ನಟಿ ಮತ್ತು ಮಾಜಿ ಪತ್ನಿ ಆದ ಅಂಬರ್ ಹರ್ಡ್ ವಿರುದ್ಧದ ಮಾನಹಾನಿ ಮೊಕದ್ದಮೆಯಲ್ಲಿ ಅಮೆರಿಕದ ಖ್ಯಾತ ಹಾಲಿವುಡ್ ನಟ ಜಾನಿ ಡೆಪ್ ಗೆ ನ್ಯಾಯಾಲಯದಲ್ಲಿ ಗೆಲುವು ಸಿಕ್ಕಿದೆ. ಇದೇ ಖುಷಿಯಲ್ಲಿ ತನ್ನ ಸ್ನೇಹಿತರೊಂದಿಗೆ ಭರ್ಜರಿ ಪಾರ್ಟಿ ಮಾಡಿದ್ದಾರೆ. ನಟ ಜಾನಿ ಡೆಪ್ ಪಾರ್ಟಿಗೆ 48 ಲಕ್ಷ ಖರ್ಚು ಮಾಡಿದ್ದಾರೆ.
Advertisement
ಮಾಜಿ ಪತ್ನಿ ನಟಿ ಅಂಬರ್ ಹರ್ಡ್ ಮಾನನಷ್ಟ ಮೊಕದ್ದಮೆ ವಿರುದ್ಧ ಗೆದ್ದಿರುವ ಜಾನಿ ಡೆಪ್ಗೆ 10.15 ಮಿಲಿಯನ್ ಡಾಲರ್ ದಂಡ ಪಾವತಿಸುವಂತೆ ಅಂಬರ್ ಹರ್ಡ್ ಗೆ ನ್ಯಾಯಾಲಯ ಆದೇಶಿಸಿದೆ. ಅಂಬರ್ ಹರ್ಡ್ ಮದುವೆಯ ಮೊದಲು ಮತ್ತು ನಂತರ ಆಕೆಯ ಮೇಲೆ ನಿಂದನೆ ಮಾಡಿದ ಆರೋಪ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ವಿಫಲವಾಗಿದ್ದು ಜಾನಿ ಡೆಪ್ ಗೆಲ್ಲುವಂತಾಯಿತು. ಈ ಹಿನ್ನೆಲೆ ತನ್ನ ಸ್ನೇಹಿತರೊಂದಿಗೆ ವಿಶೇಷ ಭೋಜನಕ್ಕೆ 48 ಲಕ್ಷ ಖರ್ಚು ಮಾಡಿ, ಸುದ್ದಿಯಲ್ಲಿದ್ದಾರೆ.
Advertisement
Advertisement
ನಟಿ ಅಂಬರ್ ಹರ್ಡ್ ವಿರುದ್ಧ ಗೆದ್ದಿರುವ ಖುಷಿಯಲ್ಲಿ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ಅತೀದೊಡ್ಡ ಭಾರತೀಯ ರೆಸ್ಟೋರೆಂಟ್ನಲ್ಲಿ ಕಾಕ್ಟೈಲ್ ಮತ್ತು ಡಿನ್ನರ್ ಪಾರ್ಟಿ ಅನ್ನು ಜಾನಿ ಡೆಪ್ ಮಾಡಿದ್ದರು. ಮಾಜಿ ಪತ್ನಿ ವಿರುದ್ಧ ಗೆದ್ದಿರುವ ಖುಷಿಯಲ್ಲಿ ಸುದ್ದಿಯಾಗಿದ್ರೆ, ಈಗ ಪಾರ್ಟಿಗೆ 48 ಲಕ್ಷ ಖರ್ಚು ಮಾಡಿ ಸುದ್ದಿಯಾಗಿದ್ದಾರೆ.