ಮುಂಬೈ: ಜಿಯೋ ಫೀಚರ್ ಫೋನ್ ಬಿಡುಗಡೆಯಾದ ಬಳಿಕ ಆದರ ಗುಣವೈಶಿಷ್ಟ್ಯ ಸಂಪೂರ್ಣವಾಗಿ ಬಹಿರಂಗವಾಗಿರಲಿಲ್ಲ. ಆದರೆ ಗುರುವಾರದಿಂದ ಫೋನ್ ಬುಕ್ಕಿಂಗ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಫೋನಿನ ಸಂಪೂರ್ಣ ಗುಣವೈಶಿಷ್ಟ್ಯ ಬಹಿರಂಗವಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ 40ನೇ ವಾರ್ಷಿಕ ಸಭೆಯಲ್ಲಿ ಜಿಯೋದ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್ ಬಿಡುಗಡೆಯಾಗಿತ್ತು. ಈ ಫೋನಿಗೆ 1500 ರೂ. ನಿಗದಿ ಮಾಡಲಾಗಿದೆ. ಆದರೆ ಮೂರು ವರ್ಷದ ಬಳಿಕ ಈ ಫೋನ್ ನೀಡಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
Advertisement
ಈ ಫೋನನ್ನು ಮುಕೇಶ್ ಅಂಬಾನಿ `ಭಾರತದ ಇಂಟಲಿಜೆಂಟ್ ಸ್ಮಾರ್ಟ್ ಫೋನ್’ ಎಂದು ಬಣ್ಣಿಸಿದ್ದಾರೆ. ಈ ಫೋನಿನಲ್ಲಿ ಜಿಯೋ ಸಿನಿಮಾ, ಸಿನಿಮಾ ಮ್ಯೂಸಿಕ್ ಸೇರಿದಂತೆ ಜಿಯೋ ಆಪ್ಲಿಕೇಶನ್ ಪ್ರಿ ಲೋಡೆಡ್ ಆಗಿ ಇರಲಿದೆ.
Advertisement
ಗುಣವೈಶಿಷ್ಟ್ಯಗಳು:
ಸಿಂಗಲ್ ನ್ಯಾನೋ ಸಿಮ್ 2.4 ಇಂಚಿನ (240*320 ಪಿಕ್ಸೆಲ್), ಟಾರ್ಚ್ ಲೈಟ್ ಹೊಂದಿರುವ ಈ ಫೀಚರ್ ಫೋನ್ ಕೈ ಆಪರೇಟಿಂಗ್ ಸಿಸ್ಟಂ( KaiOS )ಹೊಂದಿದೆ.
Advertisement
1.2 GHz ಡ್ಯುಯಲ್ ಕೋರ್ ಎಸ್‍ಪಿಆರ್‍ಡಿ ಪ್ರೊಸೆಸರ್ ಹೊಂದಿರುವ ಈ ಫೋನ್ ಮಲಿ – 400 ಗ್ರಾಫಿಕ್ಸ್ ಪ್ರೊಸೆಸರ್ ಇದೆ. 2000 ಎಂಎಎಚ್ ಲಿಪೋ ಬ್ಯಾಟರಿ ಹೊಂದಿರುವ ಈ ಫೋನ್ 4ಜಿಬಿ ಆಂತರಿಕ ಮೆಮೊರಿ, 128 ಜಿಬಿವರೆಗೆ ಮೆಮೊರಿ ವಿಸ್ತರಿಸುವ ಸಾಮಥ್ರ್ಯವನ್ನು ಹೊಂದಿದೆ.
Advertisement
ಹಿಂದುಗಡೆ 2 ಎಂಪಿ ಕ್ಯಾಮೆರಾ, ಮುಂದುಗಡೆ ವಿಜಿಎ ಕ್ಯಾಮೆರಾ ಇದ್ದು, ವಿಡಿಯೋ ರೆಕಾರ್ಡಿಂಗ್ ಮಾಡಬಹುದು ಎಂದು ಜಿಯೋ ಹೇಳಿದೆ.
ಎಫ್‍ಎಂ ರೇಡಿಯೋ, ವೈಫೈ, ಎನ್‍ಎಫ್‍ಸಿ, ಬ್ಲೂಟೂತ್, ಯುಎಸ್‍ಬಿ 2.0, ಜಿಪಿಎಸ್ ಹೊಂದಿದ್ದು, ಕನ್ನಡ ಸೇರಿದಂತೆ ದೇಶದ 22 ಭಾಷೆಗಳನ್ನು ಈ ಫೋನ್ ಸಪೋರ್ಟ್ ಮಾಡುತ್ತದೆ. ಮೈ ಜಿಯೋ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಚಾಟ್, ಜಿಯೋ ಮ್ಯೂಸಿಕ್, ಜಿಯೋ ಎಕ್ಸ್ ಪ್ರೆಸ್ ನ್ಯೂಸ್ ಅಪ್ಲಿಕೇಶನ್‍ಗಳು ಪ್ರಿಲೋಡೆಡ್ ಆಗಿ ಇರಲಿದೆ.
ಫೋನ್ ಬಾಕ್ಸ್ ನಲ್ಲಿ ಹ್ಯಾಂಡ್ ಸೆಟ್, ಬ್ಯಾಟರಿ, ಚಾರ್ಜರ್ ಅಡಾಪ್ಟರ್, ಕ್ವಿಕ್ ಸರ್ವಿಸ್ ಗೈಡ್, ವಾರಂಟಿ ಕಾರ್ಡ್, ಸಿಮ್ ಕಾರ್ಡ್ ಇರಲಿದೆ.
ಫೋನ್ ಬುಕ್ ಮಾಡುವುದು ಹೇಗೆ?
ಜಿಯೋ ಮನಿ ಅಥವಾ ಪೇಟಿಎಂ ಮೂಲಕ 500 ರೂ. ಪಾವತಿಸಿ ಫೋನ್ ಬುಕ್ ಮಾಡಬಹುದು. ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಹಣಕಾಸು ವ್ಯವಹಾರಗಳು ನಡೆಯುತ್ತದೆ. ಈ ಮೇಲಿನ ಆನ್‍ಲೈನ್ ವ್ಯವಹಾರಗಳು ಯಶಸ್ವಿಯಾದರೆ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಗೆ ಫೋನ್ ಬುಕ್ ಆಗಿರುವ ಬಗ್ಗೆ ಮೆಸೇಜ್ ಬರುತ್ತದೆ.
ಫೋನ್ ಬುಕ್ ಮಾಡಲು ಭೇಟಿ ನೀಡಿ: www.jio.com
The 5 point checklist to help you pre-book your #JioPhone. Be ready by 5.30 pm today. #WithLoveFromJio pic.twitter.com/CJtLllLPYl
— Reliance Jio (@reliancejio) August 23, 2017