ವಾಷಿಂಗ್ಟನ್: ಯುಎಸ್ ಅಧ್ಯಕ್ಷ (US President) ಜೋ ಬೈಡೆನ್ (Joe Biden) ಅವರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ. ರೋಗನಿರ್ಣಯದ ನಂತರ ಲಾಸ್ ವೇಗಾಸ್‌ಗೆ ಪ್ರಚಾರ ಪ್ರವಾಸವನ್ನು ಕಡಿತಗೊಳಿಸಿದ್ದಾರೆ.
ಶೀತ, ಕೆಮ್ಮು, ಅಸ್ವಸ್ಥತೆಯಿಂದ ಬೈಡೆನ್ ಬಳಲುತ್ತಿದ್ದಾರೆ. ಕೋವಿಡ್ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಬೈಡೆನ್, ನಾನು ಚೆನ್ನಾಗಿದ್ದೇನೆ ಎಂದು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಎನ್‌ಕೌಂಟರ್‌ಗೆ 12 ನಕ್ಸಲರು ಬಲಿ
ರೋಗನಿರ್ಣಯದ ಕಾರಣ ಬೈಡೆನ್ ಭಾಷಣ ರದ್ದುಗೊಳಿಸಿದ ನಂತರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ಯುಎಸ್ ಅಧ್ಯಕ್ಷರಿಗೆ ಕೋವಿಡ್ ಇರುವುದನ್ನು ಘೋಷಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ದಿನ ಸಮೀಪಿಸುತ್ತಿದೆ. ಪ್ರಚಾರ ಸಮಾವೇಶವೊಂದರಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲೆಗೆ ಯತ್ನ ನಡೆದಿತ್ತು. ದಾಳಿಯನ್ನು ಬೈಡೆನ್ ಖಂಡಿಸಿದ್ದರು. ಚುನಾವಣೆ ಹೊತ್ತಿನಲ್ಲಿ ಅಮೆರಿಕ ಅಧ್ಯಕ್ಷರಿಗೆ ಕೋವಿಡ್ ದೃಢಪಟ್ಟಿದೆ. ಇದನ್ನೂ ಓದಿ: ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್ – 13 ಭಾರತೀಯ ಸಿಬ್ಬಂದಿ ನಾಪತ್ತೆ