ನಿಷ್ಟ್ರಯೋಜಕ ಬಿಜೆಪಿ ಸರ್ಕಾರಕ್ಕೆ ಮತ ಹಾಕಬೇಡಿ: ಜಿಗ್ನೇಶ್ ಮೇವಾನಿ

Public TV
1 Min Read
jignesh mevani

ಗಾಂಧಿನಗರ: ಈಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆಡಳಿತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರವನ್ನು `ನಿಷ್ಟ್ರಯೋಜಕ’ ಸರ್ಕಾರ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿನ್ನೆ ಸಂಜೆ ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸಿದ ಮೇವಾನಿಗೆ ಬೆಂಬಲಿಗರಿಂದ ಅದ್ಧೂರಿ ಸ್ವಾಗತ ದೊರೆಯಿತು. ಬಂಧನದ ಸಂದರ್ಭದಲ್ಲಿ ಹೊರಬರಲು ಬೆಂಬಲ ನೀಡಿದ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಹಾಗೂ ಅಸ್ಸಾಂನ ವಿರೋಧ ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಸೀದಿ ಬಳಿ ನಿಂತು ಜೈ ಶ್ರೀರಾಮ್ ಘೋಷಣೆ ಕೂಗಿ ಹನುಮಾನ್ ಚಾಲೀಸಾ ಪಠಿಸಿದ MNS

 

jignesh mevani

ಬರುತ್ತಿದ್ದಂತೆ ವಾಗ್ದಾಳಿ ನಡೆಸಿದ ಮೇವಾನಿ, ಗುಜರಾತ್ ಸರ್ಕಾರ ನಿಷ್ಪ್ರೈೋಜಕ ಎನ್ನಲು ಬಯಸುತ್ತೇನೆ. ಇನ್ಮುಂದೆ ರಾಜ್ಯದ ಜನತೆ ಬಿಜೆಪಿಗೆ ಮತ ಹಾಕುವುದಿಲ್ಲ, ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಭೆಗೆ ಎಂದಿಗೂ ಹಾಜರಾಗುವುದಿಲ್ಲವೆಂದು ಪ್ರತಿಜ್ಞೆ ಸ್ವೀಕರಿಸುವಂತೆ ಕರೆ ನೀಡಿದರು. ಇದನ್ನೂ ಓದಿ: 2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್

ಒಬ್ಬ ಶಾಸಕನನ್ನು ಅಪಹರಣ ಮಾಡಿದರೂ ಏನೂ ಮಾಡದ ಈ ಸರ್ಕಾರ ಅತ್ಯಂತ ನಿಷ್ಟ್ರಯೋಜಕ. ಗುಜರಾತ್‌ನಲ್ಲಿ ಅಸ್ಸಾಂ ಪೊಲೀಸರು ಬಂಧಿಸುವ ಮೂಲಕ ಇಲ್ಲಿನ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

jignesh mevani

ಈಚೆಗೆ ಪ್ರಧಾನಿ ನರೇಂದ್ರಮೋದಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪದ ಮೇಲೆ ಮೇವಾನಿ ಅವರನ್ನು ಅಸ್ಸಾಂನ ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಜಾಮೀನಿನ ಮೇಲೆ ನ್ಯಾಯಾಲಯ ಬಿಡುಗಡೆಗೊಳಿಸಿತ್ತು. ನಿನ್ನೆ ಗುಜರಾತ್‌ಗೆ ಆಗಮಿಸುತ್ತಿದ್ದಂತೆ ವಾಗ್ದಾಳಿ ನಡೆಸಲು ಮುಂದಾಗಿದ್ದಾರೆ.

Share This Article