ಬೆಂಗಳೂರು: ಕೇರಳದಲ್ಲಿ (Kerala) ದೇಶದಲ್ಲೇ ಮೊದಲ ಜೆಎನ್ 1 ತಳಿ ಪತ್ತೆ ಆಗಿದ್ದು ಕರ್ನಾಟಕದಲ್ಲೂ ಅಲರ್ಟ್ ಮಾಡಲಾಗ್ತಿದೆ. ಕೇರಳ- ಕರ್ನಾಟಕ ಗಡಿ ಬಾವಲಿ ಚೆಕ್‍ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸಲಾಗ್ತಿದೆ. ಕರ್ನಾಟಕದ ಗಡಿಯಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಮೈಸೂರಿನ ಎಚ್.ಡಿ ಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಲಾಗ್ತಿದೆ. ಕರ್ನಾಟಕ- ಕೇರಳ ಗಡಿಯಲ್ಲಿ ಕರಪತ್ರ ಹಂಚಿ ಅರಿವು ಮೂಡಿಸಲಾಗ್ತಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆಹೊಳೆ ಚೆಕ್‍ಪೋಸ್ಟ್ ನಲ್ಲಿ ಯಾವುದೇ ಮುನ್ನೆಚ್ಚರಿಕೆ ಕೈಗೊಂಡಿಲ್ಲ. ಬದಲಿಗೆ ಸರ್ಕಾರದ ಮಾರ್ಗಸೂಚಿಗಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಾದು ಕುಳಿತಿದೆ. ಕೇವಲ ಕೋವಿಡ್ ಜಾಗೃತಿ ಬ್ಯಾನರ್ ಅಳವಡಿಸಿ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಇನ್ನು ಕೊಡಗು ಜಿಲ್ಲೆಯ ಮೂರು ಚೆಕ್‍ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೇರಳದಿಂದ ಬರುವವರ ತಪಾಸಣೆ ನಡೆಸುತ್ತಿದ್ದಾರೆ. ಕೇರಳದಿಂದ ಬರುವ ಸರ್ಕಾರಿ ಬಸ್ಸು ಹಾಗೂ ಖಾಸಗಿ ವಾಹನಗಳನ್ನು ತಡೆದು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಇಬ್ಬರು ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಸಹಾಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಸೋಂಕಿನ ಲಕ್ಷಣ ಕಂಡು ಬಂದವರಿಗೆ ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
Advertisement
Advertisement
ಕೊರೊನಾದ ಮೂರನೇ ಅಲೆಯ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಮೊದಲ ಕೊರೊನಾ (Corona Virus) ಪಾಸಿಟಿವ್ ಪತ್ತೆಯಾಗಿದೆ. ಮದ್ದೂರಿನ ವ್ಯಕ್ತಿಯೋರ್ವನಿಗೆ ಕೊರೊನಾ ದೃಢವಾಗಿದೆ. ಇದು ರೂಪಾಂತರ ತಳಿ ಅಲ್ಲ ಎಂದು ಮಂಡ್ಯ ಡಿಎಚ್‍ಓ ಡಾ.ಮೋಹನ್ ಸ್ಪಷ್ಟಪಡಿಸಿದ್ದಾರೆ. ಮದ್ದೂರಿನ ವ್ಯಕ್ತಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗಾಗಿ ಬಂದ ವೇಳೆ ಅವರನ್ನು ರ್ಯಾಪಿಡ್ ಟೆಸ್ಟ್ ಗೆ ಒಳಪಡಿಸಿದ ವೇಳೆ ಕೊರೊನಾ ದೃಢವಾಗಿದೆ. ಈ ವ್ಯಕ್ತಿಗೆ ಟ್ರಾವಲ್ ಹಿಸ್ಟರಿ ಇಲ್ಲದ ಕಾರಣ ಮನೆಯಲ್ಲಿದ್ದ ನಾಲ್ವರನ್ನು ರ್ಯಾಪಿಡ್ ಟೆಸ್ಟ್ ಗೆ ಒಳಪಡಿಸಿದಾಗ ಎಲ್ಲರಿಗೂ ನೆಗೆಟಿವ್ ಬಂದಿದೆ. ಸದ್ಯ ಕೊರೊನಾ ಸೋಂಕಿತ ವ್ಯಕ್ತಿಗೆ ಯಾವುದೇ ಲಕ್ಷಗಳು ಗೋಚರವಾಗಿಲ್ಲ. ಜೊತೆಗೆ 25%ಗಿಂತ ಅಧಿಕ ಪ್ರಮಾಣದಲ್ಲಿ ಅವರ ಸ್ಕೋರಿಂಗ್ ಹೆಚ್ಚಿರುವ ಕಾರಣ ಐಎನ್‍ಐ ಸ್ಯಾರಿ ಕೇಸ್ ಸಂಬಂಧ ಸ್ಯಾಂಪಲ್‍ನ್ನು ಟೆಸ್ಟ್ ಗೆ ಕಳಿಸಿಲ್ಲ. ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖವಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಹ ಮಾಡಲಾಗುತ್ತದೆ. ರಾಜ್ಯದಲ್ಲಿ ಹೊಸ ಕೊರೋನಾ ನಿಯಮಗಳು ಜಾರಿಗೆ ಬಂದ್ಮೇಲೆ. ಅದಕ್ಕೆ ಅನುಗುಣವಾಗಿ ಜಿಲ್ಲೆಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಂಡ್ಯ ಡಿಎಚ್‍ಓ ಡಾ.ಮೋಹನ್ ಹೇಳಿದ್ದಾರೆ. ಇದನ್ನೂ ಓದಿ: ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ಸಿಗರಿಗೆ ನೈತಿಕತೆ ಎಲ್ಲಿದೆ?: ಸಿ.ಟಿ ರವಿ
Advertisement
Advertisement
ಇತ್ತ ರಾಮನಗರದ ವಿದ್ಯಾರ್ಥಿಯಲ್ಲಿ ಕೊರೋನಾ ಸೋಂಕು ಪತ್ತೆ ಆಗಿದೆ. 22 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಕೆಮ್ಮು ಇದ್ದ ಹಿನ್ನೆಲೆ ಬೈರಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಟೆಸ್ಟ್ ಮಾಡಲಾಗಿತ್ತು. ಈ ವೇಳೆ ವಿದ್ಯಾರ್ಥಿಗೆ ಕೊರೋನಾ ಪಾಸಿಟಿವ್ ಪತ್ತೆ ಆಗಿದೆ. ಸೋಂಕಿತ ಯುವಕನಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಸೋಂಕಿತ ಯುವಕನನ್ನು ಈಗಾಗಲೇ ಕ್ಲಿನಿಕಲ್ ಟೆಸ್ಟ್ ಗೆ ಅಳವಡಿಸಲಾಗಿದೆ. ಯಾವುದೇ ಆತಂಕ ಪಡುವ ಆಗತ್ಯ ಇಲ್ಲ ಎಂದು ರಾಮನಗರ ಡಿಎಚ್‍ಒ ನಿರಂಜನ್ ಮಾಹಿತಿ ನೀಡಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ 1,500 ಕೋವಿಡ್ ಟೆಸ್ಟ್ ಮಾಡಿದ್ದು, ಯಾರೊಬ್ಬರಿಗೂ ಕೋವಿಡ್ ಪಾಸಿಟಿವ್ ಇರಲಿಲ್ಲ. ಈಗ ಓರ್ವನಿಗೆ ಪಾಸಿಟಿವ್ ಬಂದಿದೆ. ಹೆಚ್ಚಿನ ಲಕ್ಷಣ ಇಲ್ಲ. ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗ್ತಿದೆ ಎಂದ್ರು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಮಾಸ್ಕ್, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ರಾಮನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ ನಿರಂಜನ್ ಮನವಿ ಮಾಡಿದ್ದಾರೆ.