DistrictsKarnatakaLatestMain PostRaichur

ರಾಯಚೂರಿನಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಪೊಲೀಸರ ಜಂಟಿ ಸಭೆ

ರಾಯಚೂರು: ಗಡಿರಾಜ್ಯಗಳ ಪ್ರಕರಣಗಳ ಕುರಿತು ಚರ್ಚಿಸಲು ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಪೊಲೀಸರು ಜಂಟಿ ಸಭೆ ನಡೆಸಿದರು.

ಸಭೆಯಲ್ಲಿ ರಾಜ್ಯದ, ಆಂಧ್ರಪ್ರದೇಶ, ತೆಲಂಗಾಣದ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಈವರೆಗೆ ಪತ್ತೆಯಾಗದೇ ಇರುವ ಪ್ರಕರಣಗಳ ಬಗ್ಗೆ ಚರ್ಚಿಸಲಾಯಿತು. ನಾಪತ್ತೆ, ದರೋಡೆ, ಕಳ್ಳತನ, ಕೊಲೆ, ಡ್ರಗ್ಸ್, ಮಾನವ ಕಳ್ಳಸಾಗಣೆ ಸೇರಿ ವಿವಿಧ ಕೇಸ್‍ಗಳ ಪರಿಶೀಲನೆ ನಡೆಯಿತು.

ಮೂರು ರಾಜ್ಯಗಳಲ್ಲಿ ಪತ್ತೆಯಾದ ಅಪರಿಚಿತ ಮೃತದೇಹಗಳು, ಸಾಕ್ಷ್ಯಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಭೇದಿಸಲಾಗದ ಪ್ರಕರಣಗಳ ಸಾಕ್ಷ್ಯಗಳು, ದಾಖಲೆಗಳ ಬಗ್ಗೆ ಚರ್ಚೆ ಮಾಡಲಾಯಿತು. ನಗರದ ಡಿವೈಎಸ್‍ಪಿ ವೆಂಕಟೇಶ್, ತೆಲಂಗಾಣದ ನಾರಾಯಣಪುರ ಡಿವೈಎಸ್‍ಪಿ ವೆಂಕಟೇಶ್ ನೇತೃತ್ವದಲ್ಲಿ ಸಭೆ ನಡೆದಿದೆ.

Leave a Reply

Your email address will not be published.

Back to top button