ಲಿ ಅಳವಡಿಸಲಾದ ಕುರ್ಚಿಗಳು ಮೂಲತಃ ಬಸ್ಸಿನ ಭಾಗವಾಗಿದೆ. ಈ ಕಾಕ್‍ಪಿಟ್ ನಲ್ಲಿ ಪರದೆ ಮೇಲೆ ಮೋಡಗಳು ಮತ್ತು ಆಕಾಶ, ನದಿಗಳು, ಕಾಡುಗಳು ಮತ್ತು ಮರುಭೂಮಿಗಳ ಚಿತ್ರಗಳನ್ನು ತೋರಿಸುತ್ತವೆ. ಅದು ಅಲ್ಲದೇ ಹೊರಗಿನ ಹವಾಮಾನ ಹೇಗಿದೆ ಎಂಬುದನ್ನು ಕುಳಿತುಕೊಂಡೆ ಅವರು ಫೀಲ್ ಸಹ ಮಾಡಬಹುದು.
ಎಲೆಕ್ಟ್ರಾನಿಕ್ ಎಂಜಿನಿಯರ್ ಸ್ನೇಹಿತರ ಸಹಾಯದಿಂದ ಈ ವಿಮಾನವನ್ನು ನಿರ್ಮಿಸಿದ್ದು, ಸುಮಾರು ಆರು ಸಾವಿರ ದಿನಾರ್‌ಗಳು(1,63,00,000 ರೂ.) ಗಳಲ್ಲಿ ನಿರ್ಮಿಸಲಾಗಿದೆ. ಈ ವಿಮಾನವನ್ನು ನಿರ್ಮಿಸಲು ಸುಮಾರು ಮೂರು ವರ್ಷಗಳ ಕಾಲ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ
ಮಲ್ಹಾಸ್ ಅವರ ಸ್ನೇಹಿತ ಅಹ್ಮದ್ ಫೇರ್ಸ್, 25 ಸ್ವಿಚ್‍ಗಳು ಮತ್ತು ಸೂಚಕಗಳನ್ನು ಸ್ಥಾಪಿಸಲು ಸಹಾಯ ಮಾಡಿದರು. ಈ ಮೂಲಕ ಅವರು ನಿಜವಾದ ವಿಮಾನದಲ್ಲಿ ಕುಳಿತುಕೊಂಡು ಹಾರುತ್ತಿರುವಂತೆ ಕಾಣುತ್ತದೆ. ಈ ಪ್ರಯತ್ನಕ್ಕೆ ಮಲ್ಹಾಸ್ ಅವರ ಹೆಂಡತಿ ಸಹ ಸಹಕರಿಸುತ್ತಿದ್ದರು.
ಮಲ್ಹಾಸ್ ಅವರು 1969 ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಆಸ್ಪತ್ರೆ ನಿರ್ವಹಣೆಯಲ್ಲಿ ಪದವಿ ಪಡೆದರು. ಅವರ ಕುಟುಂಬವು ಸ್ಥಾಪಿಸಿದ ಅಮ್ಮಾನ್ ಆಸ್ಪತ್ರೆಯಲ್ಲಿ ಅವರ ತಂದೆಯೊಂದಿಗೆ ಕೆಲಸ ಮಾಡಲು ಹೋದರು. ಆದರೆ ಮಲ್ಹಾಸ್ ಅವರು ಮಾತ್ರ ತಮ್ಮ ಕನಸುಗಳನ್ನು ಮರೆಯಲು ಸಾಧ್ಯವಾಗಲೇ ಇಲ್ಲ. ಈ ಹಿನ್ನೆಲೆ ಅವರು ವಿಮಾನಯಾನ, ಏರ್‍ಕ್ರಾಫ್ಟ್ ಎಂಜಿನಿಯರಿಂಗ್ ಮತ್ತು ಹಾರಾಟವನ್ನು ಕಲಿಯಲು ಮಾರ್ಗದರ್ಶಿಗಳನ್ನು ಸಂಪರ್ಕಿಸಿ ತಮ್ಮ ಕನಸನ್ನು ನೆರವೇರಿಸಿಕೊಂಡಿದ್ದಾರೆ.