ನವದೆಹಲಿ: ಇಸ್ರೇಲ್ (Isreal Under Attack) ಮೇಲೆ ದಾಳಿ ಮಾಡಿರುವ ಹಮಾಸ್ ಬಂಡುಕೋರರು ಶುದ್ಧ ದುಷ್ಟರು. ಹಮಾಸ್ ದಾಳಿಯಿಂದ ಪ್ಯಾಲೇಸ್ಟೈನ್ (Palestine) ಜನರು ತೊಂದರೆಗೀಡಾಗಿದ್ದು ಗಾಜಾಪಟ್ಟಿ ಸೃಷ್ಠಿಯಾಗಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸುವುದು ಆದ್ಯತೆಯಾಗಿದೆ ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ (Joe Baiden) ಹೇಳಿದ್ದಾರೆ.
ಫಿಲಡೆಲ್ಫಿಯಾದ ಶಿಪ್ಪಿಂಗ್ ಟರ್ಮಿನಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬೈಡನ್, ಹಮಾಸ್ (Hamas Terrorist) ದಾಳಿ ಭಯಂಕರವಾಗಿದೆ, ಕನಿಷ್ಠ 27 ಅಮೆರಿಕನ್ನರು ಸೇರಿದಂತೆ 1,000 ಕ್ಕೂ ಹೆಚ್ಚು ಮುಗ್ಧ ಜನರು ಜೀವಗಳನ್ನು ಕಳೆದುಕೊಂಡಿದ್ದಾರೆ. ನಾವು ಆರಂಭದಲ್ಲಿ ಹೇಳಿದಂತೆ ಯುನೈಟೆಡ್ ಸ್ಟೇಟ್ಸ್ ಇಸ್ರೇಲ್ನೊಂದಿಗೆ ನಿಂತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೃಹತ್ ದಾಳಿಯ ಮುನ್ಸೂಚನೆ ನೀಡಿದ ಇಸ್ರೇಲ್
ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸುವುದು ನಮ್ಮ ಆದ್ಯತೆಯಾಗಿದೆ. ಬಹುಪಾಲು ಪ್ಯಾಲೇಸ್ಟೀನಿಯನ್ನರು ಹಮಾಸ್‍ನ ಭಯಾನಕ ದಾಳಿಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಆದರೆ ಅದರ ಪರಿಣಾಮಗಳಿಂದ ಬಳಲುತ್ತಿದ್ದಾರೆ. ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಇಸ್ರೇಲ್, ಈಜಿಪ್ಟ್, ಜೋರ್ಡಾನ್ ಮತ್ತು ಇತರ ಅರಬ್ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯ ಸರ್ಕಾರಗಳೊಂದಿಗೆ ನೇರವಾಗಿ ಸಂವಹನ ನಡೆಸಲಾಗುತ್ತಿದೆ ಎಂದಿದ್ದಾರೆ.
ಒತ್ತೆಯಾಳಾಗಿದ್ದ ಅಮೆರಿಕನ್ನರನ್ನು ಕರೆತರುವ ಕೆಲಸ ಮಾಡಲಿದೆ. ಇಸ್ರೇಲ್ ಮತ್ತು ಪ್ರದೇಶದ ಸುತ್ತಮುತ್ತಲಿನ ನಮ್ಮ ಪಾಲುದಾರರೊಂದಿಗೆ ನಿಕಟ ಸಹಕಾರದೊಂದಿಗೆ ಹಮಾಸ್ ಬಂಡುಕೊರರು ಒತ್ತೆಯಾಳಾಗಿ ಒಟ್ಟುಕೊಂಡಿರುವ ಅಮೆರಿಕನ್ನರನ್ನು ಬಿಡುಗಡೆ ಮಾಡಲು ಕೆಲಸ ಮಾಡುತ್ತಿದ್ದೇವೆ. ಹಮಾಸ್ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಯುನೈಟೆಡ್ ಸ್ಟೇಟ್ಸ್ ಪ್ರಮುಖ ಜಾಗತಿಕ ರಾಜತಾಂತ್ರಿಕ ಚಾಲನೆಯನ್ನು ಪ್ರಾರಂಭಿಸಿದೆ ಎಂದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]