ಮುಂಬೈ: ಟೆಲಿಕಾಂ ಕಂಪೆನಿಗಳ ಡೇಟಾ ದರ ಸಮರಕ್ಕೆ ಕಾರಣವಾಗಿದ್ದ ಜಿಯೋ ಈಗ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದು, ಇದೇ ಆಗಸ್ಟ್ 15 ರಿಂದ ಅಧಿಕೃತವಾಗಿ ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯು ದೇಶದಲ್ಲಿ ಉದ್ಘಾಟನೆಯಾಗಲಿದೆ.
ಜಿಯೋ ಬ್ರಾಡ್‍ಬ್ಯಾಂಡ್ ಸೇವೆ ಭಾರತದ ಕೆಲವು ನಗರಗಳಲ್ಲಿ 2016 ರಿಂದಲೂ ಪ್ರಾಯೋಗಿಕವಾಗಿ ಚಾಲನೆಯಲ್ಲಿದ್ದು, ಇದೀಗ ದೇಶಾದ್ಯಂತ ಇರುವ ಒಟ್ಟು 1,100 ನಗರಗಳಿಗೆ ಸೇವೆಯನ್ನು ಒದಗಿಸಲು ಜಿಯೋ ನೋಂದಣಿಯನ್ನು ಪ್ರಾರಂಭಿಸಿದೆ. ಗ್ರಾಹಕರಿಗೆ ಒಟ್ಟಾರೆ 1 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್) ಡೌನ್‍ಲೋಡ್ ಸ್ಪೀಡ್ ಹಾಗೂ 100 ಎಂಬಿಪಿಎಸ್(ಮೆಗಾ ಬೈಟ್ ಪರ್ ಸೆಕೆಂಡ್) ಅಪ್ಲೋಡ್ ಸ್ಪೀಡ್ ನೀಡಲಿದೆ.
Advertisement
Advertisement
ಇದೇ ಆಗಸ್ಟ್ 15 ರಿಂದ ಬ್ರಾಡ್‍ಬ್ಯಾಂಡ್ ಸೇವೆ ಆರಂಭಗೊಳ್ಳಲಿದ್ದು, ಈ ಸೇವೆ ಪಡೆಯಬೇಕಾದರೆ ಗ್ರಾಹಕರು ಆನ್‍ಲೈನಲ್ಲಿ ನೋಂದಣಿ ಮಾಡಬೇಕಾಗಿರುತ್ತದೆ.
Advertisement
ಬೆಲೆ ಎಷ್ಟು?
ಜಿಯೋ ಬ್ರಾಡ್‍ಬ್ಯಾಂಡ್ ತನ್ನ ಸೇವೆಯನ್ನು 4,500 ರೂ.ಗಳಿಗೆ ನಿಗದಿಪಡಿಸಿದ್ದು, ಈ ಹಣವನ್ನು ಕಂಪೆನಿ ಮರು ಪಾವತಿ ಮಾಡುವುದಾಗಿ ತಿಳಿಸಿದೆ. ಕೇವಲ ತನ್ನ ಗೀಗಾ ರೂಟರ್ ಹಾಗೂ ಇತರೆ ಬಿಡಿಭಾಗಗಳ ಸುರಕ್ಷತೆಯ ದೃಷ್ಟಿಯಿಂದ ಭದ್ರತಾ ಠೇವಣಿಯನ್ನಾಗಿ ಈ ಮೊತ್ತವನ್ನು ಪಡೆದುಕೊಳ್ಳುತ್ತದೆ. ಈ ಹಣವನ್ನು ಪಾವತಿಸಿದ ಗ್ರಾಹಕರಿಗೆ 3 ತಿಂಗಳುಗಳವರೆಗೆ ಅನ್‍ಲಿಮಿಟೆಡ್ ಇಂಟರ್‌ನೆಟ್ ಸೇವೆಯನ್ನು 1 ಜಿಬಿಪಿಎಸ್ ಡೌನ್‍ಲೋಡ್ ಹಾಗೂ 100 ಎಂಬಿಪಿಎಸ್ ಅಪ್‍ಲೋಡ್ ಸ್ಪೀಡ್‍ನೊಂದಿಗೆ ನೀಡಲಿದೆ. ಪ್ರತಿ ತಿಂಗಳ ಪ್ಯಾಕೇಜ್‍ಗಳ ಕುರಿತು ಮಾಹಿತಿಯನ್ನು ಸದ್ಯವೇ ಬಿಡುಗಡೆಮಾಡಲಿದೆ. ನೊಂದಣಿಯನ್ನು ಯಾರು ಬೇಕಾದರೂ ಮಾಡಬಹುದು. ಆದರೆ ನೀವು ನೆಲೆಸಿರುವ ಸ್ಥಳದಲ್ಲಿ ಈ ಸೇವೆ ಆರಂಭದಲ್ಲೇ ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಸಿಗಲಿದೆ.
Advertisement
ಗೀಗಾ ಟಿವಿ:
ಬ್ಯಾಡ್‍ಬ್ಯಾಂಡ್ ಸೇವೆಯ ಜೊತೆಗೆ ಜಿಯೋ ತನ್ನ ನೂತನ ಜಿಯೋಫೈಬರ್ ಸೇವೆಯೊಂದಿಗೆ ಜಿಯೋ ಗೀಗಾ ಟಿವಿಯ ಸೌಲಭ್ಯವನ್ನು ನೀಡಲಿದೆ. ಗೀಗಾ ರೂಟರ್ ಮನೆ ಹಾಗೂ ಕಚೇರಿಯಲ್ಲಿನ ವಾಲ್-ಟು-ವಾಲ್ ಹೈ ಸ್ಪೀಡ್ ವೈ-ಫೈ ವದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಗೀಗಾ ಟಿವಿಯನ್ನು ಗ್ರಾಹಕರು ತಮ್ಮ ಸ್ಮಾರ್ಟ್ ಟಿವಿಗಳಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ 4ಕೆ ವಿಡಿಯೋ ಹಾಗೂ ಅತ್ಯಾಧುನಿಕ ವಿಡಿಯೋ ಗೇಮ್‍ಗಳನ್ನು ಯಾವುದೇ ಅಡೆತಡೆಯಿಲ್ಲದೆ ಪಡೆಯಬಹುದಾಗಿದೆ.
ಜಿಯೋ ಸಂಸ್ಥೆಯು ಗಿಗಾ ಟಿವಿ ಸೆಟ್-ಟಾಪ್ ಬಾಕ್ಸ್ ಜೊತೆಗೆ ವಾಯ್ಸ್ ಆಧರಿತ ರಿಮೋಟ್ ಗಳನ್ನು ನೀಡಲಿದೆ. ಈ ರಿಮೋಟ್ ಗಳ ಮೂಲಕ ಗ್ರಾಹಕರು ವಾಯ್ಸ್ ಮೂಲಕವೇ ತಮಗೇ ಬೇಕಾದ ಚಾನಲ್ ಹಾಗೂ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು ಗಿಗಾ ಟಿವಿಯಲ್ಲಿ ಸುಮಾರು 600 ಕ್ಕೂ ಹೆಚ್ಚಿನ ಚಾನೆಲ್‍ಗಳು, ಲಕ್ಷಾಂತರ ಹಾಡುಗಳನ್ನು ವೀಕ್ಷಿಸಬಹುದಾಗಿದೆ. ಇದಲ್ಲದೇ ತನ್ನ ಜಿಯೋ ಸಿನಿಮಾ, ಜಿಯೋ ಟಿವಿ ಕಾಲ್, ಜಿಯೋ ಸ್ಮಾರ್ಟ್ ಲಿವಿಂಗ್, ಜಿಯೋ ಕ್ಲೌಡ್, ಮೀಡಿಯಾಶೇರ್ ಮತ್ತು ಜಿಯೋ ಸ್ಟೋರ್ಸ್ ನಂತಹ ಅಪ್ಲಿಕೇಶನ್ ತಮ್ಮ ಟಿವಿಗಳಲ್ಲಿ ಪಡೆದುಕೊಳ್ಳಬಹುದು.
ಜಿಯೋ ಬ್ರಾಡ್‍ಬ್ಯಾಂಡ್ ನೆಟ್‍ವರ್ಕ್ ಅಡಿಯಲ್ಲಿ ಇಂಟರ್‌ನೆಟ್ ಬಳಕೆಮಾಡಿಕೊಂಡು ಮನೆಯನ್ನು ಸ್ಮಾರ್ಟ್ ಹೋಮ್ ಆಗಿ ಬದಲಾಯಿಸಿಕೊಳ್ಳಬಹುದು. ಮನೆಯಲ್ಲಿನ ಆಡಿಯೊ ಡಾಂಗಲ್, ವಿಡಿಯೋ ಡಾಂಗಲ್, ಸ್ಮಾರ್ಟ್ ಸ್ಪೀಕರ್, ವೈ-ಫೈ ಎಕ್ಸ್ಟೆಂಡರ್, ಸ್ಮಾರ್ಟ್ ಪ್ಲಗ್, ಸೆಕ್ಯುರಿಟಿ ಕ್ಯಾಮೆರಾ ಮತ್ತು ಟಿವಿ ಕ್ಯಾಮೆರಾ ಸೇರಿದಂತೆ ಹಲವು ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ನಿಯಂತ್ರಿಸಬಹುದು. ಮನೆಯ ತಾಪಮಾನ, ಬೆಳಕು, ಗ್ಯಾಸ್ ಮತ್ತು ನೀರಿನ ಸೋರಿಕೆಯನ್ನು ಸ್ಮಾರ್ಟ್ ಫೋನ್ ಬಳಸಿಕೊಂಡು ಗೀಗಾ ಟಿವಿಯೊಂದಿಗೆ ನಿಯಂತ್ರಿಬಹುದು ಎಂದು ತಿಳಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews