ರಾಂಚಿ: ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಿದ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಜಾರ್ಖಂಡ್ ರಾಜ್ಯ ಸರ್ಕಾರ ಲಾಠಿ ಚಾರ್ಜ್ ಮಾಡಿಸಿದೆ.
ಜಾರ್ಖಂಡ್‍ನ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ರಘುಬರ್ ದಾಸ್ ಅವರ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ನಂತರ ಸಿಎಂ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನ ಮಾಡಿದ್ದಾರೆ ಅದ್ದರಿಂದ ಪೊಲೀಸರು ಮಹಿಳೆಯರು ಎಂಬುದನ್ನು ನೋಡದೆ ಮನಬಂದಂತೆ ಲಾಠಿ ಚಾರ್ಜ್ ಮಾಡಿದ್ದಾರೆ.
Advertisement
यह video आपको विचलित कर सकता है, पर यह झारखंड सरकार की सच्चाई है। राँची में आंगनवाड़ी सेवीकाओं पर झारखंड सरकार ने अपनी ताक़त दिखाई। इनका गुनाह यह था कि यह अपना मानदेय बढ़ाने की माँग पिछले 40 दिवसों से लगातार सरकार से कर रही थी। pic.twitter.com/XGor3dnSVS
— Prof. Gourav Vallabh (@GouravVallabh) September 24, 2019
Advertisement
ಜಾರ್ಖಂಡ್ ಪೊಲೀಸರು ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಈ ವಿಡಿಯೋದಲ್ಲಿ ಉನ್ನತ ಅಧಿಕಾರಿಯೊಬ್ಬರು ಮಹಿಳೆಯರಿಗೆ ಲಾಠಿಯಲ್ಲಿ ಮನಬಂದಂತೆ ಥಳಿಸುತ್ತಿರುವುದು ಕಂಡು ಬಂದಿದೆ. ಈ ಲಾಠಿ ಚಾರ್ಜ್‍ನಲ್ಲಿ ಹಲವಾರು ಮಹಿಳೆಯರಿಗೆ ಗಾಯವಾಗಿದ್ದು, ಒಂದು ಮಹಿಳೆಯ ಕೈ ಮುರಿದು ಹೋಗಿದೆ.
Advertisement
ಈ ವಿಡಿಯೋವನ್ನು ಕಾಂಗ್ರೆಸ್‍ನ ರಾಷ್ಟ್ರೀಯ ವಕ್ತಾರ ಗೌರವ್ ವಲ್ಲಭ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ರಾಂಚಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಜಾರ್ಖಂಡ್ ಸರ್ಕಾರ ತನ್ನ ಶಕ್ತಿಯನ್ನು ಪ್ರದರ್ಶನ ಮಾಡಿದೆ. ಕಳೆದ 40 ದಿನಗಳಿಂದ ತಮ್ಮ ಕೆಲಸವನ್ನು ಶಾಶ್ವತಗೊಳಿಸಿ ಎಂದು ಒತ್ತಾಯ ಮಾಡಿದ್ದಕ್ಕೆ ಸರ್ಕಾರ ನೀಡಿರುವ ಉತ್ತರವಿದು ಎಂದು ಬರೆದುಕೊಂಡಿದ್ದಾರೆ.
Advertisement
भाजपा राज में हक़ मांगना गुनाह है। झारखंड में आंगनबाड़ी कार्यकर्ताओं पर लाठियां बरसाना भाजपा सरकार की तानाशाही और नृशंस प्रवृत्ति को दर्शाता है। इन महिलाओं पर पड़ी एक-एक लाठी भाजपा हुकूमत के अंत का कारण बनेगी। pic.twitter.com/UTmBek15qP
— Congress (@INCIndia) September 25, 2019
ಈ ಕೃತ್ಯವನ್ನು ಖಂಡಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ನಮ್ಮ ಬೇಡಿಕೆಗೆ ಹೋರಾಡುವುದು ಬಿಜೆಪಿ ಸರ್ಕಾರದಲ್ಲಿ ಅಪರಾಧವಾಗಿದೆ. ಜಾರ್ಖಂಡ್‍ನಲ್ಲಿ ಅಂಗನವಾಡಿ ಕಾರ್ಯಕರ್ತರ ಮೇಲೆ ಮಾಡಿರುವ ಲಾಠಿ ಚಾರ್ಜ್ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಿರುವ ಬಿಜೆಪಿ ಆಡಳಿತ ಇದರಿಂದಲೇ ಅಂತ್ಯವಾಗಲಿದೆ ಎಂದು ಬಿಜೆಪಿ ಮೇಲೆ ಟ್ವೀಟ್ ದಾಳಿ ಮಾಡಿದೆ.