ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ JioTV ಪ್ರೀಮಿಯಂ ಪ್ಲ್ಯಾನ್‌ ಪರಿಚಯಿಸಿದ ರಿಲಯನ್ಸ್

Public TV
2 Min Read
OTT Subscriptions 2
ಸಾಂದರ್ಭಿಕ ಚಿತ್ರ

ಬೆಂಗಳೂರು: ರಿಲಯನ್ಸ್ ಜಿಯೋದಿಂದ (Reliance Jio) ಈಗ ಜಿಯೋಟಿವಿ ಪ್ರೀಮಿಯಂ ಪ್ಲ್ಯಾನ್‌ಗಳನ್ನು (JioTV Premium Plans) ಪರಿಚಯಿಸಲಾಗುತ್ತಿದೆ. ಜಿಯೋ ಪ್ರೀಪೇಯ್ಡ್ ಬಳಕೆದಾರರು ಈಗ ಜಿಯೋಟಿವಿ ಪ್ರೀಮಿಯಂ ಪ್ಲ್ಯಾನ್‌ಗಳ ಜೊತೆಗೆ ನಿರಂತರ ಮನರಂಜನೆ ಆನಂದಿಸಬಹುದು. ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಪ್ಲ್ಯಾನ್‌ಗಳು ಇರಲಿದ್ದು, ಇದರ ಮೂಲಕ ಅನಿಯಮಿತ ಡೇಟಾ, ಧ್ವನಿ, ಎಸ್‌ಎಂಎಸ್‌ ಹಾಗೂ 14 ಪ್ರಮುಖ OTT (ಓವರ್ ದಿ ಟಾಪ್)ಗಳಿಗೆ ಚಂದಾದಾರಿಕೆ ಪಡೆಯಬಹುದು. 1,000 ರೂ. ಮೌಲ್ಯದ ಒಟಿಟಿ ಚಂದಾದಾರಿಕೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೇ ಇದು ಲಭ್ಯವಾಗಲಿದೆ.

ಪ್ಲ್ಯಾನ್‌ಗಳು ತಿಂಗಳಿಗೆ 398 ರೂ.ನೊಂದಿಗೆ ಆರಂಭವಾಗುತ್ತದೆ. ಅಂದ ಹಾಗೆ ಈ 14 OTT ಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ಕಂಟೆಂಟ್ ಲಭ್ಯವಾಗುತ್ತದೆ. ಡಿಜಿಟಲ್ ಟಿವಿ, ಕ್ರೀಡಾ, ಒರಿಜಿನಲ್ಸ್, ಟೀವಿ ಶೋಗಳು ಮುಂತಾದವು ದೊರೆಯುತ್ತವೆ. ಪ್ರೀಪೇಯ್ಡ್ ಸೆಗ್ಮೆಂಟ್‌ನಲ್ಲಿ ವಾರ್ಷಿಕ ಪ್ಲ್ಯಾನ್‌ ಖರೀದಿ ಮಾಡುವಂಥ ಗ್ರಾಹಕರಿಗಾಗಿಯೇ ಒನ್ ಕ್ಲಿಕ್ ಕಾಲ್ ಸೆಂಟರ್ ಬೆಂಬಲ ಸಹ ದೊರೆಯುತ್ತದೆ.

OTT Subscriptions

ಯಾವ್ಯಾವ ಆ್ಯಪ್‌ಗಳು ದೊರೆಯುತ್ತವೆ?

  • ರಾಷ್ಟ್ರೀಯ ಆ್ಯಪ್‌ಗಳು: ಜಿಯೋಸಿನಿಮಾ (JioCinema) ಪ್ರೀಮಿಯಂ, ಡಿಸ್ನಿ+ ಹಾಟ್ ಸ್ಟಾರ್, ಝೀ5, ಸೋನಿಲಿವ್
  • ಅಂತಾರಾಷ್ಟ್ರೀಯ ಆ್ಯಪ್‌ಗಳು: ಪ್ರೈಮ್ ವಿಡಿಯೋ (ಮೊಬೈಲ್), ಲಯನ್ಸ್ ಗೇಟ್ ಪ್ಲೇ, ಡಿಸ್ಕವರಿ+, ಡಾಕ್ಯುಬೇ
  • ಪ್ರಾದೇಶಿಕ ಆ್ಯಪ್‌ಗಳು: ಸನ್ ನೆಕ್ಸ್ಟ್, ಹೊಯ್ ಚೊಯ್, ಪ್ಲಾನೆಟ್ ಮರಾಠಿ, ಚೌಪಾಲ್, ಎಪಿಕ್ ಆನ್, ಕಂಚಾ ಲಂಕಾ

ಇದೊಂದು‌ ಪ್ಲ್ಯಾನ್‌ ಖರೀದಿಸಿದವರಿಗೆ ವಿವಿಧ ಒಟಿಟಿಗಳಿಗೆ ಸಬ್‌ಸ್ಕ್ರೈಬ್ ಆಗಬೇಕು ಎಂಬ ಅಗತ್ಯ ಇರುವುದಿಲ್ಲ. ಹಲವು ಲಾಗಿನ್ ಐಡಿ ಬೇಕು, ಪ್ರತಿ ಆ್ಯಪ್‌ ಗೂ ಪ್ರತ್ಯೇಕವಾಗಿ ಪಾಸ್‌ವರ್ಡ್‌ಬೇಕು ಅಂತಿಲ್ಲ. ಒಂದೇ ಕಡೆಗೆ ಎಲ್ಲ ವಿವಿಧ ಕಂಟೆಂಟ್‌ಗಳು ದೊರೆಯುತ್ತದೆ. ಇನ್ನೂ ಗ್ರಾಹಕರು ತಮಗೆ ಬೇಕಾದ ಕಂಟೆಂಟ್ ಹುಡುಕುವುದು ಸಹ ಸುಲಭವಾಗಿದ್ದು, ಶಿಫಾರಸಿಗಾಗಿಯೇ ಉತ್ತಮವಾದ ಹುಡುಕಾಟದ ಎಂಜಿನ್ ವ್ಯವಸ್ಥೆ ಇದೆ. ಅದೇ ರೀತಿ ಗ್ರಾಹಕರು ತಮ್ಮ ಆದ್ಯತೆಯಂತೆ ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಪ್ಲ್ಯಾನ್‌ಗಳ ಮಿತಿಯನ್ನು ಆರಿಸಿಕೊಳ್ಳಬಹುದು. ಒಂದೇ ಕ್ಲಿಕ್ ನಲ್ಲಿ ಕಸ್ಟಮರ್ ಕೇರ್ ಕಾಲ್ ಬ್ಯಾಕ್ ಸೇವೆ ಲಭ್ಯ ಇದ್ದು, ವಾರ್ಷಿಕ ಪ್ಲ್ಯಾನ್‌ ರೀಚಾರ್ಜ್‌ಗೆ ಇಎಂಐ ಸೌಲಭ್ಯ ಸಹ ದೊರೆಯಲಿದೆ.

Disney Hotstar

ಪ್ರೀಮಿಯಂ OTT ಕಂಟೆಂಟ್ ಬಳಸುವುದು ಹೇಗೆ?

  • ಮೊದಲಿಗೆ ಜಿಯೋಟಿವಿ ಪ್ರೀಮಿಯಂನ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಪ್ಲ್ಯಾನ್‌ನೊಂದಿಗೆ ರೀಚಾರ್ಜ್ ಮಾಡಬೇಕು
  • ಅದೇ ಜಿಯೋ ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಜಿಯೋ ಟಿವಿ ಆ್ಯಪ್‌ಗೆ ಸೈನ್ ಇನ್ ಆಗಬೇಕು
  • ಜಿಯೋಟಿವಿ ಪ್ರೀಮಿಯಂ ಟ್ಯಾಬ್ ಮೂಲಕವಾಗಿ ಪ್ರೀಮಿಯಂ ಒಟಿಟಿ ಆ್ಯಪ್‌ ಕಂಟೆಂಟ್ ಅನ್ನು ಆನಂದಿಸಬಹುದು
  • ಪ್ರತ್ಯೇಕವಾದ ಲಾಗಿನ್ ಅಥವಾ ಪಾಸ್‌ವರ್ಡ್ ಅಗತ್ಯ ಇಲ್ಲ.

ಗಮನಿಸಬೇಕಾದ ಅಂಶಗಳು:

  • ಬಳಕೆದಾರರ ಮೈಜಿಯೋ ಕೂಪನ್ ವಿಭಾಗದಲ್ಲಿ ದೊರೆಯುವ ಕೂಪನ್ ಮೂಲಕವಾಗಿ ಜಿಯೋಸಿನಿಮಾ ಪ್ರೀಮಿಯಂ ಸಬ್ ಸ್ಕ್ರಿಪ್ಷನ್ ದೊರೆಯುತ್ತದೆ. ಪ್ರೀಮಿಯಂ ಕಂಟೆಂಟ್ ಬೇಕು ಅಂತಾದಲ್ಲಿ ಜಿಯೋಸಿನಿಮಾ ಆ್ಯಪ್‌ನಲ್ಲಿ ಕೂಪನ್ ರಿಡೀಮ್ ಮಾಡಬೇಕು.
  • ತಮ್ಮ ಬಳಿ ಇರುವಂಥ ಆಯಾ ಆ್ಯಪ್‌ ಮೂಲಕವಾಗಿಯೇ ಪ್ರೈಮ್ ವಿಡಿಯೋ (ಮೊಬೈಲ್) ಮತ್ತು ಡಿಸ್ನಿ+ ಹಾಟ್ ಸ್ಟಾರ್ ಕಂಟೆಂಟ್ ಗಳನ್ನು ನೋಡಬಹುದು.
  • ಮೈಜಿಯೋ ಮೂಲಕ ಬಳಕೆದಾರರು ಅಮೆಜಾನ್ ಪ್ರೈಮ್ ಸಬ್ ಸ್ಕ್ರಿಪ್ಷನ್ ಸಕ್ರಿಯಗೊಳಿಸಬೇಕಾಗುತ್ತದೆ. ಆಪ್‌ಗೆ ಲಾಗಿನ್ ಆಗುವಾಗ ಡಿಸ್ನಿ+ ಹಾಟ್ ಸ್ಟಾರ್ ಆಕ್ಟಿವೇಟ್ ಆಗುತ್ತದೆ.
  • ಈಗಾಗಲೇ ಇರುವಂಥ ಬಳಕೆದಾರರು ಹಾಗೂ ಹೊಸ ಬಳಕೆದಾರರಿಗೆ ಈ ಪ್ಲಾನ್ ದೊರೆಯಲಿದೆ. ಡಿಸೆಂಬರ್ 15ರಿಂದ ಈ ಪ್ಲ್ಯಾನ್‌ ದೊರೆಯಲಿದೆ.

Share This Article