ವಾಷಿಂಗ್ಟನ್: ಡೆಮಾಕ್ರಟಿಕ್ ನಾಯಕ, ಅಮೆರಿಕ ಮಾಜಿ ಅಧ್ಯಕ್ಷ (Former US President) ಜಿಮ್ಮಿ ಕಾರ್ಟರ್ (100) ಜಾರ್ಜಿಯಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
ಮಾನವೀಯ ಕೆಲಸಕ್ಕಾಗಿ 2002 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದ ಕಾರ್ಟರ್(Jimmy Carter) ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯಸ್ಥಿತಿಕೆ ನಡೆಸಿ ಶಾಂತಿ ಮಾತುಕತೆ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದರು.
Advertisement
1977 ರಿಂದ 1981 ರವರೆಗೆ 39ನೇ ಅಮೆರಿಕದ ಅಧ್ಯಕ್ಷರಾಗಿ ಜಿಮ್ಮಿ ಕಾರ್ಟರ್ ಸೇವೆ ಸಲ್ಲಿಸಿದ್ದರು. 1980 ರ ಚುನಾವಣೆಯಲ್ಲಿ ನಟ, ರಾಜಕಾರಣಿ ರೊನಾಲ್ಡ್ ರೇಗನ್ ಅವರ ವಿರುದ್ಧ ಸೋತಿದ್ದರು.
Advertisement
Today, America and the world lost an extraordinary leader, statesman and humanitarian. pic.twitter.com/Ki7Rhbent0
— President Biden (@POTUS) December 29, 2024
Advertisement
ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಮೂರನೇ ಅಧ್ಯಕ್ಷ ಕಾರ್ಟರ್. ಇವರ ಗೌರವಾರ್ಥವಾಗಿ ಹರಿಯಾಣದ ಗ್ರಾಮಕ್ಕೆ ಕಾರ್ಟರ್‌ಪುರಿ ಎಂದು ಹೆಸರಿಡಲಾಗಿತ್ತು. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಸಜ್ಜಾದ ಕಾಫಿನಾಡು – ಹೋಂ ಸ್ಟೇ, ರೆಸಾರ್ಟ್ 90% ಭರ್ತಿ
Advertisement
ಜಾಕ್, ಚಿಪ್, ಜೆಫ್, ಆ್ಯಮಿ ಎಂಬ ನಾಲ್ವರು ಮಕ್ಕಳನ್ನು ಅಗಲಿರುವ ಜಿಮ್ಮಿ ಅವರಿಗೆ 11 ಮಂದಿ ಮೊಮ್ಮಕ್ಕಳು, 14 ಮಂದಿ ಮರಿಮೊಮ್ಮಕ್ಕಳಿದ್ದಾರೆ.
Over six decades, Jill and I had the honor of calling Jimmy Carter a dear friend.
But, what’s extraordinary about Jimmy Carter, though, is that millions of people throughout America and the world who never met him thought of him as a dear friend as well. pic.twitter.com/irknhZ6CJY
— President Biden (@POTUS) December 29, 2024
ನನ್ನ ತಂದೆ ನನಗೆ ಮಾತ್ರವಲ್ಲ, ಶಾಂತಿ, ಮಾನವ ಹಕ್ಕುಗಳು ಮತ್ತು ನಿಸ್ವಾರ್ಥ ಪ್ರೀತಿಯನ್ನು ನಂಬುವ ಪ್ರತಿಯೊಬ್ಬರಿಗೂ ಹೀರೋ ಆಗಿದ್ದರು ಎಂದು ಚಿಪ್ ಕಾರ್ಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂದು ಅಮೆರಿಕ ಮತ್ತು ಜಗತ್ತು ಅಸಾಧಾರಣ ನಾಯಕ, ರಾಜಕಾರಣಿ ಮತ್ತು ಮಾನವತಾವಾದಿಯನ್ನು ಕಳೆದುಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.