ನವದೆಹಲಿ: ದೇಶದ ಪ್ರಮುಖ ಉದ್ಯಮಿ ಮುಖೇಶ್ ಅಂಬಾನಿ (Mukesh Ambani ) ಅವರ ಕಂಪನಿ ರಿಲಯನ್ಸ್ ಜಿಯೋ (Reliance Jio) ಈ ದೀಪಾವಳಿಗೆ (Deepavali) ಜಿಯೋ ಭಾರತ್ 4ಜಿ ಫೋನ್‌ಗಳ ಬೆಲೆಯನ್ನು 30% ರಷ್ಟು ಕಡಿತಗೊಳಿಸಿದೆ. ಈ ಸೀಮಿತ ಅವಧಿಯ ಕೊಡುಗೆಯ ಅಡಿಯಲ್ಲಿ 999 ರೂ. ಜಿಯೋಭಾರತ್ ಮೊಬೈಲ್ ಫೋನ್ ಈಗ 699ರ ವಿಶೇಷ ಬೆಲೆಗೆ ಲಭ್ಯವಿದೆ.
ಜಿಯೋಭಾರತ್ ಫೋನ್ (Jio Bharat Phone) ಅನ್ನು 123 ರೂ.ಗೆ ರೀಚಾರ್ಜ್ ಮಾಡಬಹುದು. ಈ ಮಾಸಿಕ ಟ್ಯಾರಿಫ್ ಯೋಜನೆಯಲ್ಲಿ ಅನಿಯಮಿತ ಉಚಿತ ಧ್ವನಿ ಕರೆಗಳು, 14 ಜಿಬಿ ಡೇಟಾ ಸಹ ಒಳಗೊಂಡಿದೆ. ಇದನ್ನೂ ಓದಿ: Nvidia ದಲ್ಲಿ ವಿದ್ಯೆ ಇದೆ, ಇದರರ್ಥ ಭಾರತದಲ್ಲಿ ಜ್ಞಾನ: ಅಂಬಾನಿಯ ಮಾತಿಗೆ ಜೆನ್ಸನ್ ಹುವಾಂಗ್ ಚಪ್ಪಾಳೆ
ಜಿಯೋದ ಮಾಸಿಕ 123 ರೂ. ರೀಚಾರ್ಜ್ ಯೋಜನೆ ಇತರ ಆಪರೇಟರ್‌ಗಳಿಗಿಂತ 40 ಪ್ರತಿಶತ ಅಗ್ಗವಾಗಿದೆ. ಏಕೆಂದರೆ ಇತರ ನೆಟ್‌ವರ್ಕ್‌ಗಳ ಫೀಚರ್ ಫೋನ್‌ಗಳ ಮಾಸಿಕ ರೀಚಾರ್ಜ್ ಕನಿಷ್ಠ ಬೆಲೆ 199 ರೂ. ಇದೆ. ಇದು ಜಿಯೋಗಿಂತ 76 ರೂಪಾಯಿ ಹೆಚ್ಚು ದುಬಾರಿಯಾಗಿದೆ.
ಇದರಿಂದಾಗಿ ಜಿಯೋ ಗ್ರಾಹಕರಿಗೆ ಪ್ರತಿ ರೀಚಾರ್ಜ್ ನಲ್ಲಿ ತಿಂಗಳಿಗೆ 76 ರೂ. ಉಳಿಯಲಿದೆ. ತಿಂಗಳಿಗೆ 76 ರಂತೆ 9 ತಿಂಗಳಿಗೆ ಉಳಿತಾಯ ಆಗುವ ಮೊತ್ತವು ಫೋನ್ ಬೆಲೆಗೆ ಸಮನಾಗಲಿದೆ.
2ಜಿ ಯಿಂದ 4ಜಿ ಗೆ ಅಪ್‌ಗ್ರೇಡ್ ಆಗುವ ಸುವರ್ಣ ಅವಕಾಶವನ್ನು ಜಿಯೋ ನೀಡುತ್ತಿದೆ. 455 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, ಚಲನಚಿತ್ರ ಪ್ರೀಮಿಯರ್‌ಗಳು ಮತ್ತು ಹೊಸ ಚಲನಚಿತ್ರಗಳು, ವೀಡಿಯೊ ಶೋಗಳು, ಲೈವ್ ಸ್ಪೋರ್ಟ್ಸ್ ಕಾರ್ಯಕ್ರಮಗಳು, ಜಿಯೋ ಸಿನೆಮಾ ಮುಖ್ಯಾಂಶಗಳು, ಡಿಜಿಟಲ್ ಪಾವತಿಗಳು, ಕ್ಯೂಆರ್ ಕೋಡ್ ಸ್ಕ್ಯಾನ್‌ಗಳು ಜಿಯೋಭಾರತ್ 4 ಜಿ ಫೋನ್‌ನಲ್ಲಿ ಲಭ್ಯವಿದೆ.
ಜಿಯೋಪೇ ಮತ್ತು ಜಿಯೋಚಾಟ್ ನಂತಹ ಪ್ರಿಲೋಡೆಡ್ ಅಪ್ಲಿಕೇಶನ್ ಗಳು ಸಹ ಈ ಫೋನ್‌ನಲ್ಲಿ ಲಭ್ಯವಿರುತ್ತವೆ. ಹತ್ತಿರದ ಅಂಗಡಿಗಳ ಹೊರತಾಗಿ, ಫೋನ್ ಅನ್ನು ಜಿಯೋಮಾರ್ಟ್ ಅಥವಾ ಅಮೆಜಾನ್‌ನಿಂದ ಫೋನ್ ಖರೀದಿಸಬಹುದು.