ಲೈಫ್ ಟು ಡೇ (Life to Day Movie) ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಮೂಡಿ ಬರ್ತಿರೋ ಮತ್ತೊಂದು ಟ್ರೆಂಡಿ ಸಬ್ಜೆಕ್ಟ್. ಪಕ್ಕಾ ಲವ್ ಸ್ಟೋರಿ ಸಿನಿಮಾ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗ್ತಿರುವ ಈ ಚಿತ್ರದ ತಮಿಳು ವರ್ಷನ್ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಧನಿಯಾಗಿದ್ದರು. ಇದೀಗ ಅದೇ ಹಾಡಿನ ಕನ್ನಡ ಅವತರಣಿಕೆ `ಸಿಕ್ಕರೇ, ಸಿಕ್ಕರೇ, ಒಳ್ಳೆ ಹುಡುಗ್ರು ಸಿಕ್ಕರೇ…’ ಹಾಡಿಗೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಚರ್ ಜೋಗಿ ಪ್ರೇಮ್ (Jogi Pream) ದನಿಗೂಡಿಸಿದ್ದಾರೆ.
ಶ್ರೀಧರ್ ವಿ ಸಂಭ್ರಮ್ (ridhar Sambhram) ಸಂಗೀತ ಸಂಯೋಜನೆ, ರಾಮ್ ನಾರಾಯಣ್ ಸಾಹಿತ್ಯವಿರೋ ಈ ಹಾಡನ್ನ ಪ್ರೇಮ್ಸ್ ಅನುಭವಿಸಿ ಹಾಡಿದ್ದಾರೆ. ಈ ಹಾಡು ಕೇಳಿದಾಗಲೇ ಇದು ಸೂಪರ್ ಹಿಟ್ ಆಗುತ್ತೆ ಎಂದ ಪ್ರೇಮ್, ಪ್ರೀತಿಯಿಂದ ಬಂದು ಹೊಸಬರ ಈ ಹೊಸ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ. ಕಾಂತ ಕನ್ನಲ್ಲಿ ನಿರ್ದೇಶನದ ಈ ಸಿನಿಮಾದಲ್ಲಿ ನಾಕನಾಗಿ ನಟಿಸಿದ್ದಾರೆ ಕಿರಣ್ ಆದಿತ್ಯ. ಇನ್ನು ಈ ಚಿತ್ರಕ್ಕೆ ಬಮಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ ಪ್ರದೀಪ್. ಇದನ್ನೂ ಓದಿ: ಹಿಂದೆ ಜಾಗ ಮಾರಾಟ ಮಾಡಿದಾಗ ಉಲ್ಲಂಘನೆಯಾಗಿರಲಿಲ್ಲ, ಈಗ ಹೇಗೆ ನಿಯಮ ಉಲ್ಲಂಘನೆಯಾಗುತ್ತೆ – ಬಾಲಣ್ಣನ ಪುತ್ರಿ ಸವಾಲು
ಲೈಫ್ ಟುಡೇ ಸಿನಿಮಾ ಈ ಜನರೇಷನ್ ಮೆಚ್ಚುವಂತಹ ಕಂಟೆಂಟ್ ಮತ್ತು ಮನೋರಂಜನೆ ಒಳಗೊಂಡಿದೆ. ಈ ಚಿತ್ರದಲ್ಲಿ ಕಿರಣ್ ಆದಿತ್ಯರಿಗೆ ನಾಯಕಿಯಾಗಿ ಲೇಖಚಂದ್ರ ಕಾಣಿಸಿಕೊಂಡಿದ್ದಾರೆ. ರಥರ್ವ, ತಬಲನಾಣಿ, ಅಪೂರ್ವ, ಕಾಕ್ರೋಚ್ ಸುಧಿ ಮತ್ತು ಜಗ್ಗಪ್ಪ ತಾರಾಗಣದಲ್ಲಿದ್ದಾರೆ. ಗುರುಪ್ರಸಾದ್ ಛಾಯಾಗ್ರಹಣ ಚಿತ್ರಕ್ಕಿದೆ. ಲೈಫ್ ಟುಡೇ ಸಿನಿಮಾಗೆ ಪ್ರೇಮ್ ಹಾಡಿದ ಹಾಡಿನ ವಿಷ್ಯದೊಂದಿಗೆ ಪ್ರಚಾರಕ್ಕೆ ಚಾಲನೆ ಕೊಟ್ಟಿರೋ ಚಿತ್ರತಂಡ ಇಲ್ಲಿಂದ, ಸಿನಿಮಾ ಬಗೆಗಿನ ವಿಶೇಷ ಮಾಹಿತಿಗಳನ್ನ ಒಂದೊಂದಾಗಿ ಹಂಚಿಕೊಳ್ಳೋದ್ರ ಜೊತೆಗೆ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳಲಿದೆಯಂತೆ. ಇದನ್ನೂ ಓದಿ: ಸೈಮಾ ಕಾರ್ಯಕ್ರಮದಲ್ಲಿ ಕನ್ನಡಿಗರಿಗೆ ಅವಮಾನ: ದುನಿಯಾ ವಿಜಯ್ ಕೆಂಡಾಮಂಡಲ