Connect with us

Latest

ಜಾರ್ಖಂಡ್‍ನಲ್ಲಿ ಕಮಲಕ್ಕೆ ಹಿನ್ನಡೆ – ಸರ್ಕಾರ ನಮ್ಮದೇ ಎಂದ ಬಿಜೆಪಿ

Published

on

– ಪಕ್ಷೇತರರಿಗೆ ಡಿಮ್ಯಾಂಡ್ ಸೃಷ್ಟಿ

ರಾಂಚಿ: ಸಾಕಷ್ಟು ಕುತೂಹಲ ಮೂಡಿಸುತ್ತಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಚುನಾವಣೆಯಲ್ಲಿ ಮೈತ್ರಿಕೂಟದೊಂದಿಗೆ ಸ್ಪರ್ಧೆ ನಡೆಸಿದ್ದ ಕಾಂಗ್ರೆಸ್ ಸರಳ ಬಹುಮತದತ್ತ ಸಾಗಿದೆ.

ಬಿಜೆಪಿ ವಿರುದ್ಧ ಮೈತ್ರಿಕೂಟ ನಡೆಸಿದ್ದ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ),ಕಾಂಗ್ರೆಸ್, ಆರ್‍ಜೆಡಿ ಮೈತ್ರಿಕೂಟ ಮತ ಎಣಿಕೆ ಕಾರ್ಯದಲ್ಲಿ ಆರಂಭಿಕ ಮುನ್ನಡೆಯನ್ನು ಪಡೆದಿದೆ. ಸದ್ಯದ ಮಾಹಿತಿಯ ಅನ್ವಯ ಜೆಎಂಎಂ-ಕಾಂಗ್ರೆಸ್, ಆರ್‍ಜೆಡಿ ಮೈತ್ರಿಯ 39 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ 32 ಅಭ್ಯರ್ಥಿಗಳು ಮುನ್ನಡೆ ಪಡೆದಿದ್ದಾರೆ.

ಉಳಿದಂತೆ ಎಜೆಎಸ್‍ಯು (ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್) ಪಕ್ಷ 3, ಜೆವಿಎಂ (ಜಾರ್ಖಂಡ್ ವಿಕಾಸ್ ಮೋರ್ಚಾ) 3, ಇತರರು 4 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದಾರೆ. ಒಟ್ಟು 81 ಸ್ಥಾನಗಳಿರುವ ಜಾರ್ಖಂಡ್ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಬಹುಮತ ಸಾಧಿಸಲು 42 ಸದಸ್ಯರ ಬೆಂಬಲ ಬೇಕಿದೆ.

ಪ್ರಮುಖವಾಗಿ ಜಾರ್ಖಂಡ್ ಹಾಲಿ ಸಿಎಂ ರಘುವರ್ ದಾಸ್ ಸ್ಪರ್ಧಿಸಿರುವ ಜಮ್‍ಶೇಡ್‍ಪುರ ಪೂರ್ವ ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ. ಮತ ಎಣಿಕೆ ಆರಂಭಿಕ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ರಘುಬರ್ ದಾಸ್, ಆರಂಭಿಕ ಮುನ್ನಡೆಗಳು ಅಂತಿಮವಲ್ಲ. ಇನ್ನು ಹೆಚ್ಚು ಸುತ್ತುಗಳ ಮತ ಎಣಿಕೆ ಕಾರ್ಯ ಬಾಕಿ ಇದ್ದು, ನಾನು ಗೆಲ್ಲುವುದು ಮಾತ್ರವಲ್ಲ ರಾಜ್ಯದಲ್ಲಿ ಬಿಜೆಪಿ ನಾಯಕತ್ವದಲ್ಲಿ ಸರ್ಕಾರವನ್ನು ಮತ್ತೆ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2014ರ ಚುನಾವಣೆಯ ಫಲಿತಾಂಶವನ್ನು ಗಮನಿಸುವುದಾದರೆ, ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟ 25, ಬಿಜೆಪಿ 37, ಜೆವಿಎಂ 8, ಎಜೆಸ್‍ಯು 5 ಮತ್ತು ಇತರೇ 6 ಸ್ಥಾನಗಳು ಲಭಿಸಿತ್ತು.

Click to comment

Leave a Reply

Your email address will not be published. Required fields are marked *