– ಶ್ರೀನಗರ ಸರ್ಕಲ್‌ನಲ್ಲಿ ಹೈಡ್ರಾಮಾ
ಧಾರವಾಡ: ವಿದ್ಯಾರ್ಥಿಗಳಿಗೆ (Students) ಉದ್ಯೋಗ (Job) ನೀಡುವಂತೆ ಒತ್ತಾಯಿಸಿ ನಗರದ ಶ್ರೀನಗರ ಸರ್ಕಲ್‌ನಲ್ಲಿ (Srinagar Circle) ಉದ್ಯೋಗಾಕಾಂಕ್ಷಿಗಳು ಪ್ರತಿಭಟನಾ ರ‍್ಯಾಲಿ ನಡೆಸಿದ್ದು, ಹಲವು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಇಲಾಖೆಯಿಂದ ಪ್ರತಿಭಟನೆಗೆ ಅವಕಾಶ ನಿರಾಕರಣೆಯ ಮಧ್ಯೆಯೂ ಜನ ಸಾಮಾನ್ಯರ ವೇದಿಕೆ ಎಂಬ ಸಂಘಟನೆ ಪ್ರತಿಭಟನೆ ನಡೆಸಿದೆ. ಪ್ರತಿಭಟನೆ ರೂಪುರೇಷೆ ಸರಿಯಾಗಿ ತಿಳಿಸದೇ ಪ್ರತಿಭಟನೆ ಮಾಡದಂತೆ ಪೊಲೀಸ್ ಆಯುಕ್ತ ಎಚ್ಚರಿಕೆ ನೀಡಿದರೂ ಸಹ ಸಂಘಟನೆ ಪ್ರತಿಭಟನೆ ಮುಂದುವರಿಸಿದೆ. ನಗರದ ಶ್ರೀನಗರದಿಂದ ಪೊಲೀಸ್ ಅನುಮತಿ ಇಲ್ಲದೇ ಪ್ರತಿಭಟನೆ ಆರಂಭಗೊಂಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷಗಳು ಸೋಲಿನ ಹತಾಶೆ ಬಿಟ್ಟು ಬಲವಾದ ಸಮಸ್ಯೆಗಳನ್ನ ಎತ್ತಬೇಕು: ಪ್ರಧಾನಿ ಮೋದಿ ಸಲಹೆ
ಇನ್ನು ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ ಹಿನ್ನೆಲೆ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ಶ್ರೀನಗರ ಸರ್ಕಲ್‌ನಲ್ಲಿ ಭಾರೀ ಹೈಡ್ರಾಮ ಸೃಷ್ಟಿಯಾಗಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಆಗಮಿಸಿದ್ದಾರೆ. ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಸೇಬಿಗಿಂತ ದುಬಾರಿಯಾದ ಟೊಮೆಟೊ – ಬೆಲೆ ಕೇಳಿದ್ರೆ ಬೆಚ್ಚುತ್ತೀರ!


