ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ(JNU) ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಗೃಹ ಸಚಿವ ಶಾ (Amit Shah) ವಿರುದ್ಧ ವಿದ್ಯಾರ್ಥಿಗಳು ವಿವಾದಾತ್ಮಕ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿ ಗಲಭೆಯ ಪ್ರಮುಖ ಆರೋಪಿಗಳಾದ ಉಮರ್ ಖಾಲಿದ್ (Umar Khalid) ಮತ್ತು ಶಾರ್ಜಿಲ್ ಇಮಾಮ್‌ಗೆ(Sharjeel Imam) ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ರಾತ್ರಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.
#BREAKING: 10 years after Pro-Terror Anti-India Slogans in JNU led to a Nationwide storm.
Fresh Anti-Modi/Shah Slogans inside JNU in presence of two senior JNUSU functionaries.
“Modi-Shah Ki Kabar Khudegi, JNU Ki Dharti Par”
No major action in 2016.
Will we see any action now? pic.twitter.com/eRrxZPWt7b
— Aditya Raj Kaul (@AdityaRajKaul) January 6, 2026
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜೆಎನ್‌ಯು ನೆಲದಲ್ಲಿ ಮೋದಿ, ಶಾ ಅವರ ಸಮಾಧಿ ಅಗೆಯುತ್ತೇವೆ (Modi Shah ki Kabar Khudegi, JNU Ki Dharti Par) ಎಂದು ಘೋಷಣೆ ಕೂಗಿದ್ದಾರೆ.
ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಪ್ರತಿಕ್ರಿಯಿಸಿ, ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ಈ ದೇಶದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪುಗಳ ವಿರುದ್ಧವೂ ಪ್ರತಿಭಟನೆಗಳು ನಡೆದರೆ, ಇನ್ನೇನು ಉಳಿಯುತ್ತದೆ ಎಂದು ಮಂಜಿಂದರ್ ಸಿಂಗ್ ಸಿರ್ಸಾ ಪ್ರಶ್ನಿಸಿದ್ದಾರೆ.
ಜೆಎನ್‌ಯು ಪ್ರತಿಭಟನಾಕಾರರನ್ನು ಪ್ರತ್ಯೇಕತಾವಾದಿಗಳುಎಂದು ಕರೆದ ಸಿರ್ಸಾ, ಈ ಜನರಿಗೆ ದೇಶ, ಸಂವಿಧಾನ ಅಥವಾ ಕಾನೂನಿನ ಬಗ್ಗೆ ಯಾವುದೇ ಗೌರವವಿಲ್ಲ. ಇವರು ಪ್ರತ್ಯೇಕತಾವಾದಿಗಳು. ಅವರು ದೇಶವನ್ನು ಒಡೆಯುವ ಬಗ್ಗೆ ಮಾತ್ರ ಮಾತನಾಡುತ್ತಾರೆ” ಎಂದು ಹೇಳಿದರು.

