Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿ; ಭಾರತದ ನಿಲುವು ಸ್ಪಷ್ಟಪಡಿಸಿದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷಗಳ ನಿಯೋಗ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿ; ಭಾರತದ ನಿಲುವು ಸ್ಪಷ್ಟಪಡಿಸಿದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷಗಳ ನಿಯೋಗ

Latest

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿ; ಭಾರತದ ನಿಲುವು ಸ್ಪಷ್ಟಪಡಿಸಿದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷಗಳ ನಿಯೋಗ

Public TV
Last updated: May 23, 2025 11:16 pm
Public TV
Share
2 Min Read
all party delegations to russia 1
SHARE

ರಷ್ಯಾ: ಭಯೋತ್ಪಾದನೆ ಬೆಂಬಲಿಸುತ್ತಿರುವ ಪಾಕಿಸ್ತಾನದ (Pakistan) ನಿಜ ಬಣ್ಣ ಬಯಲು ಮಾಡಲು ರಷ್ಯಾಕ್ಕೆ ತೆರಳಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ (Capt. Brijesh Chowta) ಅವರನ್ನು ಒಳಗೊಂಡ ಸಂಸದೆ ಕನಿಮೋಳ್ ನೇತೃತ್ವದ ಸರ್ವಪಕ್ಷಗಳ ನಿಯೋಗವು (All Party Delegations) ಇಂದು ಹಲವು ಕಡೆ ಉನ್ನತ ಮಟ್ಟದ ಸಭೆ, ವೇದಿಕೆಗಳಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದೆ.

all party delegations to russia 3

ರಷ್ಯಾಕ್ಕೆ (Russia) ಆಗಮಿಸಿದ ಐವರು ಸಂಸದರನ್ನು ಒಳಗೊಂಡ ಈ ನಿಯೋಗವನ್ನು ಅಲ್ಲಿನ ಭಾರತೀಯ ರಾಯಭಾರಿ ಅಧಿಕಾರಿಗಳು ಬರಮಾಡಿಕೊಂಡಿದ್ದರು. ನಂತರ ರಷ್ಯಾದಲ್ಲಿನ ಭಾರತದ ರಾಯಭಾರಿ ವಿನಯ್ ಕುಮಾರ್ ಅವರು ಸರ್ವಪಕ್ಷ ಸಂಸದೀಯ ನಿಯೋಗದ ಜೊತೆಗೆ ಭಾರತ-ರಷ್ಯಾ ಸಂಬಂಧಗಳ ವಿವಿಧ ಅಂಶಗಳ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡರು.ಇದನ್ನೂ ಓದಿ:ತಾಳಿ ಕಟ್ಟುವಾಗಲೇ ಮದುವೆ ಬೇಡವೆಂದ ವಧು ತಾನು ಪ್ರೀತಿಸಿದ ಯುವಕನ ಜೊತೆ ವಿವಾಹ

ಇದಾದ ಬಳಿಕ ಸರ್ವಪಕ್ಷಗಳ ನಿಯೋಗವು ಮೊದಲು ರಷ್ಯಾದ ಫೆಡರೇಶನ್ ಕೌನ್ಸಿಲ್‌ನ ಅಂತಾರಾಷ್ಟ್ರೀಯ ವ್ಯವಹಾರಗಳ ಸಮಿತಿ ಉಪಾಧ್ಯಕ್ಷ ಆಂಡ್ರೆ ಡೆನಿಸೋವ್ ಮತ್ತು ಇತರ ಸೆನೆಟರ್‌ಗಳೊಂದಿಗೆ ಸಭೆ ನಡೆಸಿದರು. ಈ ಮೂಲಕ ಭಯೋತ್ಪಾದನೆ ಹಾಗೂ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ವಿರುದ್ಧದ ಭಾರತದ ದಿಟ್ಟ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ಜೊತೆಗೆ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ್ದ ಆ ಭೀಕರ ದಾಳಿ ಹಾಗೂ ಅದಕ್ಕೆ ಭಾರತವು ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ `ಆಪರೇಷನ್ ಸಿಂಧೂರ’ದ ಯಶಸ್ವಿನ ಬಗ್ಗೆಯೂ ತಿಳಿಸಿದೆ. ಅಲ್ಲದೆ ಭಯೋತ್ಪಾದನೆ ವಿರುದ್ಧದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಸ್ಪಷ್ಟ ಸಂದೇಶ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ.

all party delegations to russia 2

ಬಳಿಕ ಶುಕ್ರವಾರ ಮಧ್ಯಾಹ್ನ ಭಾರತದ ನಿಯೋಗವು ಸ್ಟೇಟ್ ಡುಮಾಕ್ಕೆ ಭೇಟಿ ನೀಡಿದ್ದು, ಅಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷ ಲಿಯೋನಿಡ್ ಸ್ಲಟ್ಸ್ಕಿ ಹಾಗೂ ಸದಸ್ಯರನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಿದ್ದಾರೆ. ಈ ಭೇಟಿಯ ನಂತರ ಸರ್ವಪಕ್ಷಗಳ ನಿಯೋಗವು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪವಿದೇಶಾಂಗ ಸಚಿವ ಆಂಡ್ರಿ ರುಡೆನ್ಕೊ ಅವರನ್ನು ಭೇಟಿ ಮಾಡಿ, ಪಾಕಿಸ್ತಾನವು ಹಲವು ದಶಕಗಳಿಂದ ಯಾವ ರೀತಿ ಭಯೋತ್ಪಾದನೆಯನ್ನು ಸೃಷ್ಟಿಸಿ ಉಗ್ರರನ್ನು ಪೋಷಿಸುತ್ತಿದೆ ಎಂಬುದನ್ನು ಸವಿವರವಾಗಿ ಮನವರಿಕೆ ಮಾಡಿಕೊಟ್ಟಿದೆ. ಇದಾದ ಬಳಿಕ ಸಂಸದರ ನಿಯೋಗವು ರಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ರಾಟೆಜಿಕ್ ಸ್ಟಡೀಸ್‌ನ ಮಿಖೈಲ್ ಫ್ರೆಡ್ಕೋವ್ ಅವರನ್ನು ಭೇಟಿ ಮಾಡಿ, ಭಯೋತ್ಪಾದನೆ ವಿರುದ್ಧ ಭಾರತದ ನಿಲುವುಗಳ ಬಗ್ಗೆ ವಿಚಾರ ವಿನಿಮಯ ಮಾಡಿದೆ.

all party delegations to russiaರಷ್ಯಾದ ಮಹತ್ವದ ವೇದಿಕೆಗಳಲ್ಲಿ ಭಯೋತ್ಪಾದನೆ ಹಾಗೂ ಪಾಕಿಸ್ತಾನ ಸೃಷ್ಟಿಸುತ್ತಿರುವ ಉಗ್ರರನ್ನು ಮಟ್ಟ ಹಾಕುವ ಹೋರಾಟದಲ್ಲಿ ವಿಶ್ವ ಸಮುದಾಯಗಳು ಒಂದಾಗಬೇಕು ಎನ್ನುವ ಕೋರಿಕೆಯನ್ನು ಭಾರತವು ರಷ್ಯಾದ ಎಲ್ಲ ವೇದಿಕೆಗಳ ಮುಂದಿಟ್ಟಿದೆ. ಇದಕ್ಕೆ ಪೂರಕವಾಗಿ ರಷ್ಯಾದ ಹಲವು ಚಿಂತಕರು ಹಾಗೂ ವಿವಿಧ ಕ್ಷೇತ್ರಗಳ ಪರಿಣಿತರನ್ನು ಭೇಟಿ ಮಾಡಿ, ಚರ್ಚೆ ನಡೆಸಿದೆ.

all party delegations to russia 3

ಶನಿವಾರದಂದು ಸರ್ವಪಕ್ಷಗಳ ನಿಯೋಗವು ಮಾಸ್ಕೋದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದು, ಬಳಿಕ ಸ್ಲೊವೇನಿಯಾ ದೇಶದತ್ತ ಪ್ರಯಾಣಿಸಲಿದೆ.ಇದನ್ನೂ ಓದಿ:ಅಭಿಷೇಕ್‌ ಶರ್ಮಾ ಹೊಡೆದ ಸಿಕ್ಸ್‌ಗೆ ಕಾರಿನ ಗ್ಲಾಸ್‌ ಪುಡಿ.. ಪುಡಿ.. – 5 ಲಕ್ಷ ನಷ್ಟ

TAGGED:All Party DelegationsCapt. Brijesh Chowtaindiapakistanrussiaಕ್ಯಾ.ಬ್ರಿಜೇಶ್‌ ಚೌಟಪಾಕಿಸ್ತಾನರಷ್ಯಾಸರ್ವಪಕ್ಷಗಳ ನಿಯೋಗ
Share This Article
Facebook Whatsapp Whatsapp Telegram

Cinema news

Wild Life Safari
ದುಬೈನಲ್ಲಿ ಬಿಡುಗಡೆ ಆಯ್ತು ವೈಲ್ಡ್ ಟೈಗರ್ ಸಫಾರಿ ಟೀಸರ್
Cinema Latest Sandalwood Top Stories
kicchana chappale ashwini gowda dhruvanth
Bigg Boss ಸೀಸನ್‌ 12ರ ಕೊನೆಯ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಅಶ್ವಿನಿ, ಧ್ರುವಂತ್‌
Cinema Latest Top Stories TV Shows
Monalisa Bhosle
ರೊಮ್ಯಾಂಟಿಕ್‌ ಸಾಂಗ್‌ನಲ್ಲಿ ಕುಂಭಮೇಳದ ನೀಲಿ ಕಂಗಳ ಚೆಲುವೆ – ದಿಲ್‌ ಕದ್ದ ಮೊನಾಲಿಸಾ!
Bollywood Cinema Latest National Top Stories
Niveditha Gowda
ಕಡಲ ಅಲೆಯಲ್ಲಿ ಗುಲಾಬಿ ದಳದಂತೆ ತೇಲಿದ ನಿವೇದಿತಾ!
Cinema Latest Sandalwood Top Stories

You Might Also Like

team india
Cricket

IND vs NZ 1st ODI: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ; 1-0 ಅಂತರದಲ್ಲಿ ಮುನ್ನಡೆ

Public TV
By Public TV
30 minutes ago
Bengaluru Ramamurthy Nagar Techie Death case
Bengaluru City

ಉಸಿರುಗಟ್ಟಿ ಟೆಕ್ಕಿ ಸಾವು ಕೇಸ್‌ಗೆ ಟ್ವಿಸ್ಟ್ – ಪ್ರೀತಿ ನಿರಾಕರಿಸಿದ್ದಕ್ಕೆ 18ರ ಯುವಕನಿಂದ ಹತ್ಯೆಯಾದ ಶರ್ಮಿಳಾ

Public TV
By Public TV
49 minutes ago
virat kohli
Cricket

28,000 ರನ್‌ ಗಳಿಸಿದ ವೇಗದ ಬ್ಯಾಟ್ಸ್‌ಮನ್ – ತೆಂಡೂಲ್ಕರ್‌ ದಾಖಲೆ ಮುರಿದ ಕೊಹ್ಲಿ

Public TV
By Public TV
2 hours ago
h.d.kumaraswamy
Bengaluru City

2ಎ ಪ್ರವರ್ಗಕ್ಕೆ ನಾಮಧಾರಿ ಒಕ್ಕಲಿಗರು: ಪ್ರಾಮಾಣಿಕ ಪ್ರಯತ್ನದ ಭರವಸೆ ಕೊಟ್ಟ ಹೆಚ್‌ಡಿಕೆ

Public TV
By Public TV
2 hours ago
R Ashok 3
Bengaluru City

ಗೆಜ್ಜಲಗೆರೆ ಗ್ರಾ.ಪಂ ಮದ್ದೂರು ನಗರಸಭೆಗೆ ಸೇರ್ಪಡೆ, ಆದೇಶವನ್ನು ಕೂಡಲೇ ರದ್ದು ಮಾಡಬೇಕು: ಆರ್.ಅಶೋಕ್

Public TV
By Public TV
3 hours ago
Shivalinge Gowda
Districts

ಸಿದ್ದರಾಮಯ್ಯ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ರೇವಣ್ಣಗೆ ಸವಾಲೆಸೆದ ಶಿವಲಿಂಗೇಗೌಡ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?