ಬೆಂಗಳೂರು: ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದ್ದು, ಪಾಲಿಕೆಯಿಂದ ಲೈಸೆನ್ಸ್ ಪಡೆದಿಲ್ಲ ಎಂದು ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.
ಹಿಂದವೀ ಮೀಟ್ ಮಾರ್ಟ್ ಹಲಾಲ್ ಕಟ್ ವಿರುದ್ಧ ಅಭಿಯಾನ ನಡೆಸಿದ್ದರು. ಅವರು ಹಲಾಲ್ ಕಟ್‍ಗೆ ಸೈಡ್ ಹೊಡೆಯಲು ಜಟ್ಕಾ ಕಟ್ ಮಾರಾಟ ಮಾಡತ್ತಿದ್ದು, ಆದರೆ ಇದೀಗ ಹಿಂದವೀ ಮೀಟ್ ಮಾರ್ಟ್‍ಗಳು ಅಂಗಡಿಯನ್ನು ತೆರೆಯಲು ಪಾಲಿಕೆಯಿಂದ ಲೈಸೆನ್ಸ್ ಪಡೆದಿಲ್ಲ ಎನ್ನುವ ಕಾರಣಕ್ಕೆ ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ನೋಟಿಸ್ ನೀಡಿದೆ.
Advertisement
Advertisement
ಬಿಬಿಎಂಪಿ ಪಶುಪಾಲನೆ (ಆರ್.ಆರ್ ನಗರ ವಲಯ) ನೋಟಿಸ್‍ನ್ನು ಜಾರಿ ಮಾಡಿದ್ದು, ಪಶುಪಾಲನೆ ಸಹಾಯಕ ನಿರ್ದೇಶಕರಿಂದ ಜಟ್ಕಾ ಮಳಿಗೆಗಳಿಗೆ ನೋಟಿಸ್ ಹೋಗಿದೆ. ಪರವಾನಗಿ ಪಡೆಯದೆಯೇ ಅಂಗಡಿಗಳನ್ನು ತೆರೆದಿರುವ ಪರಿಣಾಮವಾಗಿ ಬಿಬಿಎಂಪಿ ಪಶುಪಾಲನೆ ಸಹಾಯಕ ನಿರ್ದೇಶಕರಿಂದ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಮೇ 4ರವರೆಗೆ ಪೊಲೀಸ್, ಎಲ್ಲಆಡಳಿತ ಅಧಿಕಾರಿಗಳ ರಜೆ ರದ್ದು- ಯೋಗಿ ಆದಿತ್ಯನಾಥ್
Advertisement
ಇದೇ ಏಪ್ರಿಲ್ 12ರಂದು ನೋಟಿಸ್ ನೀಡಿರುವ ಬಿಬಿಎಂಪಿ ಪರವಾನಗಿ ಇಲ್ಲದಿರುವುದು ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖಿಸಿದೆ. ನೋಟಿಸ್ ನೀಡಿದ ಒಂದು ವಾರದೊಳಗೆ ಪರವಾನಗಿ ಪಡೆಯುವಂತೆ ಆದೇಶಿಸಲಾಗಿದೆ. ಇಲ್ಲವಾದರೆ ಮಳಿಗೆಗೆ ಬೀಗ ಹಾಕುವುದಾಗಿ ಮೌಖಿಕ ಎಚ್ಚರಿಕೆ ನೀಡಿದೆ.
Advertisement
ರಾಜರಾಜೇಶ್ವರಿನಗರದ ವಲಯ ಕಚೇರಿಯಿಂದ ಉಲ್ಲಾಳದ ಹಿಂದವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡಗೆ ಬಿಬಿಎಂಪಿ ನೋಟಿಸ್ ನೀಡಿದ್ದು, ಕೇವಲ ಕೋಳಿ ಅಂಗಡಿಯಾದ್ರೆ ಪರವಾನಗಿಗೆ 2,500 ರೂ. ಶುಲ್ಕ ನೀಡಬೇಕು. ಕೋಳಿ ಅಂಗಡಿ ಜೊತೆಗೆ ಮಟನ್ ಮತ್ತು ಫಿಶ್ ಮಳಿಗೆ ಲೈಸೆನ್ಸ್‍ಗೆ 10,500 ರೂ. ಶುಲ್ಕ ಪಾವತಿಸಬೇಕು ಎಂದು ನಿಯಮ ಹಾಕಿದೆ. ಈ ನಿಯಮದ ಪ್ರಕಾರವಾಗಿ ಪ್ರತಿ ಒಂದು ವರ್ಷಕ್ಕೆ ಈ ಶುಲ್ಕ ಪಾವತಿಸಬೇಕು ಎಂದು ಬಿಬಿಎಂಪಿ ತಿಳಿಸಿದ್ದು, ಮೊದಲು ಪರವಾನಿಗೆ ಪಡೆಯಲು ಇದೇ ಶುಲ್ಕ ಅನ್ವಯಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ದೇಶದಲ್ಲಿ ಕೋಮು ಪರಿಸ್ಥಿತಿ ಸೃಷ್ಟಿಸಲು ಬಿಜೆಪಿ ಯತ್ನ: ಶರದ್ ಪವಾರ್