ಮುಗಿಲ್ ಪೇಟೆ ಸಿನಿಮಾದ ಮೂಲಕ ಪ್ರೇಕ್ಷಕರ ಮನೆಗೆದ್ದಿದ್ದ ನಿರ್ದೇಶಕ ಭರತ್ ಎಸ್ ನಾವುಂದ (Bharat Navunda) ಮತ್ತೊಂದು ಹೊಸ ಆಯಾಮದೊಂದಿಗೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ . ಮುಗಿಲ್ ಪೇಟೆ ಚಿತ್ರದ ಮೂಲಕ ಭರವಸೆ ನಿರ್ದೇಶಕರಾಗಿ ಹೊರಹೊಮ್ಮಿರುವ ಅವರೀಗ ಜೋಡಿಹಕ್ಕಿ ಸೀರಿಯಲ್ ಖ್ಯಾತಿಯ ತಾಂಡವ್ ರಾಮ್ (Tandav Ram) ಅವರನ್ನು ನಾಯಕನಟರಾಗಿ ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ.
ಅಡಚಣೆಗಾಗಿ ಕ್ಷಮಿಸಿ ಎಂಬ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಭರತ್ ಎಸ್ ನಾವುಂದ ಆ ಬಳಿಕ ಸುಂದರ ಪ್ರೇಮಕಥೆ ಜೊತೆಗೆ ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಮುಗಿಲ್ ಪೇಟೆ ಚಿತ್ರವನ್ನು ಪ್ರೇಕ್ಷಕ ಎದುರು ನಿಲ್ಲಿಸಿದರು. ಈ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು . ಭರತ್ ನಿರ್ದೇಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು . ಇದೀಗ ಅವರು ಮೂರನೇ ಸಿನಿಮಾಗೆ ಅಣಿಯಾಗಿದ್ದಾರೆ. ಇದನ್ನೂ ಓದಿ:ತಲಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಷೇಕ್, ಅವಿವಾ ದಂಪತಿ
ಜೋಡಿಹಕ್ಕಿ ಸೀರಿಯಲ್ ಮೂಲಕ ಮನೆ ಮಾತಾಗಿರುವ ತಾಂಡವ್ ರಾಮ್ ಭರತ್ ಜೊತೆ ಕೈ ಜೋಡಿಸಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಹುತಾರಂಗಣ ದೊಂದಿಗೆ ನಿರ್ಮಾಣವಾಗುತ್ತಿರುವ ಈ ಸಿನಿಮಾ. ಎ ಕ್ಯೂಬ್ ಫಿಲ್ಮಂಸ್ ಸಂಸ್ಥೆಯ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಲಿದೆ.
ಭರತ್ ಎಸ್ ನಾವುಂದ ಅವರ ಮೂರನೇ ಕನಸು ಇದಾಗಿದೆ. ಪಕ್ಕ ಫ್ಯಾಮಿಲಿ ಕಥಾಹಂದರದ ಸಿನಿಮಾ ಮಾಡಲು ಸಜ್ಜಾಗಿರುವ ಚಿತ್ರತಂಡ, ಶೀಘ್ರದಲ್ಲಿಯೇ ಮತ್ತೊಂದಷ್ಟು ಅಪ್ ಡೇಟ್ಸ್ ಜೊತೆಗೆ ನಿಮ್ಮ ಮುಂದೆ ಹಾಜರಾಗಲಿದೆ.
Web Stories