ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅಫ್ಘಾನಿಸ್ತಾನದ ಮಾಜಿ ಪ್ರಧಾನಿ ಅಶ್ರಫ್ ಘನಿ ನಡುವಿನ 14 ನಿಮಿಷದ ಸಂಭಾಷಣೆಯ ಮಾಹಿತಿ ಹೊರ ಬಂದಿದೆ. ಕಾಬೂಲ್ ನಗರವನ್ನು ತಾಲಿಬಾನಿಗಳು ವಶಕ್ಕೆಪಡೆಯುವ 23 ದಿನ ಮೊದಲು ಈ ಮಾತುಕತೆ ನಡೆದಿತ್ತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
23 ಜುಲೈ 2021 ರಂದು ಘನಿ ಮತ್ತು ಬೈಡನ್ ನಡುವೆ ಫೋನ್ ಸಂಭಾಷಣೆ ನಡೆದಿತ್ತು. ಅಂದು ಜೋ ಬೈಡನ್ ತಾಲಿಬಾನಿಗಳನ್ನು ತಡೆಯುವ ಪ್ಲಾನ್ ನೀಡುವಂತೆ ಅಶ್ರಫ್ ಘನಿಗೆ ಸೂಚಿಸಿದ್ದರು. ನಾವು ಸಹಾಯ ಮಾಡಲು ಸಿದ್ಧರಿದ್ದು, ನಿಮ್ಮ ಯೋಜನೆಯ ರೂಪರೇಷಗಳನ್ನು ಮೊದಲು ತಿಳಿಸಬೇಕು ಎಂದು ಷರತ್ತು ಹಾಕಿದ್ದರು. ಜೊತೆಗೆ ತಾಲಿಬಾನಿಗಳ ವಿರುದ್ಧದ ನಡೆಯುವ ಹೋರಾಟ ಅಫ್ಘಾನಿಸ್ತಾನದ ಜನರಲ್ ಬಿಸ್ಮಿಲ್ಲಾಹ ನೇತೃತ್ವದಲ್ಲಿ ಮುನ್ನಡೆಯಬೇಕು ಎಂದು ಹೇಳಿದ್ದರು.
Advertisement
Advertisement
ತಾಲಿಬಾನಿಗಳನ್ನು ತಡೆಯಲು ಅಮೆರಿಕ ಸಂಪೂರ್ಣ ಸಹಾಯಕ್ಕೆ ಮುಂದಾಗಿತ್ತು ಎಂಬುವುದು ಸಂಭಾಷಣೆಯಲ್ಲಿ ತಿಳಿದು ಬಂದಿದೆ. ಅಫ್ಘಾನಿಸ್ತಾನದ ರಕ್ಷಣೆಗಾಗಿಯೇ ಅಮೆರಿಕ ಏರ್ ಸ್ಟ್ರೈಕ್ ನಡೆಸಿತ್ತು ಸಹ ಎಂದು ವರದಿಗಳು ಪ್ರಕಟವಾಗುತ್ತಿವೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ
Advertisement
Advertisement
ಇದೇ ಸಂಭಾಷಣೆಯಲ್ಲಿ ಅಶ್ರಫ್ ಘನಿ ಪಾಕಿಸ್ತಾನದ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ತಾಲಿಬಾನಿಗಳ ಸಪೋರ್ಟ್ ಗಾಗಿ ಪಾಕಿಸ್ತಾನ ತನ್ನ ದೇಶದ 10 ರಿಂದ 15 ಸಾವಿರ ಜನರನ್ನು ಅವರೊಂದಿಗೆ ಕಳುಹಿಸುತ್ತಿದೆ. ಅಫ್ಘಾನಿಸ್ತಾನದ ಹೋರಾಟದಲ್ಲಿ ಪಾಕ್ ಬೆಂಬಲ ಪಡೆದಿರುವ ತಾಲಿಬಾನಿಗಳು ಪ್ರಬಲವಾಗಿ ದಾಳಿ ಮಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು
ಜುಲೈ 23ರಂದು ಇಬ್ಬರು ನಾಯಕರು ನಡೆದಿದೆ ಎನ್ನಲಾದ ಫೋನ್ ಸಂಭಾಷಣೆಯ ಮಾಹಿತಿಯನ್ನು ನ್ಯೂಸ್ ಏಜೆನ್ಸಿ ಹಂಚಿಕೊಂಡಿದೆ. ಈ ವರದಿ ಬಗ್ಗೆ ಜೋ ಬೈಡನ್ ಅಥವಾ ಶ್ವೇತ ಭವನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇತ್ತ ಅಶ್ರಫ್ ಘನಿ ಸಹ ಈ ವರದಿ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆಗೊಳಿಸಿಲ್ಲ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ
ಆಗಸ್ಟ್ 15ರಂದು ಅಶ್ರಫ್ ಘನಿ ದೇಶ ತೊರೆದ ನಂತರ ಫುಲ್ ಆ್ಯಕ್ಟಿವ್ ಆದ ತಾಲಿಬಾನಿಗಳು ಇಡೀ ನಗರವನ್ನು ತಮ್ಮ ತೆಕ್ಕಗೆ ತೆಗೆದುಕೊಂಡರು. ಆಗಸ್ಟ್ 31ರ ರಾತ್ರಿ ಅಮೆರಿಕ ಸೇನೆ ಹಿಂದಿರುಗುತ್ತಿದ್ದಂತೆ ಸ್ವತಂತ್ರ ಸಿಕ್ಕಿತು ಎಂದು ಗುಂಡಿನ ಮಳೆಗೈದು ಸಂಭ್ರಮಾಚರಣೆ ಮಾಡಿದ್ದವು. ನಂತರ ಅಮೆರಿಕ ಸೇನೆಯ ಹೆಲಿಕಾಪ್ಟರ್ ಗೆ ಶವ ಕಟ್ಟಿ ಹಾರಾಟಿ ನಡೆಸಿ ವಿಕೃತಿಯನ್ನು ಮೆರದಿದ್ದವು. ಇದೀಗ ಭಾರತ ಸೇರಿದಂತೆ ಹಲವು ದೇಶಗಳ ಜೊತೆ ತಾಲಿಬಾನಿಗಳು ಔಪಚಾರಿಕ ಮಾತುಕತೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ