ಬಳ್ಳಾರಿ: ಜನರಿಗೆ ಕೆಲಸ ಕೊಡಿಸುತ್ತೀವಿ ಭೂಮಿ ಕೊಡಿ, ಕರೆಂಟ್ ಕೊಡಿ, ನೀರು ಕೊಡಿ ಎಂದು ಆ ಕಂಪನಿ ಸಿಕ್ಕಾಪಟ್ಟೆ ಪುಂಗಿ ಊದಿತ್ತು. ಆದರೆ ಎಲ್ಲಾ ಪಡೆದ ಮೇಲೆ ಈಗ ಕೈ ಎತ್ತಿದ್ದಾರೆ.
ಬಳ್ಳಾರಿಯ ತೋರಣಗಲ್‍ನಲ್ಲಿರೋ ಜಿಂದಾಲ್ ಕಾರ್ಖಾನೆ ದೇಶದಲ್ಲೇ ಅತಿ ದೊಡ್ಡದಾದ ಸ್ಟೀಲ್ ಕಾರ್ಖಾನೆ. ಈ ಕಾರ್ಖಾನೆ ಶುರು ಮಾಡಲು ಸರ್ಕಾರ 3 ಸಾವಿರ ಎಕರೆ ಭೂಮಿ ನೀಡಿತ್ತು. ಜೊತೆಗೆ ಕರೆಂಟ್, ನೀರು, ರೋಡ್ ವ್ಯವಸ್ಥೆ ಕೂಡಾ ಮಾಡಿಸಿದ್ದರು. ತೋರಣಗಲ್ ಹಾಗೂ ವಡ್ಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫ್ಯಾಕ್ಟರಿ ಕಟ್ಟಲಾಗಿದೆ. ಆದರೆ ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಪ್ರತಿ ವರ್ಷ ತೆರಿಗೆ ಕಟ್ಟುತ್ತಿಲ್ಲ. ಎರಡು ಗ್ರಾಮ ಪಂಚಾಯತ್‍ಗಳಿಗೆ ಪ್ರತಿ ವರ್ಷ 5 ಕೋಟಿ ರೂಪಾಯಿ ವಂಚನೆ ಮಾಡುತ್ತಿದೆ. ಆ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
Advertisement
Advertisement
ಜಿಂದಾಲ್ ಕಾರ್ಖಾನೆ ವಂಚನೆ ಮಾಡೋಕೆ ತೋರಣಗಲ್ ಹಾಗೂ ವಡ್ಡು ಗ್ರಾಮ ಪಂಚಾಯತ್ ಪಿಡಿಒ ಹಾಗೂ ಅಧ್ಯಕ್ಷರು ಸಾಥ್ ನೀಡಿದ್ದಾರೆ. ವರ್ಷಕ್ಕೆ ಕೇವಲ 36 ಲಕ್ಷ ರೂಪಾಯಿ ಮಾತ್ರ ತೆರಿಗೆ ಪಾವತಿ ಮಾಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಅಕ್ರಮ ಹಂಗಾಮಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ಬಂದಿದ್ದು, ತನಿಖೆ ನಡೆಸೋದಾಗಿ ಹೇಳಿದ್ದಾರೆ.