ಬೆಂಗಳೂರು | ಅಲ್-ಖೈದಾ ಜೊತೆ ನಂಟು – ಜಾರ್ಖಂಡ್ ಮೂಲದ ಮಹಿಳೆ ಬಂಧನ

Public TV
1 Min Read
Bengaluru Al Qaeda Gujarat ATS copy

ಬೆಂಗಳೂರು: ಅಲ್-ಖೈದಾ (Al Qaeda) ಜೊತೆ ನಂಟು ಹೊಂದಿದ್ದ ಜಾರ್ಖಂಡ್ (Jharkhand) ಮೂಲದ ಮಹಿಳೆಯನ್ನು ಗುಜರಾತ್ ಎಟಿಎಸ್ (Gujarat ATS) ಬೆಂಗಳೂರಿನಲ್ಲಿ ಬಂಧಿಸಿದೆ.

ಹೆಬ್ಬಾಳ (Hebbal) ಸಮೀಪದ ಮನೋರಾಯನಪಾಳ್ಯದಲ್ಲಿ ನೆಲೆಸಿದ್ದ ಶಮಾ ಪರ್ವೀನ್ ಬಂಧಿತ ಮಹಿಳೆ. ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಮೂಲವಾಧಿ ಸಂಘಟನೆಗಳ ಸಂಪರ್ಕ ಜಾಲಾಡಿದಾಗ ಪರ್ವೀನ್ ಬಗ್ಗೆ ಮಾಹಿತಿ ದೊರೆತಿದೆ. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದ ಎಟಿಎಸ್ ಆಕೆಯನ್ನು ಬಂಧಿಸಿ, ಆಕೆಯ ಮನೆಯಲ್ಲಿದ್ದ ಲ್ಯಾಪ್‌ಟಾಪ್ ಸೇರಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: J&K | ಬೆಳ್ಳಂಬೆಳಗ್ಗೆ ಅವಘಡ – ಸಿಂಧ್ ನದಿಗೆ ಬಿದ್ದ ITBP ಯೋಧರನ್ನು ಕರೆದೊಯ್ಯುತ್ತಿದ್ದ ಬಸ್

ಬಂಧನದ ಬಳಿಕ ಮಹಿಳೆಯನ್ನು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವರ್ಗಾವಣೆ ಪ್ರಮಾಣ ಪತ್ರ ಪಡೆದು ಗುಜರಾತ್‌ಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ಡಿ-ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ದೂರಿನ ಬಳಿಕವೂ ನಿಲ್ಲದ ಕಾಮೆಂಟ್ಸ್

ಕೆಲ ದಿನಗಳ ಹಿಂದೆ ಅಲ್-ಖೈದಾ ಗ್ಯಾಂಗ್‌ವೊಂದನ್ನು ಗುಜರಾತ್ ಎಟಿಎಸ್ ಪತ್ತೆಹಚ್ಚಿತ್ತು. ಈ ಗ್ಯಾಂಗ್‌ನ ಸಂಪರ್ಕ ಜಾಲವನ್ನು ಹುಡುಕಾಡಿದಾಗ ಪರ್ವೀನ್ ಬಗ್ಗೆ ಮಾಹಿತಿ ದೊರೆತಿದೆ. ಬಳಿಕ ಆಕೆಯ ಮನೆಗೆ ದಾಳಿ ನಡೆಸಿ ಮಂಗಳವಾರ ಬಂಧಿಸಲಾಯಿತು. ಅಲ್-ಖೈದಾ ಜೊತೆ ಮಹಿಳೆ ನಂಟು ಹೊಂದಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ – ಪಹಲ್ಗಾಮ್‌ ಪಾತಕಿ ಬೆನ್ನಲ್ಲೇ ಮತ್ತಿಬ್ಬರು ಉಗ್ರರು ಎನ್‌ಕೌಂಟರ್‌

Share This Article