ರಾಂಚಿ: ಆದಿವಾಸಿಗಳ ನಾಡು ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಮತ್ತೊಮ್ಮೆ ಗೆಲುವಿನ ನಗಾರಿ ಬಾರಿಸಿದೆ. ಇ.ಡಿ ಕೇಸ್, ಬಂಧನ, ಬಂಡಾಯ, ಆಪರೇಷನ್ ಕಮಲ.. ಎದುರಾಳಿಗಳ ನಾನಾ ವ್ಯೂಹ.. ಹೀಗೆ ಹಲವು ಸವಾಲುಗಳನ್ನು ಎದುರಿಸಿದ ಜಾರ್ಖಂಡ್ ಮುಕ್ತಿ ಮೋರ್ಚಾ, ಮತಗಟ್ಟೆ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ವಿಜಯವನ್ನು ಸಾಧಿಸಿದೆ.
ಬಂಟಿ ಔರ್ ಬಬ್ಲಿ ಖ್ಯಾತಿಯ ಹೇಮಂತ್ ಸೊರೆನ್-ಕಲ್ಪನಾ ಜೋಡಿ ಸೂಪರ್ ಮ್ಯಾಜಿಕ್ ಮಾಡಿದೆ. ರಾಜಕೀಯ ಅಸ್ಥಿರತೆಗೆ ಕೇರಾಫ್ ಅಡ್ರೆಸ್ ಆಗಿರುವ ಜಾರ್ಖಂಡ್‌ನಲ್ಲಿ ಮತ್ತೊಮ್ಮೆ ಜೆಎಂಎಂ ಸ್ಪಷ್ಟವಾದ ಬಹುಮತ ಗಳಿಸಿ ಮತ್ತೊಮ್ಮೆ ಸರ್ಕಾರ ರಚನೆಗೆ ಸಜ್ಜಾಗುತ್ತಿದೆ.
ಇಲ್ಲಿ ವಲಸೆವಾದ.. ಇತರೆ ಸಮಸ್ಯೆಗಳನ್ನು ಪ್ರಸ್ತಾಪಿಸಿ ಚುನಾವಣೆ ಮಾಡಿದ್ದ ಬಿಜೆಪಿ ವಿರುದ್ಧ ಜನಾದೇಶ ಬಂದಿದೆ. ಮಾಜಿ ಸಿಎಂ ಚಂಪೈ ಸೊರೆನ್, ಹೇಮಂತ್ ಸೊರೆನ್ ಅತ್ತಿಗೆ ಸೀತಾ ಸೊರೆನ್ ಪಕ್ಷಾಂತರ ಬಿಜೆಪಿಗೆ ವರವಾಗಲಿಲ್ಲ. ಎಸ್‌ಟಿ-ಎಸ್‌ಸಿ ಮೀಸಲು ಕ್ಷೇತ್ರಗಳು ಜೆಎಂಎಂ ಮೈತ್ರಿಕೂಟದ ಕೈ ಹಿಡಿದಿವೆ.
ಜಾರ್ಖಂಡ್ ಫಲಿತಾಂಶ (81)
* ಐಎನ್‌ಡಿಐಎ- 56 (46)
* ಎನ್‌ಡಿಎ – 24 (25)
* ಇತರೆ – 01 (10)
ಪಕ್ಷವಾರು ಫಲಿತಾಂಶ
* ಜೆಎಂಎಂ – 34 (23.45%) (43 ರಲ್ಲಿ ಸ್ಪರ್ಧೆ)
* ಕಾಂಗ್ರೆಸ್ – 16 (15.50%) (30 ರಲ್ಲಿ ಸ್ಪರ್ಧೆ)
* ಬಿಜೆಪಿ – 21 (33.20%)
* ಇತರೆ – 8 (28%)