Connect with us

Latest

ಪ್ರಧಾನಿ ಮೋದಿ ಒಬ್ಬ `ನಮಕ್ ಹರಾಮ್’- ಜಿಗ್ನೇಶ್ ಮೇವಾನಿ

Published

on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಒಬ್ಬ ನಮಕ್ ಹರಾಮ್ ಎಂದು ಕರೆಯುವ ಮೂಲಕ ಗುಜರಾತ್ ಪಕ್ಷೇತರ ಶಾಸಕ, ದಲಿತ ಮುಖಂಡ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

ಪಾಟ್ನಾದ ಗಾಂಧಿ ಮೈದಾನದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಹಮ್ಮಿಕೊಂಡಿದ್ದ ಬೃಹತ್ ರ‍್ಯಾಲಿಯೊಂದರಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಹೊರ ರಾಜ್ಯಗಳಿಂದ ಗುಜರಾತ್‍ಗೆ ವಲಸೆ ಬರುತ್ತಿರುವ ಕಾರ್ಮಿಕರ ಮೇಲಿನ ದೌರ್ಜನ್ಯದ ಬಗ್ಗೆ ಪ್ರಧಾನಿ ಮೋದಿ ಜಾಣ ಮೌನವನ್ನು ವಹಿಸಿದ್ದಾರೆ ಎನ್ನುವ ಬರದಲ್ಲಿ ಅವರನ್ನು ನಮಕ್ ಹರಾಮ್ (ಅಪ್ರಾಮಾಣಿಕ) ಎಂದು ಹೇಳಿ ಟೀಕಿಸಿದ್ದಾರೆ.

ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಗುಜರಾತಿನ ಅಹಮದಾಬಾದ್, ಸೂರತ್, ರಾಜ್‍ಕೋಟ್ ಮತ್ತು ಬರೋಡದಲ್ಲಿನ ರಸ್ತೆ, ಸೇತುವೆ ಹಾಗೂ ಫ್ಲೈ ಓವರ್ ಗಳ ಕಾಮಗಾರಿ ಕೆಲಸಗಳಲ್ಲಿ ಮಧ್ಯಪ್ರದೇಶ, ಜಾರ್ಖಂಡ್, ಉತ್ತರಪ್ರದೇಶ ಹಾಗೂ ಬಿಹಾರದಿಂದ ಅಪಾರ ಪ್ರಮಾಣದ ಕಾರ್ಮಿಕರು ವಲಸೆ ಬರುತ್ತಿದ್ದಾರೆ. ಕಳೆದ 12 ರಿಂದ 15 ದಿನಗಳಲ್ಲಿ ಇಂತಹ ವಲಸೆ ಬಂದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದರ ಎಲ್ಲಾ ಮಾಹಿತಿ ಗೊತ್ತಿದ್ದರೂ, ನಮಕ್ ಹರಾಮ್ ಒಂದು ಸಣ್ಣ ಮಾತನ್ನು ಎತ್ತಿಲ್ಲ ಎಂದು ಹೇಳಿ ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ಮೇವಾನಿ `ಬಿಜೆಪಿ ಹಠಾವೋ, ದೇಶ್ ಬಚಾವೊ’ ಹಾಗೂ `ಶೇಮ್ ಆನ್ ಯು ನರೇಂದ್ರ ಮೋದಿ, ಶೇಮ್ ಆನ್ ಯೂ’ ಎಂದು ಆರು ಬಾರಿ ಕೂಗಿದ್ದರು. ಕೇಂದ್ರ ಸರ್ಕಾರದ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆಯನ್ನು ಸುಧಾರಿಸಲು ಅಸಮರ್ಥವಾಗಿದೆ ಆರೋಪಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *