ಲಂಡನ್: ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ (Joe Root) ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಸದ್ಯ ಪಾಕ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡುತ್ತಿರುವ ರೂಟ್ ಮೊದಲ ಇನ್ನಿಂಗ್ಸ್‌ನಲ್ಲೇ ಅಮೋಘ ಶತಕ ಸಿಡಿಸಿದ್ದಾರೆ. 167 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 100 ರನ್ ಬಾರಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ಅತಿಹೆಚ್ಚು ರನ್ ಗಳಿಸಿದ ವಿಶ್ವದ 5ನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
Advertisement
Advertisement
ವಿಶ್ವದ 5ನೇ ಆಟಗಾರ:
ಸಕ್ರೀಯ ಆಟಗಾರನಾಗಿರುವ ಜೋ ರೂಟ್ 80 ರನ್ ಸಿಡಿಸುತ್ತಿದ್ದಂತೆ 12,473 ರನ್ ಪೂರೈಸಿದರು. ಈ ಮೂಲಕ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲಸ್ಟೈರ್ ಕುಕ್ ಅವರ 12,472 ರನ್‌ಗಳ ದಾಖಲೆ ಮುರಿದಿದರು. ಸದ್ಯ ಪಾಕ್ ವಿರುದ್ಧ 3ನೇ ದಿನದಾಟದಲ್ಲಿ ಅಜೇಯ 146 ರನ್ ಸಿಡಿಸಿರುವ ರೂಟ್ ಅತಿ ಶೀಘ್ರದಲ್ಲೇ ಭಾರತದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿಯುವ ವಿಶ್ವಾಸ ಮೂಡಿಸಿದ್ದಾರೆ.
Advertisement
Advertisement
ವಿಶ್ವದ ಟಾಪ್-5 ಟೆಸ್ಟ್ ಬ್ಯಾಟರ್ಸ್ ಇವರೇ…
* ಸಚಿನ್ ತೆಂಡೂಲ್ಕರ್ – 15,921 ರನ್
* ರಿಕಿ ಪಾಂಟಿಂಗ್ – 13,378 ರನ್
* ಜಾಕ್ ಕಾಲೀಸ್ – 13,289 ರನ್
* ರಾಹುಲ್ ದ್ರಾವಿಡ್ – 13,288 ರನ್
* ಜೋ ರೂಟ್ – 12,521 ರನ್
ಇಂಗ್ಲೆಂಡ್‌ನ ಟಾಪ್-2 ಟೆಸ್ಟ್ ಬ್ಯಾಟರ್
* ಜೋ ರೂಟ್ – 12,521 ರನ್
* ಆಲಸ್ಟೈರ್ ಕುಕ್ – 12,472 ರನ್