Connect with us

Latest

ಗನ್ ಬಿಟ್ಟು ಚಾಕ್ ಪೀಸ್ ಹಿಡಿದು ಪಾಠ ಮಾಡಿದ ಯೋಧರು!

Published

on

ರಾಂಚಿ: ರಾಜ್ಯವ್ಯಾಪಿ ಪ್ರತಿಭಟನೆಯಲ್ಲಿ ಶಿಕ್ಷಕರು ತೊಡಗಿದ್ದರಿಂದ ಜಾರ್ಖಂಡ್ ರಾಜ್ಯದ ರಾಮಘಡ ಜಿಲ್ಲೆಯ ಶಾಲೆಯಲ್ಲಿ ಯೋಧರು ಶಸ್ತ್ರಾಸ್ತ್ರವನ್ನು ಬಿಟ್ಟು ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದಾರೆ.

ಹೌದು, ದೇಶವನ್ನು ಕಾಯುವ ಯೋಧರು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ನೈಪುಣ್ಯತೆಯನ್ನು ಹೊಂದಿರುತ್ತಾರೆನ್ನುವುದು ಮತ್ತೊಮ್ಮೆ ಸಾಭೀತಾಗಿದೆ.

ಜಾರ್ಖಂಡ್‍ನ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಒಂದಾದ ರಾಮಘಡ ಜಿಲ್ಲೆಯಲ್ಲಿ ಶಿಕ್ಷಕರು ರಾಜ್ಯವ್ಯಾಪಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಶಿಕ್ಷಕರ ಅಭಾವವನ್ನು ತಪ್ಪಿಸಲು ಸ್ವತಃ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ ಯೋಧರು ತಮ್ಮ ಗನ್‍ಗಳನ್ನು ಬಿಟ್ಟು, ಮಕ್ಕಳಿಗಾಗಿ ಚಾಕ್ ಪೀಸ್ ಹಿಡಿದಿದ್ದಾರೆ. ಅಲ್ಲದೇ ಶಾಲೆಗಳಲ್ಲಿ ಮಕ್ಕಳಿಗೆ ಪಾಠವನ್ನು ಮಾಡಿದ್ದಾರೆ. ಈ ಮೂಲಕ ದೇಶವನ್ನು ನಿರ್ಮಿಸುವ ಎಲ್ಲಾ ಕೆಲಸಗಳಲ್ಲಿ ಸಮರ್ಥರಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಕೀಯಾ ಕೃತ್ ಮಧ್ಯ ವಿದ್ಯಾಲಯದ ಪ್ರಾಂಶುಪಾಲ ರಾಮ್ ಸರಣ್ ಯಾದವ್, ಶಿಕ್ಷಕರ ಪ್ರತಿಭಟನೆಯ ಸಮಯದಲ್ಲಿ ನಮಗೆ ನಿರಂತರವಾಗಿ ತರಗತಿಗಳನ್ನು ನಡೆಸಲು ನಾವು ತುಂಬಾ ಕಷ್ಟಪಟ್ಟಿದ್ದೇವು. ಈ ವೇಳೆ ಸಿಆರ್‍ಪಿಎಫ್‍ನ 26ನೇ ಬೆಟಾಲಿಯನ್ ಯೋಧರು ಈ ಕಾರ್ಯಕ್ಕೆ ತೊಡಗಿಕೊಂಡು, ತರಗತಿಗಳು ಮೊದಲಿನಂತೆ ನಡೆಯಲು ಸಹಕರಿಸಿದ್ದಾರೆಂದು ಹೇಳಿದ್ದಾರೆ.

ಸಿಆರ್‌ಪಿಎಫ್ ಯೋಧರು ಜಾರ್ಖಂಡ್ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಕಣ್ಗಾವಲನ್ನು ಇಟ್ಟಿದ್ದರೂ, ಇದರ ಮಧ್ಯೆಯೇ ಮಕ್ಕಳಿಗೆ ಬೋಧನೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶದ ಯಾವುದೇ ಕಠಿಣ ಪರಿಸ್ಥಿತಿಗಳಲ್ಲಿ ಮೊದಲು ನೆನಪಿಗೆ ಬರುವುದೇ ನಮ್ಮ ಯೋಧರು. ಪ್ರವಾಹ, ಚಂಡಮಾರುತ, ಭೂಕಂಪ ಸೇರಿದಂತೆ ಯಾವುದೇ ಪ್ರಕೃತಿ ವಿಕೋಪಗಳಲ್ಲಿ ಸದಾ ಮುನ್ನುಗ್ಗಿ ಜನರ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮುಡುಪಾಗಿಡುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *