ಮುಂಬೈ: ಕೇವಲ 100 ರೂ.ಗೆ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಜಿಯೋ (Jio) ತನ್ನ ಗ್ರಾಹಕರಿಗೆ ಹಲವಾರು ಬಂಪರ್ ಆಫರ್ ನೀಡಿದೆ.
ಜಿಯೋ 100 ರೂ. ಪ್ಲ್ಯಾನ್ ವಿವರ: ಈ ರೀಚಾರ್ಜ್ ಪ್ಲ್ಯಾನ್ ಪ್ರಮಾಣಿತ ರೀಚಾರ್ಜ್ ಅಲ್ಲ. ಬಳಕೆದಾರರು ತಮ್ಮ ಮೂಲ ಯೋಜನೆಯ ಜೊತೆಗೆ ಖರೀದಿಸಬಹುದಾದ ಆಡ್-ಆನ್ ಪ್ಯಾಕ್ ಆಗಿದೆ. ಈ ಪ್ಲ್ಯಾನ್‌ನಲ್ಲಿ (Jio Plans) ಒಂದು ತಿಂಗಳು ಜಿಯೋ ಹಾಟ್‌ಸ್ಟಾರ್ (Hotstar) ಚಂದಾದಾರಿಕೆಯನ್ನು ಒಳಗೊಂಡಿದೆ.
ಜಿಯೋ ಬಳಕೆದಾರರಿಗೆ 5GB ಡೇಟಾ ಸಿಗಲಿದ್ದು, ಯಾವುದೇ ದೈನಂದಿನ ಮಿತಿ ಇರುವುದಿಲ್ಲ. ಈ ಡೇಟಾವನ್ನು ತಿಂಗಳು ಪೂರ್ತಿ ಸುಲಭವಾಗಿ ಬಳಸಬಹುದಾಗಿದೆ.
ಜಿಯೋ 77 ರೂ. ಪ್ಲ್ಯಾನ್: ಜಿಯೋ ಕೇವಲ ರೂ. 77 ಬೆಲೆಯ ಆಕರ್ಷಕ ಪ್ಲ್ಯಾನ್ ನೀಡಿದ್ದು, ಇದರಲ್ಲಿ ಬಳಕೆದಾರರು ಸೋನಿ LIV ಗೆ ಪೂರ್ಣ ತಿಂಗಳ ಚಂದಾದಾರಿಕೆ ಮತ್ತು 30 ದಿನಗಳವರೆಗೆ ಜಿಯೋಟಿವಿ ಸೇವೆ ಪಡೆಯಲಿದ್ದಾರೆ. ಇದು ಬಳಕೆದಾರರು ತಮ್ಮ ಮೂಲ ಯೋಜನೆಯ ಜೊತೆಗೆ ಬಳಸಬಹುದಾದ ಆಡ್-ಆನ್ ಪ್ಯಾಕ್ ಆಗಿದೆ.
ಇವುಗಳ ಜೊತೆ ಬಳಕೆದಾರರು 69 ರೂ., 49 ರೂ., 39 ರೂ., 29 ರೂ., 19 ರೂ. ಮತ್ತು 11 ರೂ. ಬೆಲೆಯ ಇತರ ಅಗ್ಗದ ಡೇಟಾ ಆಡ್-ಆನ್ ಪ್ಯಾಕ್‌ಗಳನ್ನು ಪಡೆಯಬಹುದಾಗಿದೆ.

