ಗಾಂಧೀನಗರ: ಗುಜರಾತ್‍ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಗುವಾಹಟಿ ವಿಮಾನ ನಿಲ್ದಾಣದಿಂದ ಕೊಕ್ರಜಾರ್‍ಗೆ ಕರೆದೊಯ್ಯುವ ವೇಳೆ ಮಹಿಳಾ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ, ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಮೂಲಕ ಹಾದು ಹೋಗುತ್ತಿದ್ದ ವೇಳೆ ಜಿಗ್ನೇಶ್ ಮೇವಾನಿ ಅವರು ತನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ಅಸಭ್ಯ ಸನ್ನೆಗಳನ್ನು ಮಾಡಿದ್ದಾರೆ ಮತ್ತು ಕಾರಿನ ಸೀಟಿನಿಂದ ತನ್ನನ್ನು ತಳ್ಳಿರುವುದಾಗಿ ಕಾನ್‍ಸ್ಟೇಬಲ್ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 2025ರವರೆಗೂ ನಿತೀಶ್ ಕುಮಾರ್ ಸಿಎಂ ಆಗಿರುತ್ತಾರೆ: ಸುಶೀಲ್ ಕುಮಾರ್ ಮೋದಿ
Advertisement
Advertisement
ಪ್ರಧಾನಿ ಮೋದಿ ಅವರು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಮೇವಾನಿ ಅವರು ಟ್ವೀಟ್ ಮಾಡಿದ್ದರು. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿತ್ತು. ಹಾಗಾಗಿ ಈ ಕುರಿತಂತೆ ಅಸ್ಸಾಂ ಕೋಕ್ರಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಏಪ್ರಿಲ್ 21 ರಂದು ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ಬಂಧನವಾದ 4 ದಿನಗಳ ಬಳಿಕ ನ್ಯಾಯಾಲಯ ಜಾಮೀನು ನೀಡಿತಾದರೂ, ಅದು ಮೇವಾನಿಗೆ ತೃಪ್ತಿಕರವಾಗಿರಲಿಲ್ಲ.
Advertisement
ಈ ಘಟನ ಕುರಿತಂತೆ ಪ್ರತಿಕ್ರಿಯಿಸಿದ ಜಿಗ್ನೇಶ್ ಮೇವಾನಿ, ಇದು ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‍ಎಸ್) ಪಿತೂರಿಯಾಗಿದೆ. ನನ್ನ ಇಮೇಜ್ ಹಾಳು ಮಾಡಲು ಅವರು ಹೀಗೆ ಮಾಡಿದ್ದಾರೆ. ಇದು ಅವರ ಪೂರ್ವನಿಯೋಜಿತ ವ್ಯವಸ್ಥೆಯಾಗಿದೆ. ಇದೇ ರೀತಿ ರೋಹಿತ್ ವೇಮುಲಾಗೆ ಮತ್ತು ಚಂದ್ರಶೇಖರ್ ಆಜಾದ್‍ಗೆ ಮಾಡಿದ್ದರು. ಈಗ ನನ್ನನ್ನು ಗುರಿಯಾಗಿಸಿಕೊಂಡು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಕಾಲುವೆಗೆ ಈಜಲು ಹೋದ ಬಾಲಕಿಯರು ನೀರುಪಾಲು
Advertisement
3 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಜಿಗ್ನೇಶ್ ಮೇವಾನಿ ಅವರಿಗೆ ಜಾಮೀನು ಸಿಕ್ಕರೂ, ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರಿನ ಹಿನ್ನೆಲೆ ಸದ್ಯ ಹೊಸ ಪ್ರಕರಣ ದಾಖಲಿಸಿ ಜಿಗ್ನೇಶ್ ಮೇವಾನಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಐಪಿಸಿ ಸೆಕ್ಷನ್ 323, 353 ಹಾಗೂ 354 ಅಡಿ ಜಿಗ್ನೇಶ್ ಮೇವಾನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Gujarat | Congress Vadgam MLA Jignesh Mevani arrested by Assam Police from Palanpur Circuit House around 11:30 pm last night, as per Mevani’s team. “Police yet to share FIR copy with us. Prima facie, we have been informed about some cases filed against him in Assam,” they added pic.twitter.com/lYkKzCwOpu
— ANI (@ANI) April 20, 2022
ಏಪ್ರಿಲ್ 18ರಂದು ಜಿಗ್ನೇಶ್, ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಗೋಡ್ಸೆಯನ್ನು ದೇವರಾಗಿ ಕಾಣುತ್ತಾರೆ ಹಾಗೂ ಪೂಜಿಸುತ್ತಾರೆ. ಕೋಮು ಗಲಭೆ ನಡೆದಿರುವ ಹಿಮ್ಮತ್‍ನಗರ, ಕಂಭಾತ್ ಹಾಗೂ ವೆರಾವಲ್‍ನಲ್ಲಿ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಪ್ರಧಾನಿ ಏಪ್ರಿಲ್ 20ಕ್ಕೆ ಗುಜರಾತ್‍ಗೆ ಭೇಟಿ ನೀಡಿದಾಗ ಆಗ್ರಹಿಸಬೇಕು ಎಂದು ಟ್ವೀಟ್ ಮಾಡಿದ್ದರು. ನಂತರ ಅದನ್ನು ಅಳಿಸಿ ಹಾಕಿದ್ದರು. ಇದಾದ ಬಳಿಕ ಏಪ್ರಿಲ್ 20ರಂದು ಶಾಸಕನನ್ನು ಬಂಧಿಸಲಾಗಿತ್ತು. 3 ದಿನ ಪೊಲೀಸ್ ಕಸ್ಟಡಿ ಬಳಿಕ ಕೋರ್ಟ್‍ಗೆ ಹಾಜರುಪಡಿಸಲಾಗಿತ್ತು.