ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (Jawaharlal Nehru University) ಕ್ಯಾಂಪಸ್‌ನಲ್ಲಿ ಮತ್ತೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭಾನುವಾರ (ಫೆ.22) ರಾತ್ರಿ ಎಡ ಮತ್ತು ಬಲಪಂಥೀಯ ವಿದ್ಯಾರ್ಥಿಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು, ಕಲ್ಲು ತೂರಾಟದಿಂದಾಗಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿ 1:30ರ ಸುಮಾರಿಗೆ ಈ ಘಟನೆ ನಡೆದಿದೆ. ಉಪಕುಲಪತಿ ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರ ರಾಜೀನಾಮೆ ಮತ್ತು ಕುಲಾಂತರಿ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕ್ಯಾಂಪಸ್‌ನ ಈಸ್ಟ್ ಗೇಟ್‌ನಲ್ಲಿ ಸಮಾನತೆ ಮೆರವಣಿಗೆಗೆ ಕರೆ ನೀಡಲಾಗಿತ್ತು. ಇದನ್ನೂ ಓದಿ: ನೇಪಾಳದಲ್ಲಿ ತ್ರಿಶೂಲಿ ನದಿಗೆ ಉರುಳಿದ ಬಸ್ – 18 ಮಂದಿ ಸಾವು
ಈ ಮೆರವಣಿಗೆಯಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಎಬಿವಿಪಿ (ABVP) ಸಂಘಟನೆ ವಿದ್ಯಾರ್ಥಿಗಳನ್ನು ಕಳುಹಿಸಿ ತಮ್ಮನ್ನು ಎದುರಿಸಲು ಅವಕಾಶ ಮಾಡಿಕೊಟ್ಟಿತು ಎಂದು ಎಡಪಂಥೀಯ ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಎಬಿವಿಪಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಎಡಪಂಥೀಯ ಸಂಘಟನೆಗಳು ಹಿಂಸೆಗೆ ಪ್ರಚೋದನೆ ನೀಡಿ, ಘಟನೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿವೆ ಎಂದು ಪ್ರತಿ ಆರೋಪಿಸಿದೆ. ಅಲ್ಲದೇ ಎಡಪಂಥೀಯ ಗುಂಪುಗಳಾದ ಆಲ್ ಇಂಡಿಯಾ ಸ್ಟುಡೆಂಟ್ಸ್ ಅಸೋಸಿಯೇಷನ್ ಸದಸ್ಯರು, ಎಬಿವಿಪಿ ಸಕ್ರಿಯ ಸದಸ್ಯರು ಹಾಗೂ ನಿರಾಯುಧ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದೆ.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬೂದಿ ಮುಚ್ಚಿದ ಕೆಂಡದಂತಿದೆ, ಯಾವುದೇ ಸಮಯದಲ್ಲಿ ಮತ್ತೆ ಗಲಭೆಯಾಗುವ ಸಾಧ್ಯತೆಗಳಿದೆ.ಇದನ್ನೂ ಓದಿ: ಚಿನ್ನದ ಬೆಲೆಯನ್ನು ಆರ್‌ಬಿಐ ಮೇಲ್ವಿಚಾರಣೆ ಮಾಡುತ್ತಿದೆ: ನಿರ್ಮಲಾ ಸೀತಾರಾಮನ್

