ತಿಂಗಳ ಅಂತ್ಯದಲ್ಲಿ ಸೌದಿಗೆ ಭೇಟಿ ನೀಡಲಿದ್ದಾರೆ ಬೈಡನ್

Public TV
1 Min Read
Joe Biden

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೂನ್ ತಿಂಗಳ ಅಂತ್ಯದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸೌದಿ ಅರೇಬಿಯಾ ತೈಲ ಉತ್ಪಾದನೆಯ ಹೆಚ್ಚಳಕ್ಕೆ ಸಮ್ಮತಿ ನೀಡಿ ಹಾಗೂ ಯುದ್ಧ ಪೀಡಿತ ಯೆಮನ್‌ನಲ್ಲಿ ತನ್ನ ಒಪ್ಪಂದವನ್ನು ವಿಸ್ತರಿಸಲು ಸಹಾಯ ಮಾಡುವುದಾಗಿ ಹೇಳಿದ ಬೆನ್ನಲ್ಲೇ ಬೈಡನ್ ಸೌದಿ ಅರೇಬಿಯಾ ಪ್ರವಾಸ ಕೈಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ, ಇನ್ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ: ಮೋಹನ್‌ ಭಾಗವತ್‌

joe biden

ಬೈಡನ್ ಮಧ್ಯಪ್ರಾಚ್ಯ ದೇಶದ ನಾಯಕರೊಡನೆ ಮಾತುಕತೆ ನಡೆಸಲು ಮುಂದಾಗುತ್ತಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಹೇಳಿಕೆ ನೀಡಿದ್ದಾರೆ. ಅವರು ಈ ತಿಂಗಳು ನ್ಯಾಟೋ ಶೃಂಗಸಭೆ, ಹಾಗೂ ಜರ್ಮನಿಯಲ್ಲಿ ಗ್ರೂಪ್ ಆಫ್ ಸೆವೆನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಯೋಜಿಸಿದ್ದಾರೆ. ಈ ವೇಳೆ ಇಸ್ರೇಲ್‌ಗೆ ಪ್ರಯಾಣಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಇದನ್ನೂ ಓದಿ: 2 ವರ್ಷದಿಂದ ಬಗೆಹರಿಯದ ಮಂಡ್ಯ ವ್ಯಕ್ತಿಯ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ ಕೊಟ್ಟ ಮೋದಿ

ಸೌದಿ ಅರೇಬಿಯಾ ನೇತೃತ್ವದ ಪ್ರಮುಖ ತೈಲ ಉತ್ಪಾದಕ ದೇಶಗಳು ಗುರುವಾರ ನಿರೀಕ್ಷಿತ ಉತ್ಪಾದನೆಗಿಂತ ಹೆಚ್ಚಿನ ಉತ್ಪಾದನೆಗೆ ಒಪ್ಪಿಕೊಂಡಿವೆ. ಉಕ್ರೇನ್-ರಷ್ಯಾ ಆಕ್ರಮಣದಿಂದಾಗಿ ಗಗನಕ್ಕೇರುತ್ತಿರುವ ಅನಿಲ ಬೆಲೆಗೆ ಸೌದಿ ಅರೇಬಿಯಾ ನಿರ್ಧಾರ ಪರಿಹಾರವಾಗುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *