ರಾಂಚಿ: ಜಾರ್ಖಂಡ್ ಕ್ಯಾಬಿನೆಟ್ (Jharkhand Cabinet) ನಿರುದ್ಯೋಗಿಗಳಿಗೆ (Unemployed) ಅನುಕೂಲವಾಗುವಂತೆ ರಾಜ್ಯೋತ್ಸವದ ದಿನವಾದ ನವೆಂಬರ್ 15 ರಂದು ಮುಖ್ಯಮಂತ್ರಿ ಸಾರಥಿ ಯೋಜನೆ ಸೇರಿದಂತೆ ನಾಲ್ಕು ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಜಾರಿಗೆ ತರಲು ಅನುಮೋದನೆ ನೀಡಿದೆ.
ನವೆಂಬರ್ 15 ರಂದು ಕುಂತಿ ಮತ್ತು ರಾಂಚಿಯಲ್ಲಿ ಆಯೋಜಿಸಲಾದ ರಾಜ್ಯೋತ್ಸವ ದಿನಾಚರಣೆ ಸಮಾರಂಭಕ್ಕೆ ಆಗಮಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸೂಚಿಸಿದ್ದು, ಎಲ್ಲಾ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಕಳ್ಳತನ – ಯೂನಿಫಾರ್ಮ್, ಪಿಸ್ತೂಲ್ ಜೊತೆಗೆ ಕಿರಾತಕರು ಜೂಟ್
Advertisement
Advertisement
ಜಾರ್ಖಂಡ್ ಸರ್ಕಾರ ರಾಜ್ಯದಲ್ಲಿರುವ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವವರೆಗೆ ತಿಂಗಳಿಗೆ 1,000 ರೂಪಾಯಿ ಭತ್ಯೆ ನೀಡುವುದಾಗಿ ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಮಹಿಳೆಯರು ಮತ್ತು ವಿಶೇಷಚೇತನರಿಗೆ ತಿಂಗಳಿಗೆ 1,500 ರೂ. ಭತ್ಯೆ ಒದಗಿಸಲಾಗುವುದು. ಇದನ್ನೂ ಓದಿ: ಭಯಂಕರವಾಗಿ ಆಡಿದ್ರೂ ಭಾರತ ಸೋಲೋದಕ್ಕೆ ಅರ್ಹವಾಗಿತ್ತು- ಅಖ್ತರ್ ಟೀಕೆ
Advertisement
Advertisement
ಮತ್ತೊಂದು ಪ್ರಮುಖ ಯೋಜನೆಯೆಂದರೆ ಮುಖ್ಯಮಂತ್ರಿ ಶಿಕ್ಷಾ ಪ್ರೋತ್ಸಾಹನ್ ಯೋಜನೆಯಾಗಿದೆ. ವೈದ್ಯಕೀಯ, ಇಂಜಿನಿಯರಿಂಗ್, ಕ್ಲಾಟ್, ಹೋಟೆಲ್ ಮ್ಯಾನೇಜ್‍ಮೆಂಟ್ ಇತ್ಯಾದಿಗಳಿಗೆ ತಯಾರಾಗುತ್ತಿರುವ, ಆರ್ಥಿಕವಾಗಿ ದುರ್ಬಲರಾಗಿರುವ 8,000 ಆಕಾಂಕ್ಷಿಗಳು ಕೋಚಿಂಗ್‍ಗಾಗಿ ಹಣಕಾಸಿನ ನೆರವು ಪಡೆಯಲಿದ್ದಾರೆ. ದುರ್ಬಲ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬಂದವರಿಗೆ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿರುವವರಿಗೆ ತಿಂಗಳಿಗೆ 2,500 ರೂ. ನೀಡಲಾಗಿದೆ.