Public TVPublic TV
Reading: ಆಟವಾಡ್ತಿದ್ದ ಮಗುವಿನ ಕೈಯಲ್ಲಿ ಸ್ನೈಪರ್‌ಗೆ ಬಳಸುವ ಚೀನಾದ ರೈಫಲ್ ಸ್ಕೋಪ್ ಪತ್ತೆ
Share
Notification Show More
Font ResizerAa
Font ResizerAa
Public TVPublic TV
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಆಟವಾಡ್ತಿದ್ದ ಮಗುವಿನ ಕೈಯಲ್ಲಿ ಸ್ನೈಪರ್‌ಗೆ ಬಳಸುವ ಚೀನಾದ ರೈಫಲ್ ಸ್ಕೋಪ್ ಪತ್ತೆ

Latest

ಆಟವಾಡ್ತಿದ್ದ ಮಗುವಿನ ಕೈಯಲ್ಲಿ ಸ್ನೈಪರ್‌ಗೆ ಬಳಸುವ ಚೀನಾದ ರೈಫಲ್ ಸ್ಕೋಪ್ ಪತ್ತೆ

Public TV
Last updated: December 22, 2025 12:28 pm
Public TV
Share
1 Min Read
Chinese Rifle Scope
SHARE

– ಎನ್‌ಐಎ ಕಚೇರಿ ಬಳಿಯ ಕಸದ ತೊಟ್ಟಿಯಲ್ಲಿ ಪತ್ತೆ; ಪೊಲೀಸರು ಫುಲ್‌ ಅಲರ್ಟ್‌

ನವದೆಹಲಿ: ‌ಜಮ್ಮು-ಕಾಶ್ಮೀರದಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಪ್ರಧಾನ ಕಚೇರಿ ಬಳಿಯ ಕಸದ ತೊಟ್ಟಿಯೊಂದರಲ್ಲಿ ಚೀನಾ ನಿರ್ಮಿತ ಅಸಾಲ್ಟ್‌ ರೈಫಲ್‌ ಸ್ಕೋಪ್‌ (Chinese Made Rifle Scope) ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮುವಿನ ಅಸ್ರಾರಾಬಾದ್‌ನಲ್ಲಿ (Asrarabad) 6 ವರ್ಷದ ಮಗುವೊಂದು ಸ್ನೈಪರ್‌ಗೆ ಬಳಸುವ ರೈಫಲ್‌ ಸ್ಕೋಪ್‌ ಹಿಡಿದು ಆಟವಾಡುತ್ತಿದ್ದದ್ದು ಕಂಡುಬಂದಿದೆ. ಬಳಿಕ ಪೊಲೀಸರು ಆ ಮಗುವಿನ ಕುಟುಂಬಸ್ಥರ ವಿಚಾರಣೆ ನಡೆಸಿದಾಗ, ಕಸದ ತೊಟ್ಟಿ ಬಳಿ ಮಗುವಿಗೆ ಸಿಕ್ಕಿದ್ದು ಅಂತ ಅವರು ಹೇಳಿದ್ದಾರೆ. ಈ ಸ್ಕೋಪ್‌ ಅನ್ನು ದೂರದ ಗುರಿಗಾಗಿ ಸ್ನೈಪರ್‌ ರೈಫಲ್‌ಗಳಿಗೆ (Sniper Rifle) ಬಳಸುತ್ತಾರೆ. ಇದನ್ನೂ ಓದಿ: ರಷ್ಯಾ ಸೇನೆ ಸೇರಲು ಒತ್ತಾಯ – ಉಕ್ರೇನ್‌ನಿಂದ SOS ವಿಡಿಯೋ ಹರಿಬಿಟ್ಟ ಗುಜರಾತ್ ವಿದ್ಯಾರ್ಥಿ

NIA

ಇದು ಚೀನಾದ ಸ್ನೈಪರ್ ರೈಫಲ್‌ ಸ್ಕೋಪ್‌ ಅನ್ನೋದು ತಿಳಿಯುತ್ತಿದ್ದಂತೆ ಪೊಲೀಸ್‌ (Jammu Police) ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಸ್ಕೋಪ್‌ ಪತ್ತೆಯಾದ ಸ್ಥಳಕ್ಕೆ ಜಮ್ಮು-ಕಾಶ್ಮೀರದ ಹಿರಿಯ ಅಧಿಕಾರಿಗಳೂ ಭೇಟಿ ನೀಡಿದ್ದಾರೆ. ಮಹತ್ವದ ಬೆಳವಣಿಗೆ ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ – ಭಾರತದ ಆರೋಪ ತಿರಸ್ಕರಿಸಿದ ಬಾಂಗ್ಲಾ ವಿದೇಶಾಂಗ ಸಚಿವಾಲಯ

ಪಾಕ್‌ ಸಂಪರ್ಕದಲ್ಲಿದ್ದ ಓರ್ವ ಯುವಕ ಅರೆಸ್ಟ್‌
ಇನ್ನೂ ರೈಫಲ್‌ ಸ್ಕೋಪ್‌ ಪತ್ತೆಯಾದ ಬೆಳವಣಿಗೆ ಬೆನ್ನಲ್ಲೇ ಮತ್ತೊಂದು ಘಟನೆಗೆ ಸಂಬಂಧಿಸಿದಂತೆ ಸಾಂಬಾ ಜಿಲ್ಲೆಯಲ್ಲಿ 24 ವರ್ಷದ ಓರ್ವ ಯುವಕನನ್ನ ಬಂಧಿಸಲಾಗಿದೆ. ತನ್ವೀರ್ ಅಹ್ಮದ್ ಬಂಧಿತ ಯುವಕ. ಆತನ ಫೋನ್‌ ಪರಿಶೀಲಿಸಿದಾಗ ಪಾಕಿಸ್ತಾನಿ ಮೊಬೈಲ್‌ ಸಂಖ್ಯೆಗಳು ಇರುವುದು ಗೊತ್ತಾಗಿದೆ ಎಂದು ವರದಿಯಾಗಿದೆ.

ಅಹ್ಮದ್ ಮೂಲತಃ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ನಿವಾಸಿಯಾಗಿದ್ದು, ಪ್ರಸ್ತುತ ಸಾಂಬಾದಲ್ಲಿ ವಾಸಿಸುತ್ತಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

TAGGED:AsrarabadChinese Made Rifle Scopejammu kashmirNIARifle ScopeSniper Rifleಎನ್‍ಐಎಚೈನೀಸ್‌ ರೈಫಲ್‌ ಸ್ಕೋಪ್‌ಜಮ್ಮು ಪೊಲೀಸ್ಜಮ್ಮು ಮತ್ತು ಕಾಶ್ಮೀರರೈಫಲ್‌ ಸ್ಕೋಪ್‌
Share This Article
Facebook Whatsapp Whatsapp Telegram

Cinema news

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?