ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ನಯ ವಂಚಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಾರ್ವತಿ ಬಂಧಿತ ವಂಚಕಿ. ಪಾರ್ವತಿ ಸಿಎ ವಿದ್ಯಾರ್ಥಿಗಳಿಗೆ ಹೆಚ್‍ಎಎಲ್‍ನಲ್ಲಿ ನನಗೆ ಸಾಕಷ್ಟು ಅಧಿಕಾರಿಗಳ ಪರಿಚಯವಿದೆ. ನಾನು ನಿಮಗೆ ಸರ್ಕಾರಿ ಕೆಲಸ ಉದ್ಯೋಗ ಕೊಡಿಸುತ್ತೇನೆ. ಈಗಾಗಲೇ ನನ್ನ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಮಗಳಿಗೆ ಹೆಚ್‍ಎಎಲ್‍ನಲ್ಲಿ ಕೆಲಸ ಕೊಡಿಸಿದ್ದು, ಅವರು ಡ್ಯೂಟಿಗೆ ಹೋಗುತ್ತಿದ್ದಾರೆಂದು ಆಕಾಂಕ್ಷಿಗಳಿಗೆ ನಂಬಿಸಿ ವಂಚಿಸಿದ್ದಾಳೆ. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್- ಬಿಜೆಪಿ ಎರಡೇ ಆಯ್ಕೆ, ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ: ಪ್ರೀತಂಗೌಡ
ಕೆಲಸ ಸಿಗಬೇಕು ಅಂದರೆ ಒಂದಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಿ ಪ್ರತಿಯೊಬ್ಬರ ಬಳಿ ಆರು ಲಕ್ಷ ಹಣ ಪಡೆದಿದ್ದಾಳೆ. ಎರಡು ತಿಂಗಳಲ್ಲಿ ನಿಮ್ಮ ಮನೆಗೆ ಆರ್ಡರ್ ಕಾಪಿ ಬರುತ್ತದೆ ಅಂತ ಹೇಳಿ ಕಳುಹಿಸಿದ್ದಾಳೆ. ಎರಡು ಇಪ್ಪತ್ತು ತಿಂಗಳಾದರು ಆರ್ಡರ್ ಕಾಪಿ ಮನೆಗೆ ಬರುವುದಿಲ್ಲ. ಹಾಗಾಗಿ ಪಾರ್ವತಿಯನ್ನು ಸಂಪರ್ಕಿಸಿ ಕೇಳಿದಾಗ ಆಕಾಂಕ್ಷಿಗಳಿಗೆ ಕೊರೊನಾ ಇದ್ದ ಕಾರಣ ಸ್ವಲ್ಪ ತಡವಾಗಿದೆ. ವಾರದಲ್ಲಿ ಆರ್ಡರ್ ಕಾಪಿ ಬರುತ್ತದೆ ಎಂದು ಕಳಿಸಿಕೊಟ್ಟಿದ್ದಾಳೆ. ವಾರ ಕಳೆದರೂ ಯಾವುದೇ ಸಂದೇಶ ಬರದ ಕಾರಣ ಆಕಾಂಕ್ಷಿಗಳು ಪಾರ್ವತಿ ಬಳಿ ಹೋಗಿ ನಮಗೆ ಕೆಲಸ ಬೇಡ ನಾವು ಕೊಟ್ಟಿರುವ ಹಣವನ್ನು ಮರಳಿ ಕೊಡುವಂತೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಭೇಟಿಯಾಗಿ ರುದ್ರಾಕ್ಷಿ ಮಾಲೆ ನೀಡಿದ ಅನುಪಮ್ ಖೇರ್
ಈ ವೇಳೆ ಆಕಾಂಕ್ಷಿಗಳ ಮಾತಿನಿಂದ ಕೋಪಗೊಂಡ ಪಾರ್ವತಿ ಆಕಾಂಕ್ಷಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ. ಪಾರ್ವತಿಗೆ ಹಣಕೊಟ್ಟಿದ್ದ ಆಕಾಂಕ್ಷಿಗಳು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಂಚಕಿ ಪಾರ್ವತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಪಾರ್ವತಿಯನ್ನು ವಿಚಾರಣೆಗೆ ಒಳಪಡಿಸಿದಾಗ ನಗರದ ಬೇರೆ, ಬೇರೆ ಕಡೆ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.