ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆ ಒಬ್ಬ ಭಯೋತ್ಪಾದಕನನ್ನು ಎನ್‍ಕೌಂಟರ್ ಮಾಡಿದೆ.
Advertisement
ಶನಿವಾರ ರಾತ್ರಿ ಬಿನ್ನರ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ. ಈ ವೇಳೆ ಒಬ್ಬ ಎಲ್‍ಇಟಿ ಉಗ್ರ ಸಾವನ್ನಪ್ಪಿದ್ದಾನೆ. ಆತನನ್ನು ಇರ್ಷಾದ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ(ಎಲ್‍ಇಟಿ) ಜೊತೆ ನಂಟು ಹೊಂದಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: Commonwealth Games 2022: ಭಾರತಕ್ಕೆ ನಾಲ್ಕನೇ ಪದಕ – ವೇಟ್‍ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಿಂದ್ಯಾರಾಣಿ ದೇವಿ
Advertisement
#BaramullaEncounterUpdate: 01 #terrorist killed. #Incriminating materials including arms & ammunition recovered. Search going on. Further details shall follow.@JmuKmrPolice https://t.co/LRPn93YL37
— Kashmir Zone Police (@KashmirPolice) July 30, 2022
Advertisement
ಈ ಕುರಿತು ಕಾಶ್ಮೀರದ ಪೊಲೀಸರು ಟ್ವೀಟ್ ಮಾಡಿದ್ದು, ಇರ್ಷಾದ್ ಅಹ್ಮದ್ ಭಟ್ ಮೇ 2022 ರಿಂದ ಭಯೋತ್ಪಾದಕ ಕ್ರಿಯೆಯಲ್ಲಿ ಸಕ್ರಿಯನಾಗಿದ್ದ. ಈತ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‍ಇಟಿಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಜಮ್ಮು ಮತ್ತು ಕಾಶ್ಮೀರಿ ಪೊಲೀಸರು ತಿಳಿಸಿದ್ದಾರೆ.
Advertisement
ಪೊಲೀಸರು ಭಯೋತ್ಪಾದಕನಿಂದ ಒಂದು ಎಕೆ ರೈಫಲ್, ಎರಡು ಮ್ಯಾಗಜೀನ್‍ಗಳು ವಶಪಡಿಸಿಕೊಂಡಿದ್ದಾರೆ. ಎನ್‍ಕೌಂಟರ್ ನಡೆದ ಸ್ಥಳದಲ್ಲಿ ಇನ್ನೂ ಶೋಧ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ತನಿಖೆಯನ್ನು ಮುಂದುವರೆಸಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಾವ್ಹ್ ʼಚಿಕನ್ ಚಾಟ್ʼ ಎಷ್ಟು ಟೇಸ್ಟಿ ಗೊತ್ತಾ.. ನೀವು ಟ್ರೈ ಮಾಡಿ