ಮುಂಬೈ: ಕಡಿಮೆ ಬೆಲೆಗೆ ಡೇಟಾ, ಕಡಿಮೆ ಬೆಲೆಯ ಫೀಚರ್ ಫೋನ್ ಬಿಡುಗಡೆ ಮಾಡಿದ್ದ ಜಿಯೋ ಈಗ ಟಿವಿ ವಾಹಿನಿಗಳನ್ನು ನೀಡಲು ಮುಂದಾಗಿದೆ.
200 ರೂ.ಗೆ ಎಸ್ ಡಿ ಚಾನಲ್ ಗಳು, 400 ರೂ.ಗೆ ಹೆಚ್ ಡಿ ಚಾನಲ್ ಗಳನ್ನು ನೀಡಲು ಜಿಯೋ ಸಿದ್ಧತೆ ನಡೆಸಿದ್ದು ಇದರ ಟೆಸ್ಟಿಂಗ್ ನಡೆಯುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
ಭಾರತದ ಡೈರೆಕ್ಟ್ ಟು ಹೋಮ್ (ಡಿಟಿಎಚ್) ವಲಯದಲ್ಲಿ ರಿಲಯನ್ಸ್ ನ ಹೊಸ ಪ್ರಾಜೆಕ್ಟ್ ಜಿಯೋ ಹೋಮ್ ಟಿವಿ ಸಾಕಷ್ಟು ಬದಲಾವಣೆಗಳನ್ನು ತರಲಿದೆ. ಇಎಂಬಿಎಂಎಸ್ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಜಿಯೋ ಹೋಮ್ ಟಿವಿ ಕಾರ್ಯನಿರ್ವಹಿಸಲಿದೆ ಎಂದು ವರದಿಯಾಗಿದೆ.
Advertisement
ಕೆಲ ದಿನಗಳ ಹಿಂದೆ ಹೆಚ್ ಡಿ ವಿಡಿಯೋವನ್ನು ಕೆಲವು ಡಿವೈಸ್ ಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಇನ್ನು ಗ್ರಾಹಕರು ಇಂಟರನೆಟ್ ಸೇವೆ ಇಲ್ಲದೆಯೂ ಜಿಯೋ ಹೋಮ್ ಟಿವಿ ಯನ್ನು ವೀಕ್ಷಿಸಬಹುದಾಗಿದೆ. ಇಎಮ್‍ಬಿಎಂಎಸ್ ತಂತ್ರಜ್ಞಾನ ಬಳಸಿ ಈ ಸೇವೆ ನೀಡುತ್ತದೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು ಮತ್ತಷ್ಟು ವಿವರಗಳು ಲಭ್ಯವಾಗಿಲ್ಲ. ಶೀಘ್ರದಲ್ಲಿ ಸೇವೆ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡೇಟಾ, 4ಜಿ ಫೀಚರ್ ಫೋನ್ ಆಯ್ತು, ಈಗ ಜಿಯೋದಿಂದ ಸಿಮ್ ಇರೋ ಲ್ಯಾಪ್‍ಟಾಪ್!
Advertisement
ಇಎಮ್‍ಬಿಎಂಎಸ್ ಅಂದರೆ ಏನು?
ಎಲ್‍ಟಿಇ ಬ್ರಾಡ್ ಕಾಸ್ಟ್ ಅಥವಾ evolved Multimedia Broadcast Multicast Service(ಇಎಂಬಿಎಂಎಸ್) ಅಂದರೆ ಮೊಬೈಲ್ ಟವರ್ ಮೂಲಕ ಸಿಗ್ನಲ್ ಪಡೆದು ಟಿವಿಯನ್ನು ನೋಡುವ ತಂತ್ರಜ್ಞಾನ. ಇನ್ನು ಸುಲಭವಾಗಿ ಹೇಳುವುದಿದ್ದರೆ ಈಗ ಟವರ್ ನಲ್ಲಿರುವ ನೆಟ್ ವರ್ಕ್ ಸಿಗ್ನಲ್ ಬಳಸಿಕೊಂಡು ನಾವು ಕರೆ ಮತ್ತು ಡೇಟಾಗಳನ್ನು ಬಳಸುತ್ತೇವೆಯೋ ಅದೇ ರೀತಿಯಾಗಿ ಟವರ್ ಗಳನ್ನು ಬಳಸಿಕೊಂಡು ಗ್ರಾಹಕರಿಗೆ ಟಿವಿ ವಾಹಿನಿಗಳನ್ನು ನೀಡಲು ಈಗ ಜಿಯೋ ಮುಂದಾಗಿದೆ.
Advertisement
ಸದ್ಯಕ್ಕೆ ಸಾವಿರ ಗಟ್ಟಲೆ ವೀಕ್ಷಕರು ನೋಡಲು ನೆಟ್ ವರ್ಕ್ ಸಮಸ್ಯೆ ಎದುರಾಗುತ್ತದೆ. ಹೊಸ ತಂತ್ರಜ್ಞಾನದ ಸಹಾಯದಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ. 1 ಎಂಬಿ ವಿಡಿಯೋ 1000 ಜನರ ಡಿವೈಸ್ ಗಳಲ್ಲಿ ನೆಟ್‍ವರ್ಕ್ ಮೂಲಕ ಪ್ರಸಾರವಾದಾಗ ನೆಟ್‍ವರ್ಕ್ ಮೇಲೆ 1000 ಎಂಬಿ ಲೋಡ್ ಬೀಳುತ್ತದೆ. ಆದರೆ ಇಎಮ್‍ಬಿಎಂಎಸ್ ತಂತ್ರಜ್ಞಾನದ ಮೂಲಕ ಕಡಿಮೆ ಲೋಡ್ ನಲ್ಲಿ 1000 ಡಿವೈಸ್ ಗಳಿಗೆ ವಿಡಿಯೋಗಳನ್ನು ಪ್ರಸಾರ ಮಾಡಬಹುದಾಗಿದೆ.