ಕೀವ್: ವ್ಯಕ್ತಿಯೊಬ್ಬ ಸೆಕ್ಸ್ ಗೆ ನಿರಾಕರಿಸಿದ ತನ್ನ ಗೆಳತಿಯ ತಲೆಗೆ ಗುಂಡು ಹಾರಿಸಿ ಕೊಲೆಗೈದು, ಆಕೆಯ ರುಂಡ ಹಾಗೂ ಆಭರಣಗಳನ್ನ ಚೀಲದಲ್ಲಿ ಬಚ್ಚಿಟ್ಟಿದ್ದ ಘಟನೆ ಉಕ್ರೇನ್ ನಲ್ಲಿ ನಡೆದಿದೆ.
29 ವರ್ಷದ ಅನ್ನಾ ಎರ್ಜಿವಾ ಕೊಲೆಯಾದ ಮಹಿಳೆ. ಎರ್ಜಿವಾ ತನ್ನ ಮಾಜಿ ಗೆಳಯನೊಂದಿಗೆ ಆನ್‍ಲೈನ್ ನಲ್ಲಿ ಚಾಟ್ ಮಾಡ್ತಿದ್ದಳು. ಚಾಟ್ ಮಾಡುತ್ತಾ ಮನೆಗೆ ಬಂದ ಗೆಳಯ ಎರ್ಜಿವಾಳನ್ನು ಸೆಕ್ಸ್ ಗೆ ಆಹ್ವಾನಿಸಿದ್ದಾನೆ. ಆದ್ರೆ ಎರ್ಜಿವಾ ಸೆಕ್ಸ್ ಗೆ ನಿರಾಕರಿಸಿದ್ದಾರೆ. ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ಗೆಳೆಯ ಆಕೆಯ ಮೇಲೆ ಅತ್ಯಾಚಾರ ಎಸೆಗಲು ಮುಂದಾಗಿದ್ದಾನೆ. ಅತ್ಯಾಚಾರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಹಾಯಕ್ಕಾಗಿ ಅಲಾರಂ ಬಾರಿಸಲು ಎರ್ಜಿವಾ ಮುಂದಾಗಿದ್ದಾರೆ. ಈ ವೇಳೆ ಅಲಾರಂ ಕಿತ್ತೆಸೆದು ಎರ್ಜಿವಾ ತಲೆಗೆ ಗುಂಡು ಹಾರಿಸಿದ್ದಾನೆ.
Advertisement
Advertisement
ಎರ್ಜಿವಾ ಫೋನ್ ರಿಸೀವ್ ಮಾಡದ ಕಾರಣ ಪೋಷಕರು ಮಗಳು ವಾಸವಾಗಿದ್ದ ದಕ್ಷಿಣ ಉಕ್ರೇನ್ ನ ಒಡೆಸ್ಸಾ ಮನೆಗೆ ಬಂದಿದ್ದಾರೆ. ಮನೆಗೆ ಬಂದಾಗ ರುಂಡವಿಲ್ಲದ ಎರ್ಜಿವಾ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಮನೆಯ ಕೋಣೆಯೆಲ್ಲಾ ರಕ್ತಮಯವಾಗಿತ್ತು. ಕೂಡಲೇ ನಾವು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆವು ಅಂತಾ ಎರ್ಜಿವಾ ತಂದೆ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
Advertisement
ಪೊಲೀಸರು ಎರ್ಜಿವಾ ಮಾಜಿ ಗೆಳೆಯ ಮತ್ತು ಸಹಪಾಠಿಯಾಗಿದ್ದ 29 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಯುವಕ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದೇನೆ ಅಂತಾ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
Advertisement
ಎರ್ಜಿವಾಗೆ ಶೂಟ್ ಮಾಡಿದ ಗುಂಡುಗಳು ಪತ್ತೆಯಾಗಿಲ್ಲ. ಆದ್ರೆ ಎರ್ಜಿವಾ ರುಂಡವನ್ನು ಮತ್ತು ಆಕೆಯ ಆಭರಣಗಳನ್ನು ಚೀಲದಲ್ಲಿ ತುಂಬಿ ಹೂತಿಟ್ಟಿದ್ದ ಎಂದು ವರದಿಯಾಗಿದೆ. ಸದ್ಯ ಎರ್ಜಿವಾ ಕೊಲೆ ಆರೋಪಿಯನ್ನು ಜೈಲಿನಲ್ಲಿ ಇರಿಸಲಾಗಿದೆ.