ನವದೆಹಲಿ: ಮಂಗಳವಾರದಂದು ಜಿಯೋ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. 99 ರೂ. ರೀಚಾರ್ಜ್ ಮಾಡಿ ಜಿಯೋ ಪ್ರೈಮ್ ಸದಸ್ಯರಾಗಿ ನಂತರ ತಿಂಗಳಿಗೆ 303 ರೂ. ರಿಚಾರ್ಜ್ ಮಾಡೋ ಮೂಲಕ ಗ್ರಾಹಕರು 30 ಜಿಬಿ ಡೇಟಾ ಮತ್ತು ಉಚಿತ ಕರೆಯನ್ನು ಪಡೆಯುವ ಹೊಸ ಸೇವೆಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಬೇರೆ ಕಂಪೆನಿಗಳು ಈ ದರಕ್ಕೆ ಏನು ಆಫರ್ ನೀಡಿದ್ದಾರೆ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವನ್ನು ನೀಡಲಾಗಿದೆ.
ಏರ್‍ಟೆಲ್ ಗ್ರಾಹಕರು 345 ರೂ. ರಿಚಾರ್ಜ್ ಮಾಡಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‍ಲಿಮಿಟೆಡ್ ಕಾಲಿಂಗ್ ಹಾಗೂ 1 ಜಿಬಿ 4ಜಿ ಡೇಟಾ ಪಡೆಯಬಹುದು. ಹಾಗೆ 30 ಜಿಬಿ ಡೇಟಾ ಬೇಕಾದ್ರೆ 1495 ರೂ. ರೀಚಾರ್ಜ್ ಮಾಡಬೇಕು. ಇದಕ್ಕೆ 90 ದಿನಗಳ ವ್ಯಾಲಿಡಿಟಿ ಇರುತ್ತದೆ.
Advertisement
ವೋಡಫೋನ್ ಗ್ರಾಹಕರು 349 ರೂ. ರೀಚಾರ್ಜ್ ಮಾಡಿ ಅನ್‍ಲಿಮಿಟೆಡ್ ಕಾಲಿಂಗ್‍ನೊಂದಿಗೆ 4ಜಿ ಹ್ಯಾಂಡ್‍ಸೆಟ್‍ಗಳಿಗೆ 1ಜಿಬಿ 4ಜಿ ಡೇಟಾ ಪಡೆಯಬಹುದು. ಇನ್ನು 1500 ರೂ. ರೀಚಾರ್ಜ್ ಮಾಡಿದ್ರೆ 35 ಜಿಬಿ ಡೇಟಾ ಪಡೆಯಬಹುದು. ಇದಕ್ಕೆ 30 ದಿನಗಳ ವ್ಯಾಲಿಡಿಟಿ ಇರುತ್ತದೆ.
Advertisement
ಐಡಿಯಾ ಗ್ರಾಹಕರು 348 ರೂ. ರೀಚಾರ್ಜ್ ಮಾಡಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‍ಲಿಮಿಟೆಡ್ ಕಾಲಿಂಗ್ ಹಾಗೂ 4ಜಿ ಹ್ಯಾಂಡ್‍ಸೆಟ್ ಇರುವವರು 1ಜಿಬಿ 4ಜಿ/3ಜಿ ಡೇಟಾ ಪಡೆಯಬಹುದು. 4ಜಿ ಹ್ಯಾಂಡ್‍ಸೆಟ್‍ಗೆ ಅಪ್‍ಗ್ರೇಡ್ ಆಗುತ್ತಿರುವವವರು ಅನ್‍ಲಿಮಿಟೆಡ್ ಕಾಲಿಂಗ್ ಜೊತೆಗೆ 4 ಜಿಬಿ 3ಜಿ/4ಜಿ ಡೇಟಾ ಪಡೆಯಬಹುದು. ಇನ್ನೂ 298 ರೂ. ರಿಚಾರ್ಜ್ ಮಾಡಿದ್ರೆ 28 ದಿನಗಳ ವ್ಯಾಲಿಡಿಟಿಯೊಂದಿಗೆ 1.2 ಜಿಬಿ ಡೇಟಾ ಸಿಗುತ್ತದೆ. ಈ ಮ್ಯಾಜಿಕ್ ರಿಚಾರ್ಜ್ ಆಫರ್‍ನಲ್ಲಿ ಗ್ರಾಹಕರಿಗೆ ಅದೃಷ್ಟ ಇದ್ದರೆ 1.2 ಜಿಬಿ ಯಿಂದ 10 ಜಿಬಿವರೆಗೆ ಡೇಟಾ ಉಚಿತವಾಗಿ ಸಿಗುತ್ತದೆ. ಇನ್ನು 1349 ರೂ. ರಿಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 10 ಜಿಬಿ 4ಜಿ ಡೇಟಾ ಸಿಗುತ್ತದೆ.
Advertisement
ಡೊಕೊಮೋದಲ್ಲಿ 350 ರೂ. ರಿಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 3ಜಿಬಿ ಡೇಟಾ ಮತ್ತು 150 ರೂ. ಟಾಕ್ ಟೈಮ್ ಸಿಗುತ್ತದೆ. 995 ರೂ. ರಿಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 10 ಜಿಬಿ ಡೇಟಾ ಸಿಗುತ್ತದೆ.
Advertisement
ಇನ್ನು ಬಿಎಸ್‍ಎನ್‍ಎಲ್ ಕೂಡ ಇಂಟರ್ನೆಟ್ ದರವನ್ನು ಪರಿಷ್ಕರಿಸಿದ್ದು 292 ರೂ. ರೀಚಾರ್ಜ್‍ಗೆ 30 ದಿನಗಳ ವ್ಯಾಲಿಡಿಟಿಯೊಂದಿಗೆ 8 ಜಿಬಿ ಡೇಟಾ ಆಫರ್ ನೀಡಿದೆ. 3099 ರೂ. ರೀಚಾರ್ಜ್ ಮಾಡಿದ್ರೆ 60 ದಿನಗಳವರೆಗೆ 20 ಜಿಬಿ ಡೇಟಾ ಜೊತೆಗೆ ಅನ್‍ಲಿಮಿಟೆಡ್ ಲೋಕಲ್ ಹಾಗೂ ಎಸ್‍ಟಿಡಿ ಕಾಲಿಂಗ್ ಜೊತೆಗೆ 3000 ಉಚಿತ ಎಸ್‍ಎಮ್‍ಎಸ್ ಪಡೆಯಬಹುದಾಗಿದೆ.
ಇದನ್ನೂ ಓದಿ: ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ
ಇದನ್ನೂ ಓದಿ: ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ
ಇದನ್ನೂ ಓದಿ: ಜಿಯೋ 4ಜಿ ಇಂಟರ್‍ನೆಟ್ ಅಪ್‍ಗ್ರೇಡ್ ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ