-ಬಂಡೀಪುರದಲ್ಲಿ ತರಬೇತಿಗೆ ಸಿದ್ಧತೆ
ಬೆಂಗಳೂರು: ರಾಜಧಾನಿಯಲ್ಲಿ ಸ್ಫೋಟಿಸಬೇಕು, ಹಿಂದೂ ಮುಖಂಡರ ಹತ್ಯಾಕಾಂಡ ನಡೆಸಬೇಕು ಅಂದುಕೊಂಡಿದ್ದ ಜಿಹಾದಿ ಗ್ಯಾಂಗ್ ಮಾಡಬಾರದ ಕೆಲಸ ಮಾಡೋದಕ್ಕೆ ತಯಾರಾಗಿ ನಿಂತಿತ್ತು. ಅಷ್ಟೇ ಅಲ್ಲದೆ ಇದಕ್ಕೆ ಬಂಡೀಪುರದಲ್ಲಿ ತರಬೇತಿಗಾಗಿ ಸಜ್ಜಾಗಿತ್ತು ಎಂಬ ಸ್ಫೋಟಕ ಮಾಹಿತಿ ತಿಳಿದು ಬಂದಿದೆ.
ಹೌದು. ಗುರುವಾರ ಸಿಸಿಬಿ ಪೊಲೀಸರಿಂದ ಬಂಧನವಾಗಿದ್ದ ಮೆಹಬೂಬ್ ಪಾಷಾ ಸ್ಫೋಟಕ ಮಾಹಿತಿ ಹೊರಹಾಕಿದ್ದು, ಕಳೆದ 6 ತಿಂಗಳಿದ ಬಾಂಬ್ ತಯಾರಿಕೆ ಟ್ರೈನಿಂಗ್ ನೀಡಲಾಗುತ್ತಿತ್ತು ಎಂದು ಹೇಳಿದ್ದಾನೆ. ಬೆಂಗಳೂರಿನ ಗುರಪ್ಪನಪಾಳ್ಯದ ಮನೆಗಳಲ್ಲಿ ಬಾಂಬ್ ತಯಾರಿಕೆ ಟ್ರೈನಿಂಗ್ ನೀಡಿದ್ದು, ಕಂಪ್ಯೂಟರ್ ಸೈನ್ಸ್ ಪದವೀಧರನಾಗಿರುವ ಬಂಧಿತ ಅಜ್ಮತ್ತುಲ್ಲ ಇದರ ರೂವಾರಿಯಾಗಿದ್ದನು ಎಂದು ಆರೋಪಿ ಬಾಯಿಬಿಟ್ಟಿದ್ದಾನೆ. ಇದನ್ನೂ ಓದಿ: ಮೊಬೈಲ್ ಸಿಮ್ ಖರೀದಿಸಿ ಸಿಕ್ಕಿಬಿದ್ದ ಜಿಹಾದಿ ಉಗ್ರರು
Advertisement
Advertisement
ಖ್ವಾಜಾ ಮೋಹಿನುದ್ದೀನ್ ಹಾಗೂ ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಂದ ಬಂಧಿತರು ಬಾಂಬ್ ತಯಾರಿಕೆ ಟ್ರೈನಿಂಗ್ ಅನ್ನು ಪಡೆದುಕೊಳ್ಳುತ್ತಿದ್ದರು. ಮಾಸ್ಟರ್ ಮೈಂಡ್‍ಗಳು ಬಾಂಬ್ ಬ್ಲಾಸ್ಟ್ ಮಾಡೋದಕ್ಕೆ ಆಗದೇ ಇದ್ದರೆ ಗನ್ ನಿಂದ ಶೂಟ್ ಮಾಡೋದನ್ನ ಆದರೂ ಕಲಿತುಕೊಳ್ಳೋದಕ್ಕೆ ಸೂಚನೆ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಅದಕ್ಕಾಗಿ ಬಂಡಿಪುರದ ಅರಣ್ಯದಲ್ಲಿ ಗನ್ ಶೂಟಿಂಗ್ ತರಬೇತಿಗೆ ಸಿದ್ಧತೆ ಮಾಡಲಾಗಿತ್ತು. ಕಣ್ಣೂರಿನ ಮಾದರಿಯಲ್ಲಿ ಗನ್ ಶೂಟಿಂಗ್ ತರಬೇತಿಗೆ ಸಿದ್ಧತೆಯಾಗಿತ್ತು. ಶೂಟಿಂಗ್ ಜಾಗವನ್ನೂ ಫಿಕ್ಸ್ ಮಾಡಿಕೊಂಡಿದ್ದ ಶಂಕಿತ ಉಗ್ರರು ಎಲ್ಲಾ ತಯಾರಿಯನ್ನು ನಡೆಸಿದ್ದರು. ತರಬೇತಿಗಾಗಿ ಖ್ವಾಜಾ ಮೊಹಿನುದ್ದೀನ್ ಮೂರು ಗನ್ ಸಪ್ಲೈ ಕೂಡ ಮಾಡಿದ್ದನು. ಕಳೆದ ಡಿ. 24ರಂದು ಗುರಪ್ಪನಪಾಳ್ಯಕ್ಕೆ ಗನ್ ಸಪ್ಲೈ ಮಾಡಿ ಖ್ವಾಜಾ ಹೋಗಿದ್ದನು. ಗನ್ ಸರಬರಾಜು ಬೆನ್ನತ್ತಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.