ಆರ್‌ಪಿಎಫ್‌ನಲ್ಲಿ ಮಹಿಳೆಯರಿಗೆ 50% ಮೀಸಲಾತಿ: ಸಚಿವ ಪಿಯೂಶ್ ಗೋಯಲ್

Public TV
1 Min Read
indian railways 2

ನವದೆಹಲಿ: ಭಾರತೀಯ ರೈಲ್ವೇಯಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ರೈಲ್ವೇ ಸುರಕ್ಷಾ ದಳ(ಆರ್‌ಪಿಎಫ್‌)ದ ಪರೀಕ್ಷೆಯಲ್ಲಿ 50% ಮಹಿಳೆಯರಿಗೆ ಮೀಸಲಾತಿ ನೀಡುವುದಾಗಿ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಪ್ರಕಟಿಸಿದ್ದಾರೆ.

ಶನಿವಾರ ಮಹಿಳಾ ಸಿಬ್ಬಂದಿ ಉತ್ತರ ಪ್ರದೇಶದ ಅಜಂಗಢ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣದಲ್ಲಿ ಗೂಡ್ಸ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಹಸಿರು ನಿಶಾನೆ ತೋರಿಸಿದ ಒಂದು ದಿನದ ನಂತರ ಪಿಯೂಶ್ ಗೋಯಲ್ ಅವರಿಂದ ಈ ಘೋಷಣೆ ಪ್ರಕಟವಾಗಿದೆ.

9500 -10000 ಆರ್‌ಪಿಎಫ್‌ ಹುದ್ದೆಗಳ ನೇಮಕಾತಿ ಮುಂದಿನ ದಿನಗಳಲ್ಲಿ ನಡೆಯಲಿದ್ದು ಮಹಿಳೆಯರಿಗೆ 50% ಮೀಸಲಾತಿ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಇದರ ಜೊತೆಯಲ್ಲೇ ಶೀಘ್ರವೇ ರೈಲ್ವೇಗೆ 13 ಸಾವಿರ ಉದ್ಯೋಗಿಗಳ ನೇಮಕವಾಗಲಿದೆ. ಈ ಉದ್ಯೋಗಳ ಸಂಬಂಧ ಸಚಿವಾಲಯ ಯಾವುದೇ ಸಂದರ್ಶನವನ್ನು ನಡೆಸುವುದಿಲ್ಲ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *