ಪೋಸ್ಟಿಂಗ್‌ ಪಡೆದ ಮೊದಲ ಸಲವೇ ಲಂಚ ಪಡೆಯುತ್ತಿದ್ದ ಮಹಿಳಾ ಅಧಿಕಾರಿ ಅರೆಸ್ಟ್‌

Public TV
1 Min Read
jharkhand women officer

ರಾಂಚಿ: ಮೊದಲ ಪೋಸ್ಟಿಂಗ್‌ನಲ್ಲೇ ಲಂಚ ಪಡೆಯುತ್ತಿದ್ದ ಜಾರ್ಖಂಡ್‌ನ (Jharkhand) ಸಹಕಾರಿ ಇಲಾಖೆಯ ಮಹಿಳಾ ಅಧಿಕಾರಿಯನ್ನು (Women Officer) ಭ್ರಷ್ಟಾಚಾರ ನಿಗ್ರಹ ದಳ (ACB) ಬಂಧಿಸಿದೆ. ಈ ಅಧಿಕಾರಿ 8 ತಿಂಗಳ ಹಿಂದೆಯಷ್ಟೇ ಕೊಡೆರ್ಮಾದಲ್ಲಿ ಸಹಾಯಕ ರಿಜಿಸ್ಟ್ರಾರ್‌ ಆಗಿ ಮೊದಲ ಪೋಸ್ಟಿಂಗ್‌ ಹಾಕಿಸಿಕೊಂಡಿದ್ದರು.

ಕೋಡೆರ್ಮಾ ವ್ಯಾಪಾರ ಸಹಕಾರ ಸಮಿತಿಯಿಂದ ಮಹಿಳಾ ಅಧಿಕಾರಿ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 10 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದಾಗ ಎಸಿಬಿ ತಂಡ ಆಕೆಯನ್ನು ಬಂಧಿಸಿದೆ. ಇದನ್ನೂ ಓದಿ: ಪರಿಹಾರ ಸಿಕ್ಕರೆ ಮಗನ ಕಾಲೇಜು ಶುಲ್ಕ ಕಟ್ಟಬಹುದು ಅಂತ ಬಸ್‌ಗೆ ಅಡ್ಡ ಬಂದ ಮಹಿಳೆ ಅಪಘಾತದಲ್ಲಿ ಸಾವು

ಲಂಚ ಕೇಳಿದ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯ ರಾಮೇಶ್ವರ ಪ್ರಸಾದ್ ಯಾದವ್, ಎಸಿಬಿ ಡಿಜಿಗೆ ದೂರು ನೀಡಿದ್ದರು. ಎಸಿಬಿ ದೂರನ್ನು ಪರಿಶೀಲಿಸಿ ಆಕೆಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯಲು ಬಲೆ ಬೀಸಲಾಗಿತ್ತು.

ಆಕೆ ಲಂಚ ತೆಗೆದುಕೊಳ್ಳುತ್ತಿರುವ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಎಸಿಬಿ ತಂಡ ಆಕೆಯನ್ನು ಹಜಾರಿಬಾಗ್‌ಗೆ ಕರೆದೊಯ್ದಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌; 4 ಉಗ್ರರ ಹತ್ಯೆ

ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಲಂಚ ಸ್ವೀಕರಿಸುತ್ತಿದ್ದ ವೇಳೆ ಶರ್ಮಾ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article