ಬೆಂಗಳೂರು(ಆನೇಕಲ್): ಹೊಸತೊಡುಕು ಹಿನ್ನೆಲೆ, ನೇಕಲ್ ಪಟ್ಟಣದಲ್ಲಿ ಮಾಂಸ ಖರೀದಿ ಭರಾಟೆ ಭರ್ಜರಿಯಾಗಿದೆ. ಜಟ್ಕಾ ಕಟ್ ಅಂಗಡಿಗಳ ಮುಂದೆ ಕೇಸರಿ ಧ್ವಜ ಕಟ್ಟಿ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ.
Advertisement
ಜಟ್ಕಾ ಕಟ್ ಅಂಗಡಿಗಳ ಮುಂದೆ ಕೇಸರಿ ಧ್ವಜ ಕಟ್ಟಿ ಬನ್ನೇರುಘಟ್ಟದಲ್ಲಿ ಭರ್ಜರಿ ಮಾಂಸ ಮಾರಾಟ ಮಾಡುತ್ತಿದ್ದಾರೆ. ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಪಂಚಾಯಿತಿಯಿಂದ ನೋಟಿಸ್ ನೀಡಿ 650 ರೂ.ಗೆ ಮಾರಾಟ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಬನ್ನೇರುಘಟ್ಟದಲ್ಲಿ 800 ರೂ.ಗೆ ಮಟನ್ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಇದೆಲ್ಲದರ ನಡುವೆ ಕೇಸರಿ ಧ್ವಜ ಅಂಗಡಿಗಳ ಮುಂದೆ ರಾರಾಜಿಸುತ್ತಿದೆ.
Advertisement
Advertisement
ಹೊಸಕೋಟೆ ಮತ್ತು ಆನೇಕಲ್ ಪಟ್ಟಣದ ಹೊಸೂರು ರಸ್ತೆಯಲ್ಲಿರುವ ಮಾಂಸದ ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದ ಮಾಂಸ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ಹಬ್ಬದ ಬಾಡೂಟಕ್ಕೆ ಚಿಕನ್, ಮಟನ್ ಖರೀದಿಗೆ ಈ ಬಾರಿ ಆನೇಕಲ್ ಮತ್ತು ಹೊಸಕೋಟೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಂಸದ ಅಂಗಡಿಗಳನ್ನು ತೆರೆಯಲಾಗಿದೆ.