ರಾಂಚಿ: ಭಾರತದ (Team India) ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಜೋ ರೂಟ್ (Joe Root) ವಿಶೇಷ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿದ್ದಾರೆ.
ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿಯೂ ಫ್ಲಾಪ್ ಪ್ರದರ್ಶನ ತೋರಿದ್ದ ಜೋ ರೂಟ್ 4ನೇ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಮೊದಲ ದಿನದಾಟದಲ್ಲಿ 226 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 106 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 300 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ಭಾರತದ ವಿರುದ್ಧ 10 ಶತಕ ಸಿಡಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಜೊತೆಗೆ ಟೆಸ್ಟ್ ವೃತ್ತಿಬದುಕಿನ 31ನೇ ಟೆಸ್ಟ್ ಶತಕವೂ (Test Centuries) ಇದಾಗಿದೆ.
Advertisement
Advertisement
ಭಾರತದ ವಿರುದ್ಧ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಟಾಪ್-4 ಬ್ಯಾಟರ್ಸ್:
ಜೋ ರೂಟ್ – 10 (52 ಇನ್ನಿಂಗ್ಸ್)
ಸ್ಟೀವನ್ ಸ್ಮಿತ್ – 9 (37 ಇನ್ನಿಂಗ್ಸ್)
ರಿಕಿ ಪಾಂಟಿಂಗ್ – 8 (51 ಇನ್ನಿಂಗ್ಸ್)
ವಿವಿ ರಿಚರ್ಡ್ಸ್ – 8 (41 ಇನ್ನಿಂಗ್ಸ್)
Advertisement
Advertisement
ಕುಗ್ಗಿದ ಇಂಗ್ಲೆಂಡ್‌ಗೆ ರೂಟ್ ಶತಕದ ಬಲ:
ರಾಂಚಿಯ JSCA ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ 300 ರನ್‌ಗಳ ಸವಾಲಿನ ಗುರಿ ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಫೀಲ್ಡಿಂಗ್ ಮಾಡುವ ಅವಕಾಶವನ್ನು ಭಾರತಕ್ಕೆ ಬಿಟ್ಟುಕೊಟ್ಟಿತು. ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲಪಡೆ ಆರಂಭದಲ್ಲೇ 112 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಇದನ್ನೂ ಓದಿ: ನಲುಗಿದ ಆಂಗ್ಲ ಪಡೆಗೆ ರೂಟ್ ಶತಕದ ಬಲ – ಮೊದಲ ದಿನವೇ 300ರ ಗಡಿ ದಾಟಿದ ಇಂಗ್ಲೆಂಡ್
ನಂತರ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ರೂಟ್ ತಾಳ್ಮೆಯ ಆಟವಾಡಿ 226 ಎಸೆತಗಳಲ್ಲಿ 106 ಸಿಡಿಸಿ ಅಜೇಯರಾಗುಳಿದರು. ಬೆನ್ ಫೋಕ್ಸ್ 47 ರನ್ (126 ಎಸೆತ, 4 ಬೌಂಡರಿ, 1 ಸಿಕ್ಸರ್), ಓಲಿ ರಾಬಿನ್ಸನ್ 31 ರನ್‌ಗಳ ಕೊಡುಗೆ ನೀಡುವ ಮೂಲಕ ರೂಟ್‌ಗೆ ಸಾಥ್ ನೀಡಿದರು. ಪರಿಣಾಮ ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್ 7 ವಿಕೆಟ್ ಕಳೆದುಕೊಂಡು 302 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ಝಾಕ್ ಕ್ರಾವ್ಲಿ 42 ರನ್, ಬೆನ್ ಡಕೆಟ್ 11 ರನ್, ಜಾನಿ ಬೈರ್ಸ್ಟೋವ್ 38 ರನ್, ಬೆನ್ ಸ್ಟೋಕ್ಸ್ 3 ರನ್, ಟಾಮ್ ಹಾರ್ಟ್ಲಿ 13 ರನ್ ಗಳಿಸಿದರೆ, ಓಲಿ ಪೋಪ್ ಶೂನ್ಯ ಸುತ್ತಿದರು. ಹೆಚ್ಚುವರಿ 11 ರನ್ ತಂಡಕ್ಕೆ ಸೇರ್ಪಡೆಯಾಯಿತು. ಇದನ್ನೂ ಓದಿ: ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್ ಕದನ!
ಆಕಾಶ್ ದೀಪ್ ಬಿರುಸಿನ ದಾಳಿ:
ಇನ್ನೂ ಭಾರತದ ಪರ ಬಿರುಸಿನ ಬೌಲಿಂಗ್ ದಾಳಿ ನಡೆಸಿದ ಆಕಾಶ್ ದೀಪ್ ಪ್ರಮುಖ 3 ವಿಕೆಟ್ ಪಡೆದು ಇಂಗ್ಲೆಂಡ್ ತಂಡ ಆರ್ಭಟಕ್ಕೆ ಬ್ರೇಕ್ ಹಾಕಿದರು. ಇದರೊಂದಿಗೆ ಮೊಹಮ್ಮದ್ ಸಿರಾಜ್ 2 ವಿಕೆಟ್ ಹಾಗೂ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: 2024ರ ಐಪಿಎಲ್ ಟೂರ್ನಿಯಿಂದಲೇ ಶಮಿ ಔಟ್ – ಗುಜರಾತ್ ಟೈಟಾನ್ಸ್‌ಗೆ ಭಾರೀ ಆಘಾತ