ಭೋಪಾಲ್: ಮಧ್ಯಪ್ರದೇಶದ (Madhya Pradesh) ಭೋಪಾಲ್‍ನ (Bhopal) ನರೇಲಾ ಅಸೆಂಬ್ಲಿ ಕ್ಷೇತ್ರದಲ್ಲಿ ಪಕ್ಷವನ್ನು ನೆಲೆಯೂರಿಸುವ ಸಲುವಾಗಿ ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ)ನ ನಾಯಕರೊಬ್ಬರು ಜನರಿಗೆ ಬಿರಿಯಾನಿ (Biriyani) ಮತ್ತು ಉಪಹಾರವನ್ನು ನೀಡುತ್ತಿದ್ದಾರೆ.
ಇತ್ತೀಚೆಗಷ್ಟೇ ನಡೆದ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಅಸಾದುದ್ದೀನ್ ಓವೈಸಿ (Asaduddin Owaisi) ನೇತೃತ್ವದ ಪಕ್ಷವು ರಾಜ್ಯದಲ್ಲಿ ಪಕ್ಷದಿಂದ 7 ಕಾರ್ಪೊರೇಟರ್‌ಗಳು ಜಯಗಳಿಸಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಆರೋಪ – ನಿರಂತರ ಅಪಘಾತದಿಂದ ರೊಚ್ಚಿಗೆದ್ದ ಗ್ರಾಮಸ್ಥರು
Advertisement
Advertisement
ಬಿಜೆಪಿಯಾಗಲಿ (BJP) ಅಥವಾ ಕಾಂಗ್ರೆಸ್ (Congress) ಆಗಲಿ ಅವರ ಪಕ್ಷದಲ್ಲಿ ಗೌರವ ಸಿಗದಿದ್ದರೆ, ಅವರನ್ನು ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ. ನಮ್ಮ ಪಕ್ಷಕ್ಕೆ ಸೇರಲು ಕಚೇರಿಗೆ ಬಂದಾಗ ಅವರಿಗೆ ಗೌರವದ ಸಂಕೇತವಾಗಿ ಬಿರಿಯಾನಿ ಅಥವಾ ಸಮೋಸಾ (Samosa) ಮತ್ತು ಚಹಾದಂತಹ ಉಪಹಾರವನ್ನು ನೀಡುತ್ತೇವೆ. ನಮ್ಮ ಮನೆಯಲ್ಲೂ ನಾವು ಅತಿಥಿಗಳಿಗೆ ಇದನ್ನೇ ನೀಡುತ್ತೇವೆ ಎಂದು ಎಐಎಂಐಎಂ ನಾಯಕ ಪೀರ್ಜಾದಾ ತೌಕೀರ್ ನಿಜಾಮಿ (Peerzada Tauqeer Nizami) ಹೇಳಿದ್ದಾರೆ.
Advertisement
Advertisement
ಹೊಸದಾಗಿ ಪಕ್ಷ ಸೇರಿಕೊಳ್ಳುವವರಿಗೆ ಹಾರ ಹಾಕಿ ಸಂಪ್ರದಾಯಿಕವಾಗಿ ಬರಮಾಡಿಕೊಂಡು, ಉಪಹಾರವನ್ನು ನೀಡುತ್ತೇವೆ. ಅವರು ಸರಿಯಾದ ಜಾಗಕ್ಕೆ ಬಂದಿದ್ದೇವೆ ಅಂತ ಅಂದುಕೊಂಡರೆ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೌನವೇಕೆ? – BJPಯಿಂದ ಸೇ-ಸಿದ್ದು ಪೋಸ್ಟರ್ ರಿಲೀಸ್
ಇಲ್ಲಿಯವರೆಗೆ ಸುಮಾರು 20,000ಕ್ಕೂ ಹೆಚ್ಚು ಮಂದಿ ಪಕ್ಷ ಸೇರಿದ್ದಾರೆ. ಇದೇ ಕ್ರಮವನ್ನು ದೀಪಾವಳಿ ನಂತರ ಭೋಪಾಲ್‍ನ ಇತರ ಅಸೆಂಬ್ಲಿ ಕ್ಷೇತ್ರಗಳಲ್ಲಿಯೂ ಅನುಸರಿಸಲಾಗುತ್ತದೆ ಎಂದು ತಿಳಿದ್ದಾರೆ. ಇದನ್ನೂ ಓದಿ: ಬುದ್ಧಿವಂತರು ಯಾವಾಗಲು ಏಕಾಂಗಿಯಾಗಿಯೇ ಕೆಲಸ ಮಾಡ್ತಾರೆ.. ಯಾಕೆ ಗೊತ್ತಾ?