ಜೈಪುರ: ಯೂಟ್ಯೂಬ್ ಟ್ಯುಟೋರಿಯಲ್ (Youtube Tutorial) ನೋಡುತ್ತಾ ಇಸಿಜಿ ಪರೀಕ್ಷೆ ಮಾಡಿದ ಲ್ಯಾಬ್ ಅಟೆಂಡರ್ (Lab Attender) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ (Rajasthan) ಜೋಧ್‌ಪುರದ ಪಾವೋಟಾದಲ್ಲಿನ ಸ್ಯಾಟಲೈಟ್ ಆಸ್ಪತ್ರೆಯಲ್ಲಿ (Satellite Hospital) ಲ್ಯಾಬ್ ಅಟೆಂಡರ್ ತನ್ನ ಫೋನ್‌ನಲ್ಲಿ ಯೂಟ್ಯೂಬ್ ಟ್ಯುಟೋರಿಯಲ್ ವಿಡಿಯೋ ನೋಡಿದ ಬಳಿಕ ರೋಗಿಗೆ ಇಸಿಜಿ (Electrocardiogram) ಸ್ಕ್ಯಾನ್ ಮಾಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.ಇದನ್ನೂ ಓದಿ: ಕೊಚ್ಚಿಯಲ್ಲಿರುವಂತೆ ಮಂಗಳೂರಿನಲ್ಲೂ ವಾಟರ್ ಮೆಟ್ರೋ !
ಯೂಟ್ಯೂಬ್ ಟ್ಯುಟೋರಿಯಲ್ ನೋಡುತ್ತಾ ಸಿಬ್ಬಂದಿಯು ಇಸಿಜಿ ಮಾಡುವುದನ್ನು ಗಮನಿಸಿದ ರೋಗಿಯ ಕುಟುಂಬಸ್ಥರು, ಇಸಿಜಿ ಮಾಡಲು ಸರಿಯಾಗಿ ಗೊತ್ತಿರುವವರನ್ನು ಕರೆಸಿ ಮಾಡಿಸಿ ಎಂದು ಎಷ್ಟೇ ಒತ್ತಾಯಿಸಿದರೂ ಪರಿಗಣಿಸದೇ ಇಸಿಜಿ ಮಾಡುವುದನ್ನು ಮುಂದುವರೆಸಿದ್ದಾರೆ.
ಸ್ವತಃ ರೋಗಿ ಹಾಗೂ ರೋಗಿಯ ಜೊತೆಗಿರುವವರು ವಿಡಿಯೋ ರೆಕಾರ್ಡ್ ಮಾಡಿದ್ದು, ಲ್ಯಾಬ್ ಅಟೆಂಡರ್‌ಗೆ ನರ್ಸ್ ಇಸಿಜಿ ಮಾಡುವಂತೆ ಒತ್ತಾಯಿಸಿರುವುದು ತಿಳಿದುಬಂದಿದೆ. ಬಳಿಕ ಅಟೆಂಡರ್‌ಗೆ ಪ್ರಶ್ನಿಸಿದಾಗ ಇಸಿಜಿ ಮಾಡಲು ಬರುವುದಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಆದರೆ ದೀಪಾವಳಿಯ ಕಾರಣ ಆಸ್ಪತ್ರೆಯಲ್ಲಿ ಯಾವುದೇ ನೌಕರರು ಇರದ ಕಾರಣ ತಾನಾಗಿಯೇ ಇಸಿಜಿ ಮಾಡಲು ಪ್ರಯತ್ನಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಬಿಎಸ್ ಜೋಧಾ ಮಾತನಾಡಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ನಂತರ, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಚಿತಪಡಿಸಿದ್ದಾರೆ.ಇದನ್ನೂ ಓದಿ: ವಕ್ಫ್ ವಿರುದ್ಧದ ಹೋರಾಟದಲ್ಲಿ ಎಲ್ಲಾ ಸ್ವಾಮೀಜಿಗಳು ಕೈಜೋಡಿಸಬೇಕು: ಯತ್ನಾಳ್