ವಾಷಿಂಗ್ಟನ್: ಇಸ್ರೇಲ್ (Israel) ಮೇಲಿನ ಹಮಾಸ್ (Hamas) ದಾಳಿ ದುಷ್ಟತನದಿಂದ ಕೂಡಿದೆ. ಇಸ್ರೇಲ್ ಅನ್ನು ನಿರ್ನಾಮ ಮಾಡುವುದು ಹಾಗೂ ಯಹೂದಿ ಜನರನ್ನು ಕೊಲ್ಲುವುದೇ ಹಮಾಸ್‌ನ ಉದ್ದೇಶವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಖಂಡಿಸಿದ್ದಾರೆ.
ಶ್ವೇತಭವನದಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಬೈಡನ್, ಇಸ್ರೇಲ್ ಹಾಗೂ ಹಮಾಸ್ ಸಂಘರ್ಷದಲ್ಲಿ ಇಲ್ಲಿಯವರೆಗೆ 14 ಜನ ಅಮೆರಿಕನ್ನರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ ಸುಮಾರು 1,000 ನಾಗರಿಕರ ಹತ್ಯೆಯಾಗಿದೆ. ಇಸ್ರೇಲ್‌ನಲ್ಲಿರುವ ಜನರು ಹಮಾಸ್ ಎಂಬ ಭಯೋತ್ಪಾದಕ ಸಂಘಟನೆಯ ರಕ್ತಸಿಕ್ತ ಕೈಗಳಿಂದ ಶುದ್ಧ ಕಲಬೆರಕೆಯಿಲ್ಲದ ದುಷ್ಟತನದ ಕರಾಳತೆಯ ಅನುಭವನ್ನು ಪಡೆದುಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇಸ್ರೇಲ್‌ಗೆ ಬೆಂಬಲ ನೀಡಲು ಹಾಗೂ ಪ್ಯಾಲೆಸ್ತೀನ್ ಉಗ್ರರ ಗುಂಪು ಹಮಾಸ್ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅಮೆರಿಕ ಜಾಗತಿಕವಾಗಿ ರಾಜತಾಂತ್ರಿಕ ಕ್ರಮವನ್ನು ಅನ್ನು ಪ್ರಾರಂಭಿಸಿದೆ. ಹಮಾಸ್ ಶನಿವಾರ ಇಸ್ರೇಲ್ ಮೇಲೆ ದಾಳಿ ಪ್ರಾರಂಭಿಸಿದ್ದು, ನೂರಾರು ಜನರನ್ನು ಕೊಂದಿದೆ. ಇದು ದಶಕದಲ್ಲಿಯೇ ಅತಿ ದೊಡ್ಡ ಹಿನ್ನಡೆಯಾಗಿದೆ. ಇಸ್ರೇಲ್ ಈ ದಾಳಿಗೆ ಪ್ರತಿಯಾಗಿ ಈಗಾಗಲೇ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಿದೆ ಹಾಗೂ 800ಕ್ಕೂ ಅಧಿಕ ಜನರನ್ನು ಕೊಂದಿದೆ. ಈ ಪ್ರದೇಶದಲ್ಲಿ ಅಮೆರಿಕ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸಿದೆ ಎಂದು ಬೈಡನ್ ತಿಳಿಸಿದರು.
ಇದು ಸಂಪೂರ್ಣ ದುಷ್ಟ ಕೃತ್ಯ. ಇಸ್ರೇಲ್‌ನಲ್ಲಿ 1,000 ಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆ ಮಾಡಲಾಗಿದೆ. ಅವರಲ್ಲಿ ಕನಿಷ್ಠ 14 ಅಮೆರಿಕನ್ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಒತ್ತೆಯಾಗಿ ಇಟ್ಟಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವ ಜನರ ಮೇಲೆ ದಾಳಿ ಮಾಡಿ ಹಮಾಸ್ ಕಗ್ಗೊಲೆ ಮಾಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: 5ನೇ ದಿನಕ್ಕೆ ಇಸ್ರೇಲ್, ಪ್ಯಾಲೇಸ್ಟೈನ್‌ಗಳ ಸಮರ – ಹಮಾಸ್, ಹಿಜ್ಬುಲ್ಲಾದಿಂದ ಏಕಕಾಲಕ್ಕೆ ರಾಕೆಟ್ ದಾಳಿ
ನಾವು ಈ ಸಂದರ್ಭದಲ್ಲಿ ಇಸ್ರೇಲ್ ಜೊತೆ ನಿಲ್ಲುತ್ತೇವೆ. ಇಸ್ರೇಲ್ ತನ್ನ ನಾಗರಿಕರನ್ನು ರಕ್ಷಿಸಿಕೊಳ್ಳಲು ಮತ್ತು ಈ ದಾಳಿಗೆ ಪ್ರತಿಕ್ರಿಯಿಸಲು ಅಗತ್ಯವಿರುರುವ ನೆರವನ್ನು ನಾವು ನೀಡುತ್ತೇವೆ. ಭಯೋತ್ಪಾದನೆಗೆ ಯಾವುದೇ ಸಮರ್ಥನೆ, ಯಾವುದೇ ರೀತಿಯ ಕ್ಷಮೆಯಿಲ್ಲ ಎಂದು ಬೈಡನ್ ಗುಡುಗಿದರು. ಇದನ್ನೂ ಓದಿ: ಇದ್ದಕ್ಕಿದ್ದಂತೆ ಮುಂದೆ ಚಲಿಸಿ, ಧಗಧಗನೆ ಹೊತ್ತಿಕೊಂಡ ಅಂಬುಲೆನ್ಸ್!
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]