ವಿವಾದಿತ ವಿಷಯಗಳನ್ನಿಟ್ಟುಕೊಂಡು ಬಾಲಿವುಡ್ ನಿರ್ದೇಶಕರು ಹೆಚ್ಚೆಚ್ಚು ಸಿನಿಮಾ ಮಾಡುತ್ತಿದ್ದಾರೆ. ಬಹುತೇಕ ಚಿತ್ರಗಳು ಹೆಚ್ಚ ಪ್ರಚಾರದೊಂದಿಗೆ ಬಾಕ್ಸ್ ಆಫೀಸಿನಲ್ಲೂ ಗೆಲ್ಲುತ್ತಿವೆ. ಅಂತಹ ಚಿತ್ರಗಳ ಸಾಲಿಗೆ ಇದೀಗ ಜೆಎನ್.ಯು (JNU) ಸಿನಿಮಾ ಕೂಡ ಸೇರಿಕೊಂಡಿದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಭಾರೀ ಪರ ಮತ್ತು ವಿರೋಧಕ್ಕೂ ಕಾರಣವಾಗಿದೆ.
Advertisement
ಜೆ.ಎನ್.ಯು ಅಂದರೆ ಜವಾಹರಲಾಲ್ ನೆಹರೂ ಯೂನಿವರ್ಸಿಟಿ. ಈ ವಿಶ್ವವಿದ್ಯಾಲಯ ನಾನಾ ಕಾರಣಗಳಿಂದ ಸದ್ದು ಮಾಡುತ್ತಲೇ ಇದೆ. ಎಡ ಮತ್ತು ಬಲ ವಿದ್ಯಾರ್ಥಿ ಸಂಘಟನೆಗಳು ಕಾರಣದಿಂದಾಗಿ ಬೇಡದ ವಿಷಯಕ್ಕೆಲ್ಲ ವಿಶ್ವ ವಿದ್ಯಾಲಯವನ್ನು ಬಳಸಿಕೊಳ್ಳಲಾಗಿದೆ. ಇದನ್ನೇ ಇಟ್ಟುಕೊಂಡು ಜೆಎನ್.ಯು ಸಿನಿಮಾ ಮಾಡಲಾಗಿದೆ.
Advertisement
Advertisement
ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಜೆಎನ್.ಯು ಅಂದರೆ ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ ಎಂದು ತೋರಿಸಲಾಗಿದೆ. ಪೋಸ್ಟರ್ ಮಧ್ಯ ಭಾರತದ ನಕ್ಷೆ ಇದ್ದು, ಒಂದು ಶೈಕ್ಷಣಿಕ ಸಂಸ್ಥೆ ರಾಷ್ಟ್ರವನ್ನು ಒಡೆಯಬಹುದೆ? ಎನ್ನುವ ಪ್ರಶ್ನೆಯನ್ನೂ ಮಾಡಲಾಗಿದೆ. ಈ ಸಾಲುಗಳೇ ಅನೇಕರನ್ನು ಕೆರಳಿಸಿವೆ. ಹಾಗಾಗಿ ಇದೊಂದು ಪ್ರೊಪೊಗಾಂಡ ಸಿನಿಮಾ ಎಂದು ಜರದಿದ್ದಾರೆ.
Advertisement
ಏಪ್ರಿಲ್ 5ರಂದು ಈ ಸಿನಿಮಾವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಚುನಾವಣೆ ಹೊತ್ತಿನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಚಿತ್ರದಲ್ಲಿ ಊರ್ವಶಿ ರೌಟೇಲ (Urvashi Rautela) ಪ್ರಮುಖ ಪಾತ್ರವನ್ನು ಮಾಡಿದ್ದು, ಈ ಪಾತ್ರದ ಹಿನ್ನೆಲೆಯನ್ನು ಸಿನಿಮಾದಲ್ಲಿಯೇ ನೋಡಬೇಕು.