ರಾಂಚಿ: ಮೂರನೇ ಮದುವೆಯಾಗಿದ್ದಕ್ಕಾಗಿ 35 ವರ್ಷದ ವ್ಯಕ್ತಿಯನ್ನು ಆತನ ಸೋದರ ಮಾವನೇ ಹತ್ಯೆಗೈದಿರುವ ಘಟನೆ ಜಾರ್ಖಂಡ್‍ನ ಪೂರ್ವ ಸಿಂಗ್‍ಭೂಮ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಲಾಡು ಹೈಬೂರು ಅಸ್ಥಿಪಂಜರ ದುಮಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಕ್ಸಲಿಸಂ ನಿರ್ಜನ ಪ್ರದೇಶದಲ್ಲಿದ್ದರುವ ಬಾವಿಯಲ್ಲಿ ಭಾನುವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೃಢಸಂಕಲ್ಪ, ಜಾಣ್ಮೆ, ತಾಳ್ಮೆ ಇವು ಯಶಸ್ಸಿನ ಸೂತ್ರಗಳು: ಆನಂದ್ ಮಹೀಂದ್ರಾ
Advertisement
Advertisement
ಮಾರ್ಚ್ 16ರಂದು ಲಾಡು ಹೈಬೂರು ನಾಪತ್ತೆಯಾಗಿದ್ದರು. ಆದರೆ ಅವರ ಕುಟುಂಬಸ್ಥರು ಈ ಬಗ್ಗೆ ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ. ಮೂರನೇ ಮದುವೆಯಾಗಿದ್ದರಿಂದ ಲಾಡು ಹೈಬೂರು ಜೊತೆಗೆ ಅವರ ಸೋದರೆ ಮಾವ ಜಗಳವಾಡಿದ್ದರು. ಅಲ್ಲದೇ ಅವರಿಗೆ ಪ್ರಾಣಬೆದರಿಕೆಯನ್ನು ಸಹ ಹಾಕಲಾಗಿತ್ತು. ಇದಾದ ಬಳಿಕ ಲಾಡು ಹೈಬೂರು ಕಾಣೆಯಾಗಿದ್ದಾರೆ ಎಂಬ ಸತ್ಯ ತಿಳಿದುಬಂದಿದೆ.
Advertisement
Advertisement
ಆರಂಭದಲ್ಲಿ ಲಾಡು ಹೈಬೂರು ಬಗ್ಗೆ ಮಾತನಾಡಲು ಕುಟುಂಬಸ್ಥರು ಹಿಂದೇಟು ಹಾಕಿದ್ದರು. ಆದರೆ ನಂತರ ಅವರ ತಾಯಿ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಎಂ ತಮಿಳು ವನನ್ ಹೇಳಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಡು ಹೈಬರ್ ಅವರ ಸೋದರ ಮಾವ ಸೇರಿದಂತೆ ಮೂವರನ್ನು ಶುಕ್ರವಾರ ಬಂಧಿಸಲಾಗಿದ್ದು, ಘಟ್ಸಿಲಾ ಉಪವಿಭಾಗದ ಘೋರಬಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಮಡೋಟೋಲಿಯಾ ಗ್ರಾಮದ ಅವರ ಮನೆಯಿಂದ ಸುಮಾರು 10 ಕಿ.ಮೀ ದೂರದಲ್ಲಿ ನಕ್ಸಲೀಯರು ತುಂಬಿರುವ ಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ಅಲ್ಲದೇ ಬಂಧಿತ ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರಾಗಿದ್ದು, ಪ್ರಕರಣ ಕುರಿತಂತೆ ಮತ್ತಷ್ಟು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.